ಹುಬ್ಬಳ್ಳಿ ,- ಶಂಖ, ಘಂಟೆ, ಜಾಗಟೆಗಳ ನಿನಾದ… ವಿಶೇಷ ಪೂಜೆ, ಶಿವ ನಾಮಸ್ಮರಣೆ ಝೇಂಕಾರ… ಹರಿದು ಬಂದು ಭಕ್ತ ಸಾಗರ… ಬಡವ-ಬಲ್ಲಿದ ಎಂಬ ಬೇಧವಿಲ್ಲದ ಶಿವರಾತ್ರಿಯನ್ನು ಭಕ್ತರು ಶುಕ್ರವಾರ ಬೆಳಿಗ್ಗೆಯಿಂದಲೇ ಶ್ರದ್ಧೆಭಕ್ತಿಯಿಂದ ಆಚರಿಸಲಾಯಿತು.
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠ, ಶಿವಪುರದ ಶಿವಾಲಯ
ಸ್ಟೇಷನ್ ರಸ್ತೆಯ ಈಶ್ವರ ದೇವಸ್ಥಾನ ದಲ್ಲಿಶಿವರಾತ್ರಿ ನಿಮಿತ್ತ ಭಕ್ತರು ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಿದರು.
ವಿವಿಧ ಅಭಿಷೇಕ ಜೊತೆಗೆ
ಶಂಖ, ಘಂಟೆ, ಜಾಗಟೆಗಳ ನಿನಾದ.
ಆವರಿಸಿದೆ.
ಸಿದ್ಧಾರೂಢ ಸ್ವಾಮಿ ಮಠ, ಸ್ಟೇಷನ್ ರಸ್ತೆಯ ಈಶ್ವರ ದೇವಸ್ಥಾನ, ಉಣಕಲ್ಲನ ರಾಮಲಿಂಗೇಶ್ವರ ದೇವಸ್ಥಾನ, ಮೂರು ಸಾವಿರಮಠ ಸೇರಿದಂತೆ ನಗರದ ವಿವಿಧ ದೇವಸ್ಥಾನಗಳಲ್ಲಿಬೆಳಗ್ಗೆಯಿಂದಲೇ ಭಕ್ತರಿಂದ ರುದ್ರಾಭಿಷೇಕ, ಅಲಂಕಾರ ಪೂಜೆ, ಮಹಾ ಮಂಗಳಾರತಿ ಸೇರಿ ಪೂಜಾ ವಿಧಾನಗಳು ನಡೆದವು.
ರಂಗೋಲಿಯಲ್ಲಿಶಿವ
ದಿವಟೆ ಓಣಿಯ ಈಶ್ವರ ದೇವರಗುಡಿಯ ಆವರಣದಲ್ಲಿರಂಗೋಲಿಯಲ್ಲಿಬೃಹತ್ ಶಿವನ ಚಿತ್ತಾರ ರಚಿಸಲಾಗಿತ್ತು. ರಾತ್ರಿ ಹಾಲಿನ ಅಭಿಷೇಕ ನಡೆಯಿತು. ಇದೇ ರೀತಿ ಅಚಟಗೇರಿ ನಾಗೇಶ್ವರ ದೇವಸ್ಥಾನ, ತೊರವಿಹಕ್ಕಲದ ಈಶ್ವರ ದೇವಸ್ಥಾನ, ಇಂಡಿಪಂಪ್ ಹತ್ತಿರದ ಮಂಜುನಾಥ ದೇವಸ್ಥಾನ, ಹೊಸಹುಬ್ಬಳ್ಳಿ ಕಿಲ್ಲೆಯ ಉಮಾಮಹೇಶ್ವರಿ ದೇಗುಲ, ಬಸವೇಶ್ವರನಗರದ ಶಿವ-ಗಣಪ ದೇವಸ್ಥಾನ, ರೇಣುಕಾನಗರದ ಚಿನ್ಮಯ ದೇವಸ್ಥಾನದ ಲ್ಲಿಬೆಳಗ್ಗೆಯಿಂದ ರುದ್ರಾಭಿಷೇಕ, ಬಿಲ್ವಪತ್ರೆ ಅಲಂಕಾರ, ಭಜನೆ, ಪೂಜೆ, ಜಾಗರಣೆ ನಡೆದವು.
