ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ವಿದ್ಯಾಕಾಶಿ ಧಾರವಾಡ ಸೇರಿದಂತೆ ಜಿಲ್ಲಾಧ್ಯಂತ ಶಿವನ ಆರಾಧನೆಗಾಗಿ ಶಿವರಾತ್ರಿಯಂದು ಜಾಗರಣೆಗಾಗಿ ದಟ್ಟವಾದ ಬರಗಾಲದಲ್ಲಿಯೂ ಮಾರುಕಟ್ಟೆಯಲ್ಲಿ ಹಣ್ದು ಹಂಪಲು ಹೂ ಖರೀದಿಸಲು ಜನರು ಮುಗಿಬಿದ್ದಿರುವ ದೃಶ್ಯ ಕಂಡುಬಂದಿತು.
ಶಿವನ ಆರಾಧನೆಯ ಶಿವರಾತ್ರಿ ಹಬ್ಬಕ್ಕೆ ಜಿಲ್ಲಾದ್ಯಂತ ಭಕ್ತಿಯ ಸಂಭ್ರಮ ಕಂಡುಬಂದಿದೆ. ಮುನ್ನಾದಿನವಾದ ಗುರುವಾರ ಶಿವರಾತ್ರಿಗಾಗಿ ಹಣ್ಣು, ಹೂವು, ಖರೀದಿ ಭರಾಟೆ ಜೋರಾಗಿತ್ತು.
ಶಿವನ ಆರಾಧನೆಗಾಗಿ ಬಹುತೇಕರು ಉಪವಾಸ ಮಾಡುತ್ತಾರೆ. ಆದ್ದರಿಂದ ಉಪವಾಸ ಮಾಡುವವರು ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಕರ್ಜೂರ್ ಹಣ್ಣುಗಳನ್ನ ಕೊಂಡುಕೊಳ್ಳಲು ಮುಂದಾಗಿದ್ದಾರೆ.
ಸ್ಥಳೀಯ ಹಣ್ಣುಗಳು ಈ ಬಾರಿ ಕಡಿಮೆ ಆಗಿದ್ದು ಬೆಲೆ ಕೂಡ ಏರಿಕೆಯಾಗಿದೆ.
ದೀಪಾವಳಿ, ಸಂಕ್ರಾಂತಿ, ಯುಗಾದಿ ಹೀಗೆ ಎಲ್ಲ ಹಬ್ಬಗಳೂ ಕಾಲ ಬದಲಾವಣೆಯ ಮುನ್ಸೂಚನೆ ಆಗಿದ್ದರೆ ಶಿವರಾತ್ರಿ ಕೂಡ ಋುತುಗಳ ವಿನಿಮಯಕ್ಕೆ ಸಾಕ್ಷಿಯಾಗುತ್ತದೆ. ಹೇಮಂತ ಋುತು ಜಾರಿ ವಸಂತ ಋುತುವಿನ ಆಗಮನವಾಗುತ್ತದೆ. ನಾಲ್ಕು ತಿಂಗಳ ಚಳಿಗಾಲ ಹೋಗಿ ಬೇಸಿಗೆ ಕಾಲಿಡುವ ಕಾಲ. ಈ ದಿನ ಚಳಿ ಶಿವ ಶಿವಾ ಅಂತ ಹೋಗುತ್ತದೆ ಎಂಬ ನಂಬಿಕೆ ಇದೆ.
ಮಹಾತ್ಮ ಗಾಂಧಿ ಮಾರುಕಟ್ಟೆ, ದುರ್ಗದ್ ಬೈಲ್, ಜನತಾ ಬಜಾರ್ ,ನವನಗರ ಮಾರುಕಟ್ಟೆ, ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಧಾರವಾಡದ ಸುಭಾಷ್ ಮಾರುಕಟ್ಟೆ, ಲೈನ್ ಬಜಾರ್ ಮುಂತಾದ ಮಾರುಕಟ್ಟೆಗಳಲ್ಲಿ ಜನರು ಖರೀದಿಸಲು ಮುಂದಾಗಿದ್ದಾರೆ.
ಶಿವರಾತ್ರಿಯಲ್ಲಿ ಕಲ್ಲಂಗಡಿ, ದ್ರಾಕ್ಷಿ, ಕರಬೂಜ, ಹಣ್ಣುಗಳಿಗೆ ವಿಶೇಷ ಸ್ಥಾನಮಾನವಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡಿನ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ.
ಹೊರ ರಾಜ್ಯದಿಂದ ಬರುತ್ತಿರುವ ಕಲ್ಲಂಗಡಿಗೆ ಕೆ.ಜಿಗೆ 50-80 ರೂ. ಕರಬೂಜಗೆ ಕೆ.ಜಿಗೆ 100 -125 ರೂ., ಕರ್ಜೂರ್ ಕೆ.ಜಿ.ಗೆ 80-90 ರೂ., ದ್ರಾಕ್ಷಿ ಕೆ.ಜಿ.ಗೆ 50-60 ರೂ., ಇತರೆ ಹಣ್ಣುಗಳು ಹಬ್ಬದಲ್ಲಿ ಬೆಲೆ ಏರಿಕೆ ಕಂಡಿದ್ದರೂ ವ್ಯಾಪಾರ ಮಾತ್ರ ಚನ್ನಾಗಿ ನಡೆಯುತ್ತಿದೆ . ನಾಳೆ ಸಂಜೆಯವರೆಗೂ ಖರೀದಿ ಇರುತ್ತದೆ