ಶೆಟ್ಟರ್ ಗೋ ಬ್ಯಾಕ್ ಚಳುವಳಿ ಯಶಸ್ವಿ? ರಾಜ್ಯ ನಾಯಕರ‌ ಮೇಲೆ ಒತ್ತಡ ಹೇರಲು ಬೆಂಗಳೂರನತ್ತ ಬೆಳಗಾವಿ ಕಾರ್ಯಕರ್ತರು

Spread the love

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಣೆ ಬರಹ ಸರಿ ಇಲ್ಲ ಅಂತಾ ಕಾಣಿಸುತ್ತದೆ.
ಬೆಳಗಾವಿ ಲೋಕಸಭಾ ಚುನಾವಣೆಯ ಭಾರತೀಯ ಜನತಾ ಪಕ್ಷದಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ‌ ಸಿಎಂ ಜಗದೀಶ್ ‌ಶೆಟ್ಟರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಗೋ ಬ್ಯಾಕ್ ಅಭಿಯಾನ ಯಶಸ್ವಿಯಾಗಿದೆ ಎಂದು ಎಂಬ ಮಾತು ಈಗ ರಾಜಕೀಯ ವಲಯದಲ್ಲಿ ಕೇಳಿ ಬರತಾ ಇದೆ.
ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗಲು ಜಿಲ್ಲಾ ನಾಯಕರು ಬೆಳಗಾವಿಯಿಂದ ಇಂದು ಪ್ರಯಾಣ ಬೆಳೆಸಿರುವುದು ಗಮನ ಸೆಳೆದಿದೆ.
ಬೆಳಗಾವಿಯಿಂದಲೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದರು ಜೊತೆಗೆ ವ್ಯಂಗ್ಯಭರಿತ ಹಾಡು ಕಟ್ಟಿದ್ದರು.
ಅಲ್ಲದೆ, ಜಗದೀಶ್ಶೆಟ್ಟರ್ ಸ್ಪರ್ಧೆಗೆ ಸ್ಥಳೀಯ ಬಿಜೆಪಿಯ ಹಿರಿ-ಕಿರಿಯ ನಾಯಕರೂ ಸಹ ವಿರೋಧ ವ್ಯಕ್ತಪಡಿಸಿದ್ದರು.
ಈಗಾಗಲೇ ರಾಜ್ಯ ನಾಯಕರಿಂದ ಸಮಯಾವಕಾಶ ಪಡೆದಿರುವ ಬೆಳಗಾವಿ ನಾಯಕರು ಬಿ.ಎಸ್ .ಯಡಿಯೂರಪ್ಪ, ರಾಜ್ಯ ಚುನಾವಣೆ ಉಸ್ತುವಾರಿ ರಾಧಾ ಮೋಹನ‌ದಾಸ್ ಅಗರವಾಲ್ , ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಸಂಘಟನಾ ಕಾರ್ಯದರ್ಶಿ ಜೆ.ವಿ. ರಾಜೇಶ ಭೇಟಿ ಮಾಡಿ, ಕೊಟ್ಟರೆ ಸ್ಥಳೀಯರಿಗೇ ಟಿಕೆಟ್ ಕೊಡುವಂತೆ ರಾಜ್ಯ ನಾಯಕರಿಗೆ ಮನವರಿಕೆ ಮಾಡಿ ಮನವಿ ಮಾಡಲಿದ್ದಾರೆ.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಶಾಸಕ ಅನಿಲ ಬೆನಕೆ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಸೇರಿ 8ಕ್ಕೂ ಅಧಿಕ ನಾಯಕರಿಂದ ರಾಜ್ಯ ನಾಯಕರ ಭೇಟಿ ನಡೆದಿದೆ.
ರಾಜ್ಯ ನಾಯಕರ ಪ್ರತಿಕ್ರಿಯೆ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿರುವ ಜಿಲ್ಲಾ ನಾಯಕರು. ಸಕಾರಾತ್ಮಕ ಸ್ಪಂದನೆ ಸಿಕ್ಕರೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲೂ ಸಹ ಸಿದ್ಧತೆ ನಡೆಸಿರುವ ಜಿಲ್ಲಾ ನಾಯಕರು, ದೆಹಲಿಗೆ ಹೋಗಿ ಜೆ.ಪಿ. ನಡ್ಡಾ ಇಲ್ಲವೇ ಬಿ. ಎಲ್. ಸಂತೋಷ ಭೇಟಿಗೆ ಪ್ರಯತ್ನಿಸಲಿದ್ದಾರೆ‌.


Spread the love

Leave a Reply

error: Content is protected !!