ನೆಹರು ನಂತರ ಸುದೀರ್ಘ ಅವಧಿ ಪ್ರಧಾನಿ ಹೆಗ್ಗಳಿಕೆ ಮೋದಿಜಿಗೆ ಸಲ್ಲಲಿದೆ: ಜೋಶಿ ಹೇಳಿಕೆ

Spread the love

ಹುಬ್ಬಳ್ಳಿ: ಜವಾಹರಲಾಲ್ ನೆಹರು ಬಳಿಕ ಸುದೀರ್ಘ ಅವಧಿ ಪ್ರಧಾನಿ ಆಗಲಿದ್ದಾರೆ ನರೇಂದ್ರ ಮೋದಿ ಅವರು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಮತ್ತೊಮ್ಮೆ ಐಹಾಸಿಕ ಗೆಲುವು ದಾಖಲಿಸಲಿದ್ದು, ಮೋದಿಜಿ ಅ
ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ದೇಶದಲ್ಲಿ ಜವಾಹರಲಾಲ್ ನೆಹರು ನಂತರದಲ್ಲಿ ಸುದೀರ್ಘ ಅವಧಿ ಪ್ರಧಾನಿಯಾದ ಹೆಗ್ಗಳಿಕೆ ನರೇಂದ್ರ ಮೋದಿ ಅವರದ್ದಾಗಲಿದೆ ಎಂದು ಹೇಳಿದರು.
*.ಚುನಾವಣೆ ತಯಾರಿ ಚುರುಕು:* ದೇಶದಲ್ಲಿ ಬಿಜೆಪಿ ಚುನಾವಣೆ ತಯಾರಿ ಚುರುಕುಗೊಳಿಸಿದ್ದು, ಮತದಾರರೂ ಮೋದಿಜಿಗೆ ಮತ ನೀಡಲು ಉತ್ಸುಕರಾಗಿದ್ದಾರೆ. ಚುನಾವಣೆ ಪೂರ್ವ ತಯಾರಿ ಉತ್ತಮವಾಗಿ ನಡೆದಿದೆ ಎಂದರು.
ಬಿಜೆಪಿ ಸತತ ಮೂರನೇ ಬಾರಿ ಬಹುಮತ ಪಡೆಯಲಿದೆ. ನರೇಂದ್ರ ಮೋದಿ ಅವರು ಮೂರನೇ ಅವಧಿ ಪ್ರಧಾನಿಯಾಗಿ ಸುದೀರ್ಘ ಕಾಲ ಆಡಳಿತ ನಡೆಸಲಿದ್ದಾರೆ ಎಂದು ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.


Spread the love

Leave a Reply

error: Content is protected !!