Breaking News

ರೌಡಿ ನವೀನ ಗಾಂಗಾಜಿ ಗಡಿಪಾರು

Spread the love

ಹುಬ್ಬಳ್ಳಿ: ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ ಧಾರವಾಡ ಶಹರ ಠಾಣಾ ವ್ಯಾಪ್ತಿಯ ರೌಡಿ ನವೀನ ಗಾಂಗಾಜಿಯನ್ನು ಚಿಕ್ಕಮಗಳೂರು ಜಿಲ್ಲೆಗೆ ಆರು ತಿಂಗಳು ಗಡಿಪಾರು ಮಾಡಲಾಗಿದೆ.
ರೌಡಿ ನವೀನ, ಯುವಕರ ಗುಂಪು ಕಟ್ಟಿಕೊಂಡು ಬಡಜನರ ಮೇಲೆ ಹಲ್ಲೆ ಮಾಡುವುದು, ಸಾರ್ವಜನಿಕರ ಜೊತೆ ತಂಟೆ–ತಕರಾರು ಮಾಡಿ ಶಾಂತಿಗೆ ಭಂಗ ತರುವುದು, ಜೀವ ಬೆದರಿಕೆ ಹಾಕುವುದು, ಹಣ ವಸೂಲಿ–ಸುಲಿಗೆ–ಕಳವು ಮಾಡುವುದು, ಮಟ್ಕಾ ದಂಧೆಗೆ ಪ್ರೋತ್ಸಾಹ ನೀಡುವುದು ಸೇರಿದಂತೆ ಅನೇಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ. ಇವನ ವಿರುದ್ಧ ಹುಬ್ಬಳ್ಳಿ ಶಹರ, ಹುಬ್ಬಳ್ಳಿ ಉಪನಗರ, ಬೆಂಡಿಗೇರಿ, ಘಂಟಿಕೇರಿ ಹಾಗೂ ಕೇಶ್ವಾಪುರ ಪೊಲೀಸ್ ಠಾಣೆಗಳಲ್ಲಿ 10 ಪ್ರಕರಣಗಳು ದಾಖಲಾಗಿವೆ. ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಗಡಿಪಾರು ಆದೇಶ ಮಾಡಲಾಗಿದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.


Spread the love

About Karnataka Junction

    Check Also

    ದೀನ್ ದಯಾಳ್ ಉಪಾಧ್ಯಾಯ ವಿದ್ಯಾರ್ಥಿ ವಸತಿ ನಿಲಯಗಳ ಕಟ್ಟಡ ಕಾಮಗಾರಿ ಪರಿಶೀಲಿಸಿದ ಅರವಿಂದ ಬೆಲ್ಲದ

    Spread the loveದೀನ್ ದಯಾಳ್ ಉಪಾಧ್ಯಾಯ ವಿದ್ಯಾರ್ಥಿ ವಸತಿ ನಿಲಯಗಳ ಕಟ್ಟಡ ಕಾಮಗಾರಿ ಪರಿಶೀಲಿಸಿದ ಅರವಿಂದ ಬೆಲ್ಲದ ಧಾರವಾಡ :ನಗರದ …

    Leave a Reply

    error: Content is protected !!