Breaking News

ಮೋದಿ ಮೂರುಸಾವಿರ ಕೊಡತ್ತಾರೆ ಅಂಚೆ‌ ಕಚೇರಿಗೆ ಮುಂದೆ ಜಮಾಹಿಸಿದ ಜನ

Spread the love

ಹುಬ್ಬಳ್ಳಿ: ಸರ್ಕಾರದ ಉಚಿತ ಯೋಜನೆಗಳು ಅಂದರೆ ಹಾಗೇನೆ ಜನಾ ಇದ್ದೋನೋ ಬಿದ್ದನೋ ಅಂತಾ ಓಡೋ ಒಡೋ ಬರುತ್ತಾರೆ. ‌ಅದು ಸತ್ಯನಾ ಮಿತ್ಯಾನಾ ಅನ್ನಲ್ಲಾ. ಆದರೆ ಈಗ ಇನ್ನೊಂದು ಗಾಸಿಪ್ ಹರಡಿದ್ದು ಹುಬ್ಬಳ್ಳಿಯ ಜನ ಅಂಚೆ ಕಚೇರಿ ಮುಂದೆ ಜಮಾಯಿಸತಾ ಇದ್ದಾರೆ.
ಹೌದು…
ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆಯಡಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್ ಕಾರ್ಡ್ ಕುಟುಂಬದ ಮಹಿಳೆಯರಿಗೆ ₹3 ಸಾವಿರ ಜಮಾ ಮಾಡಲಾಗುವುದು’ ಎಂಬ ವದಂತಿ ಹರಡಿ ನಗರದ ಅಂಚೆ ಕಚೇರಿಗಳಿಗೆ ಮಹಿಳೆಯರು ಮುಗಿಬಿದ್ದ ದೃಶ್ಯ ಕಂಡು ಬಂದವು.
ಬೆಳಿಗ್ಗೆಯಿಂದಲೇ ನಗರದ ವಿವಿಧ ಅಂಚೆಕಚೇರಿಗಳ ಎದುರು ಮಹಿಳೆಯರು ಸಾಲುಗಟ್ಟಿ ನಿಂತರು. ಸ್ಟೇಷನ್ ರಸ್ತೆಯಲ್ಲಿರುವ ಮುಖ್ಯ ಅಂಚೆಕಚೇರಿ ಎದುರು ರಾತ್ರಿ 8ರವರೆಗೆ ಸಾಲು ಇತ್ತು. ಹಳೇಹುಬ್ಬಳ್ಳಿ, ಗಿರಣಿಚಾಳ, ಉದ್ಯಮನಗರ, ನವಗರ, ಟ್ರಾಫಿಕ್ ಐಲ್ಯಾಂಡ್ ಉಪ ಅಂಚೆ ಕಚೇರಿಗಳ ಎದುರು ಸಹ ಇದೇ ವಾತಾವರಣ ಇತ್ತು. ಪ್ರಧಾನಿ ನರೇಂದ್ರ
ಮೋದಿ ಕಾರ್ಡ್, ಮೋದಿ ಖಾತೆ ಎಂಬ ಯಾವುದೇ ಯೋಜನೆ ಅಂಚೆ ಕಚೇರಿಯಲ್ಲಿ ಇಲ್ಲ’ ಎಂದು ಅಂಚೆ ಕಚೇರಿ ಸಿಬ್ಬಂದಿ ಪದೇ ಪದೇ ಹೇಳಿದರೂ, ‘ನೀವು ಸುಳ್ಳು ಹೇಳುತ್ತೀರಿ. ನಾವು ಉಳಿತಾಯ ಖಾತೆ ತೆರೆಯಲೇಬೇಕು’ ಎಂದರು.
‘ಮೋದಿ ಗ್ಯಾರಂಟಿ ಯೋಜನೆ ಘೋಷಿಸಿದ್ದಾರಂತೆ. ಉಳಿತಾಯ ಖಾತೆ ಮಾಡಿಸಿದರೆ, ಮೂರು ತಿಂಗಳಿಗೊಮ್ಮೆ ₹3 ಸಾವಿರ ಹಾಕುತ್ತಾರಂತೆ. ಅದಕ್ಕೆ ಬೆಳಿಗ್ಗೇನೆ ಬಂದು ನಿಂತಿರುವೆ’ ಜನರು ಹೇಳಿದರು.
‘ಮೋದಿ ಕಾರ್ಡ್ ಮಾಡಿಸಿದರಷ್ಟೇ ₹ 3 ಸಾವಿರ ಹಾಕುತ್ತಾರಂತೆ. ನಮ್ಮ ಮನೆ ಅಕ್ಕಪಕ್ಕದವರು ಕಾರ್ಡ್ ಮಾಡಿಸಿದ್ದಾರೆ. ಶನಿವಾರದ ಒಳಗ ಕಾರ್ಡ್ ಮಾಡಿಸಿದರಷ್ಟೇ ಹಣ ಬರುತ್ತಂತೆ’ ಎಂದು ಜನರು ನಂಬಿದ್ದಾರೆ .
