ಹುಬ್ಬಳ್ಳಿ: ನನ್ನ ಸಭಾಪತಿ ಅಧಿಕಾರದ ಅವಧಿಯಲ್ಲಿಯೇ 11 ಜನ ವಿಧಾನ ಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಕಿ ನೀಡಿದ್ದು, ಈಗ ಕರ್ನಾಟಕ ಇತಿಹಾಸದಲ್ಲಿಯೇ ಮತ್ತೊಂದು ದಾಖಲೆಯಾಗಿದೆ. ಅಲ್ಲದೇ ಎರಡು ಮೂರು ದಿನದಲ್ಲಿ ಮತ್ತೊಬ್ಬ ಸದಸ್ಯ ರಾಜೀನಾಮೆ ನೀಡಲಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿಂದು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಈಗಾಗಲೇ ಎಂಟು ಬಾರಿ ಗೆಲುವು ಸಾಧಿಸಿ ದಾಖಲೆ ಮಾಡಿದ್ದೇ. ಆದರೆ ಈಗ ನಾನು ಸಭಾಪತಿ ಆಗಿರುವಾಗಲೇ ಹನ್ನೊಂದು ಜನ ವಿಧಾನ ಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರು.
2018ರಲ್ಲಿ ವಿ.ಎಸ್.ಉಗ್ರಪ್ಪ, 2021ರಲ್ಲಿ ಶ್ರೀನಿವಾಸ ಮಾನೆ, ಸಿ.ಆರ್.ಮನೋಹರ, 2022ರಲ್ಲಿ ಸಿ.ಎಂ.ಇಬ್ರಾಹಿಂ, 2023ರಲ್ಲಿ ಪುಟ್ಟಣ್ಣ, ಬಾಬುರಾವ್ ಚಿಂಚನಸೂರ್, ಆರ್.ಶಂಕರ್, ಸವದಿ ಲಕ್ಷ್ಮಣ, ಆಯನೂರು ಮಂಜುನಾಥ್, 2024ರಲ್ಲಿ ಜಗದೀಶ್ ಶೆಟ್ಟರ್, ಮರಿತಿಬ್ಬೇಗೌಡ ಸೇರಿದಂತೆ ಒಟ್ಟು ಹನ್ನೊಂದು ಜನರು ರಾಜೀನಾಮೆ ನೀಡಿದ್ದಾರೆ.
ಇನ್ನೂ ಎರಡು ದಿನಗಳಲ್ಲಿ ಇನ್ನೊಬ್ಬ ಸದಸ್ಯ ರಾಜೀನಾಮೆ ನೀಡಲಿದ್ದಾರೆ. ಎರಡು ವಿಧವಾಗಿ ರಾಜೀನಾಮೆ ನೀಡಬಹುದಾಗಿದೆ. ಅದು ಹೇಗೆ ಇರಲಿ ಒಬ್ಬ ಸದಸ್ಯ ಮಾತ್ರ ರಾಜೀನಾಮೆ ನೀಡುವುದು ಶತಸಿದ್ಧ ಎಂದು ಅವರು ಮಾಹಿತಿ ನೀಡಿದರು.