ಹುಬ್ಬಳ್ಳಿ: ಬೆಂಗಳೂರಿನ ಚಿಕ್ಕಪೇಟೆಯ ಒಂದು ಓಣಿಯಲ್ಲಿ ಮೊಬೈಲ್ ಅಂಗಡಿಯಲ್ಲಿ ಸಹಜವಾಗಿಯೇ ಹನುಮಾನ್ ಚಾಲೀಸ್ ಸಂಬಂಧಿಸಿದಂತೆ ಹಾಡು ಹಾಕಿದ್ದು ಅಲ್ಲಿ ಅಕಸ್ಮಾತ್ತಾಗಿ ಮುಸಲ್ಮಾನ ಗುಂಡಾಗಳು ದಾಳಿ ಮಾಡಿದ್ದು ಅದನ್ನು ಬಚಾವ್ ಮಾಡುವ ಸಲುವಾಗಿ ಬೇರೆ ಬೇರೆ ಕಥ ಕಟ್ಟತಾ ಇದ್ದಾರೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆರೋಪ ಮಾಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಈಗ ಮುಸ್ಲಿಮ್ ರ ರಂಜಾನ್ ಹಬ್ಬದಲ್ಲಿ ಹಿಂದುಗಳು ಪೂಜೆ ಮಾಡಬಾರದಾ ಹಾಡು ಹಾಕಬಾರದು ಇದು ಪಾಕಿಸ್ತಾನನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಲ್ಲಿ ಬೇಕಾದ ಮಾಡುವುದು ಇಲ್ಲಿ ನಡೆಯಲ್ಲ ಡಾ. ಅಂಬೇಡ್ಕರ್ ಸಂವಿಧಾನ ಇದೆ ಕಾನೂನು ಇದೆ. ಆ ಬದ್ಧತೆ ಬಿಟ್ಟು ನಡೆಯುವುದಿಲ್ಲ ಎಂದರು. ಈಗಾಗಲೇ ಅಲ್ಲಿ ದೊಡ್ಡ ಪ್ರತಿಭಟನೆ ಆಗಿದೆ.ಇಲ್ಲಿ ಗೂಂಡಾಗಿರಿ ನಡೆಯಲ್ಲ. ಹಾಗಾಗಿ ಇದನ್ನು ನಾನು ಖಂಡಿಸುತ್ತೇವೆ. ಕಾಂಗ್ರೆಸ್ ಸರಕಾರ ಇದ್ದ ಕಾರಣ ಇವರ ಆಟ ನಡೆತಾ ಇದೆ ಇವರು ಬಾಲ ಬಿಚ್ಚತಾ ಇದ್ದಾರೆ. ಈ ರೀತಿಯ ಪ್ರವೃತ್ತಿ ಎದುರಿಸಲು ಹಿಂದು ಸಮಾಜ ಸಿದ್ಧವಾಗಿದೆ. ನೀವು ರಂಜಾನ್ ಆಚರಣೆ ಮಾಡಿ ಆದರೆ ನೀವು ನಮಗೆ ತೊಂದರೆ ಕೊಟ್ಟರೆ ಇನ್ನಮೇಲೆ ಬಿಡಲ್ಲ. ಇಂತಹ ಕೃತ್ಯ ನಿರಂತರವಾಗಿ ನಡೆತಾ ಇದೆ ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಬನ್ನಿ ಹಬ್ಬದ ಪ್ರಯುಕ್ತ ಪಲ್ಲಕ್ಕಿ ತೆಗೆದುಕೊಂಡು ಹೋಗಬಾರದು ಅಂತಾ ಹೇಳತಾ ಇದ್ದಾರೆ. ಮೇಲಿಂದ ಮೇಲೆ ನಡೆತಾ ಇದು ಕಾಂಗ್ರೆಸ್ ನಿಂದಲೇ ಕುಮ್ಮಕ್ಕು. ಮುಸ್ಲಿಂನಿಂದಲೇ ಗೆದ್ದೇವೆ ಅಂಹಬಾ ಇದೆ. ನಾಳೆ ಲೋಕಸಭಾ ಚುನಾವಣೆಆಗತಾ ಇದೆ ಆ ನಂತರ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದರು. ಶ್ರೀರಾಮ ಸೇನೆ ವತಿಯ ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನ ಆರಂಭ ಮಾಡಲಾಗಿದೆ ಎಂದರು.