Breaking News

ಬೆಳಗಾವಿಯಿಂದ ನನಗೆ ಟಿಕೆಟ್ ಸಿಗುತ್ತೆ, ಸ್ಪರ್ಧಿಸ್ತೇನೆ- ಶೆಟ್ಟರ್

Spread the love

ಹುಬ್ಬಳ್ಳಿ:ಬೆಳಗಾವಿಯಿಂದ ನನಗೆ ಟಿಕೆಟ್ ಸಿಗುತ್ತೆ, ಸ್ಪರ್ಧಿಸ್ತೇನೆ ಎಂದು
ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿದರು.
.ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು
ಇವತ್ತು ಅಥವಾ ನಾಳೆ ಚುನಾವಣಾ ಸಮಿತಿ ಬೈಟಕ್ ಮಾಡಿ ಅಭ್ಯರ್ಥಿ ಫೈನಲ್ ಮಾಡ್ತಾರೆ ಳಗಾವಿಯಿಂದ ನನಗೆ ಟಿಕೆಟ್ ಸಿಗುತ್ತೆ, ಸ್ಪರ್ಧಿಸ್ತೇನೆ ಇದರಲ್ಲಿ ಸಂಶಯ ಬೇಡಾ.
ಬೆಳಗಾವಿಯ ಪ್ರಮುಖರ ಜೊತೆ ಎರಡ್ಮೂರು ಬಾರಿ ಮಾತಾಡಿದ್ದೇನೆ
ಎಲ್ಲರೂ ಸೇರಿ ಚುನಾವಣೆ ಮಾಡೋಣ‌ ಎಂದು ಹೇಳಿದ್ದಾರೆ
ನಾಳೆಯವರೆಗೆ ಅಧಿಕೃತವಾಗಿ ಘೋಷಣೆಯಾಗುವ ವಿಶ್ವಾಸವಿದೆ
ಟಿಜೆಟ್ ಅಧಿಕೃತ ಘೋಷಣೆಯ ನಂತರ ಬೆಳಗಾವಿಗೆ ಬರುವಂತೆ ಅಲ್ಲಿನ ಮುಖಂಡರು ಹೇಳಿದ್ದಾರೆ
ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಬೆಳಗಾವಿಗೆ ಹೋಗಿ ಪ್ರಚಾರ ಪ್ರಾರಂಭಿಸುತ್ತೇನೆ ಎಂದರು. ಇನ್ನು ಮುಖಂಡರಾದ ಅಭಯ್ ಪಾಟೀಲ್, ಕೋರೆ, ಬೆನಕೆ, ಕಡಾಡಿ ಜೊತೆ ಮಾತಾಡಿದ್ದೇನೆಅಭಯ್ ಪಾಟೀಲ್ ಜೊತೆ ನಿನ್ನೆ ಸಂಜೆ ಮಾತಾಡಿದ್ದೇನೆ ಎಲ್ಲರೂ ಸೇರಿ ಚುನಾವಣೆ ಮಾಡೋಣ ಅಂದಿದ್ದಾರೆ, ಮತ್ತೊಮ್ಮೆ ಮೋದಿಯವರು ಪ್ರಧಾನಿ ಆಗಬೇಕು ಎಂಬುದು ಎಲ್ಲರ ಆಶಯ ಆಗಿದೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ
ಮಹೇಶ್ ಟೆಂಗಿನಕಾಯಿ ತಮ್ಮ ಕೆಲಸಕ್ಕೆ ದೆಹಲಿಗೆ ಹೋಗಿರಬಹುದು
ನನಗೆ ಟಿಕೆಟ್ ತಪ್ಪಿಸುವ ಕುತಂತ್ರ, ಷಡ್ಯಂತ್ರ ನಡೆದಿದೆ ಎಂದು ನಾನು ಒಪ್ಪಲ್ಲ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ, ಎನ್‌ಡಿಎ 400 ಪ್ಲಸ್ ಗೆಲ್ಲುವ ವಾತಾವರಣವಿದೆ
ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಪಿಟೇಷನ್ ಇದೆ, ಹೀಗಾಗಿ ಸ್ವಲ್ಪ ಅಸಮಾಧಾನ ಸಹಜ ಎಂದರು
ಎಲ್ಲಾ ನಿರ್ಧಾರಗಳನ್ನು ದೆಹಲಿಯಲ್ಲಿ ನಮ್ಮ‌ ನಾಯಕರು ಮಾಡ್ತಾರೆ
ಟಿಕೆಟ್ ಹಂಚಿಕೆ ವಿಚಾರದಲ್ಲಿ ಇಂತಹವರ ಕೈವಾಡವಿದೆ ಅಂತಾ ಹೇಳೋದು ತಪ್ಪು
ಬಿ.ಎಲ್‌. ಸಂತೋಷ್ ವಿಚಾರದಲ್ಲಿ ನಾನು ಏನೂ ಕಮೆಂಟ್ ಮಾಡಲ್ಲಾ
ಬಿಜೆಪಿಗೆ ಬಂದ ಮೇಲೆ ಬಿ.ಎಲ್. ಸಂತೋಷ್ ಜೊತೆ ಒಮ್ಮೆಯೂ ಮಾತುಕತೆಯಾಗಿಲ್ಲ


Spread the love

About Karnataka Junction

    Check Also

    ಹಿಂದೂ ಹಬ್ಬಗಳು ಬಂದಾಗ ಮಾತ್ರ ಕಾಂಗ್ರೆಸ್ಸಿಗೆ ಕಾನೂನು ನೆನಪಾಗುತ್ತೆ: ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್

    Spread the loveಬೆಂಗಳೂರು: ಕಾಂಗ್ರೆಸ್‌ನವರಿಗೆ ಹಿಂದೂ ಹಬ್ಬ ಬಂದಾಗ ಮಾತ್ರ ನೀತಿ, ನಿಯಮ, ಕಟ್ಟಳೆಗಳು ನೆನಪಿಗೆ ಬಂದುಬಿಡುತ್ತವೆ! ತಮ್ಮ ಬಾಂಧವರು …

    Leave a Reply

    error: Content is protected !!