ಪ್ರಸಾದ ವಿತರಣೆ
ಶಿವರಾತ್ರಿ ನಿಮಿತ್ತ ಉಪವಾಸ ವ್ರತ ಮಾಡಿದವರಿಗೆ ಹಾಗೂ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಸ್ವಯಂ ಸೇವಕರು ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರು ದೇವಸ್ಥಾನದ ಆವರಣದಲ್ಲಿಖಿಚಡಿ, ಕರ್ಜೂರ, ಹಣ್ಣು, ಹಾಲು ವಿತರಣೆ ಮಾಡಿದರು. ಕೆಲವು ಕಡೆ ಭಕ್ತರಿಗೆ ರುದ್ರಾಕ್ಷಿ ವಿತರಿಸಲಾಯಿತು.
ಶಿವನ ಸ್ಮರಣೆಯಲ್ಲಿಶಿವರಾತ್ರಿ
ಶ್ರೀ ಸಿದ್ಧಾರೂಢಮಠಕ್ಕೆ ವಿವಿಧ ಭಾಗದಿಂದ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿಬಂದಿದ್ದರು. ಇನ್ನು ಉದ್ಯೋಗಸ್ಥರು, ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ದೇವರ ದರ್ಶನಕ್ಕೆ ಬಂದಿದ್ದರು. ದೇವಸ್ಥಾನದ ಮುಂದೆ ಭಕ್ತರು ಬಿಲ್ವಪತ್ರೆ ಹಿಡಿದು ಸಾಲುಗಟ್ಟಿ ನಿಂತು ಶ್ರೀ ಸಿದ್ಧಾರೂಢ ಸ್ವಾಮೀಜಿ ಮತ್ತು ಶ್ರೀ ಗುರುನಾಥಾರೂಢ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆದರು. ಓಂ ನಮಃ ಶಿವಾಯ…, ಶಿವ..ಶಿವ.. ಪರಮಾತ್ಮಎಂಬ ಘೋಷಗಳು ಮೊಳಗಿದವು. ದೂರದ ಊರಿನಿಂದ ಆಗಮಿಸಿದ ಭಕ್ತರು ದೇವಸ್ಥಾನದಲ್ಲಿಕು ಳಿತುಕೊಂಡು ಶಿವನ ಭಜನೆ ಮಾಡಿದರೆ, ಇನ್ನು ಕೆಲವರು ರುದ್ರಾಕ್ಷಿ ಸರ ಹಿಡಿಕೊಂಡು ಜಪ ಮಾಡುತ್ತಿರುವುದು ಕಂಡು ಬಂತು.
ಜಾಗರಣೆ (ಶಿವಯೋಗ)
ಪ್ರತಿಯೊಂದು ದೇವಸ್ಥಾನದಲ್ಲಿವಿಶೇಷ ಅಭಿಷೇಕ ನಡೆದವು. ಮಕ್ಕಳಿಂದ ಹಾಲಿನ ಅಭಿಷೇಕ ಹೆಚ್ಚಾಗಿ ನಡೆದವು. ರಾತ್ರಿಯಿಡೀ ಭಕ್ತರು ದೇವಸ್ಥಾನದಲ್ಲಿಕುಳಿತು ಜಪ, ಭಜನೆ, ಓಂ ನಮಃ ಶಿವಾಯ… ಪಠಣದೊಂದಿಗೆ ಜಾಗರಣೆ (ಶಿವಯೋಗ) ಮಾಡುವ ಮೂಲಕ ಭಕ್ತಿಭಾವದಿಂದ ಶಿವರಾತ್ರಿ ಆಚರಣೆ ಮಾಡಿದರು.
