ಹುಬ್ಬಳ್ಳಿ: ಸತತ ಪರಿಶ್ರಮ ಹಾಗೂ ಶ್ರದ್ಧೆ ಇದ್ದರೆ ಏನ್ನನ್ನಾದರು ಸಾಧನೆ ಮಾಡಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೆ.ಜಿ. ಶಾಂತಿ ಸಲಹೆ ನೀಡಿದರು.
ಜೆಸಿ ನಗರದಕರ್ನಾಟಕ ವಾಣಿಜ್ಯದ್ಯೋದಮ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತನ್ನ ನಂಬಿದ ಕುಟುಂಬಕ್ಕಾಗಿ ಜೀವನವನ್ನೇ ಮಹಿಳೆಯರು ತ್ಯಾಗ ಮಾಡುತ್ತಾರೆ. ಇದರ ಜೊತೆಗೆ ಯಾವುದೇ ಸವಾಲು ಕೊಟ್ಟರೂ ಸರಿಯಾಗಿ ನಿಭಾಯಿಸುತ್ತಾರೆ. ಇದರ ಜತೆಗೆ ಆರೋಗ್ಯದ ಕಡೆಗೂ ಮಹಿಳೆಯರು ಗಮನ ಹರಿಸಬೇಕು. ಅಡೆತಡೆ ಬಂದರೂ ಹೆದರದೇ ಹಿಮ್ಮೆಟ್ಟಿಸಬೇಕು ಎಂದು ಸಲಹೆ ನೀಡಿದರು.
ಉದ್ಯಮಿ ಕಬಿತಾ ಸಿಂಗ್ ಮಾತನಾಡಿ, ಜೀವನ ಸಾಗಿಸಲು ಕೇವಲ ಉದ್ಯಮ ಆಯ್ಕೆ ಮಾಡಿಕೊಂಡರೆ ಸಾಲದು ಬದ್ಧತೆ ಮುಖ್ಯ ಎಂದರು.
ಹೆಸ್ಕಾಂ ಎಸ್‌ಇ ಶರಣಮ್ಮ ಜಂಗಿನ್ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಮಹಿಳೆಯರದೇ ಆಡಳಿತ ಇದರಿಂದ ಗೊತ್ತಾಗುತ್ತದೆಮಹಿಳೆಯರೂ ಯಾವುದರಲ್ಲಿಯೂ ಕಡಿಮೆ ಇಲ್ಲವೆಂಬುದನ್ನು ಸಾಬೀತುಪಡಿಸಬೇಕು ಎಂದ ಅವರು ಮಹಿಳೆಯರ ಸಾಧನೆಗೆ ಮನೆಯವರು ಸಹಕಾರ ಕೊಡಬೇಕು ಎಂದರು.
ಕೆಸಿಸಿಐ ಮಹಿಳಾ ಘಟಕದ ಅಧ್ಯಕ್ಷೆ ನಿಪಾ ಮೆಹ್ರಾ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕೆ.ಜಿ. ಶಾಂತಿ, ಕಬಿತಾ ಸಿಂಗ್, ಶರಣಮ್ಮ ಜಂಗಿನ್, ಡಾಲಿ ಜೈನ್ ಅವರನ್ನು ಸನ್ಮಾನಿಸಲಾಯಿತು. ಐಎನ್ ಐಎಫ್‌ಡಿ ವಿದ್ಯಾರ್ಥಿಗಳು ವಾಕ್ ರಾಂಪ್ ಮಾಡಿದರು.
ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಮಂಡಳಿ
ಅಧ್ಯಕ್ಷ ಎಸ್.ಪಿ. ಸಂಶಿಮಠ,
ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಸಿಂಘಿ,
ಪದಾಧಿಕಾರಿಗಳಾದ ರವಿ ಅಗಡಿ, ಸಂದೀಪ ಬಿಡಸಾರಿಯಾ, ವೀರೇಶ ಮೊಟಗಿ, ರವೀಂದ್ರ ಬಳಿಗಾರ, ಮಾಜಿ ಅಧ್ಯಕ್ಷರಾದ ಮಹೇಂದ್ರ ಲದ್ದಡ, ಶಂಕರಣ್ಣ ಮುನವಳ್ಳಿ, ಪಲ್ಲವಿ ಮಲಾನಿ ಮುಂತಾದವರಿದ್ದರು