‘ಅಂಚೆ ಕಚೇರಿಯಲ್ಲಿ ಮಹಿಳೆಯರು ಮೋದಿ ಖಾತೆ ತೆರೆದರೆ, ಮೂರು ತಿಂಗಳಿಗೊಮ್ಮೆ ₹3 ಸಾವಿರ ಖಾತೆಗೆ ಜಮಾ ಆಗುವುದು ಎಂದು ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅದನ್ನು ನಂಬಿದ ಮಹಿಳೆಯರು ಬೆಳಿಗ್ಗೆಯಿಂದ ಅಂಚೆ ಕಚೇರಿಗಳ ಎದುರು ಜಮಾಯಿಸಿದ್ದಾರೆ. ಅಂಚೆ ಕಚೇರಿಗಳ ಎದುರು ನೋಟಿಸ್‌ ಅಂಟಿಸಿ, ಸುಳ್ಳು ಸುದ್ದಿ ನಂಬಬೇಡಿ ಎಂದಿದ್ದೇವೆ. ಆದರೂ ಮಹಿಳೆಯರು ನಮ್ಮ ಮಾತು ಒಪ್ಪುತ್ತಿಲ್ಲ’ ಎಂದು ಪ್ರಧಾನ ಅಂಚೆ ಕಚೇರಿಯ ಹಿರಿಯ ಪೋಸ್ಟ್ ಕಚೇರಿ ಅಧಿಕಾರಿಗಳು
ತಿಳಿಸಿದರು.
ಎರಡು ವರ್ಷದ ಹಿಂದೆಯೇ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಯೋಜನೆ ಪರಿಚಯಿಸಿದ್ದೇವೆ. ಅದು ಉಳಿತಾಯ ಖಾತೆಯಾಗಿದ್ದು, ಯಾರು ಬೇಕಾದರೂ ₹200 ನೀಡಿ ಖಾತೆ ತೆರೆಯಬಹುದು. ವದಂತಿ ನಂಬಿ ಅಂಚೆ ಕಚೇರಿ ಎದುರು ದಿನಕ್ಕೆ ಹುಬ್ಬಳ್ಳಿ ನಗರದ ವಿವಿಧ ಬಡಾವಣೆಯ ಒಂದು ಸಾವಿರ ಮಹಿಳೆಯರು ಖಾತೆ ತೆರೆಯಲು ಬರುತ್ತಿದ್ದಾರೆ. ಗರಿಷ್ಠ 400 ಖಾತೆ ತೆರೆಯಬಹುದು. ವಿವಿಧ ವಿಭಾಗಗಳ ಸಿಬ್ಬಂದಿಯನ್ನು ಬಳಸಿಕೊಂಡು ರಾತ್ರಿ 11ರವರೆಗೂ ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.


Spread the love

About Karnataka Junction

    Check Also

    ಗ್ರಾಹಕರಲ್ಲಿ ಗುಣಮಟ್ಟದ ವಸ್ತುಗಳ ಜಾಗೃತಿಗಾಗಿ ಕ್ವಾಲಿಟಿ ವಾಕ್‌

    Spread the loveಹುಬ್ಬಳ್ಳಿ: ಇಲ್ಲಿಯ ಬ್ಯೂರೋ ಆಫ್ ಇಂಡಿಯನ್ ಸ್ಟಶ್ಚಯಂಡರ್ಡ್ಸ್ (ಬಿಐಎಸ್‌) ಶಾಖೆ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಕ್ವಾಲಿಟಿ ವಾಕ್‌ಗೆ …

    Leave a Reply

    error: Content is protected !!