ಹುಬ್ಬಳ್ಳಿ: ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಬಗ್ಗೆ ನನಗೆ ದೊಡ್ಡ ಗೌರವ ಇದೆ ಎಂದು
ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹಾಗೂಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಏನೇ ಮಾತನಾಡಿದ್ದು ನಾನು ಆರ್ಶೀವಾದ ಎಂದು ಭಾವಿಸಿದ್ದೇನೆ ನನಗೆ ಶ್ರೀಮಠದ ಬಗ್ಗೆ ಹಾಗೂ ಅವರ ಬಗ್ಗೆ ಅಪಾರ ಗೌರವ ಇದೆ ಎಂದ ಅವರು ವೈಯಕ್ತಿಕ ಆರೋಪ ಕುರಿತು ನಾನು ಮಾತಾಡಲಾರೆ. ಅವರು ಏನೇ ಆರೋಪ ಮಾಡಿದರು ಅದು ನನಗೆ ಶ್ರೀ ರಕ್ಷೆ ಎಂದ ಅವರು ಒಂದು ವೇಳೆ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಮಾತುಕತೆಗೆ ಕರೆದರೆ ಮಾತನಾಡುವೆ ಎಂದರು
