ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯವಾರ್ಡ ಸಂಖ್ಯೆ 3ರಲ್ಲಿನ ಕಮಲಾಪುರದ 4ನಂಬರ ಸರ್ಕಾರಿ ಶಾಲೆ ಹಾಗು ಗುಲಗಂಜಿಕೊಪ್ಪದ 13 ನಂಬರ ಶಾಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಮಕ್ಕಳಿಗೆ ಪಲ್ಸ ಪೋಲಿಯೊ ಲಸಿಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ವೀರೇಶ ಅಂಚಟಗೇರಿ, ಪಲ್ಸ್ ಪೋಲಿಯೊ ಲಸಿಕೆಯಿಂದ ಅಂಗವೈಕಲ್ಯ ತಡೆಗಟ್ಟಲು ಸಾಧ್ಯ ಎಂದರು.ವಕೀಲರಾದ ಶೇಖರ ಕವಳಿ ಮಕ್ಕಳ ಆರೋಗ್ಯಕ್ಕಾಗಿ ಕಡ್ಡಾಯ ಪಲ್ಸ್ ಪೋಲಿಯೊ ಲಸಿಕೆ ಹಾಕಬೇಕು ಎಂದರು.ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ ಪೋಲಿಯೊ ಲಸಿಕೆ ಹಾಕಿಸಿ ಹಾಗು ಈ ಮೆಸೆಜನ್ನ ನಿಮ್ಮ ಸ್ಥಳಿಯರಿಗೆ ಕಳಿಸಿ ಮಕ್ಕಳ ಆರೋಗ್ಯ ಕಾಳಜಿ ವಹಿಸಲು ಸಲಹೆ ನೀಡಿದರು. ಮುಖಂಡರಾದ ಶ್ರೀಕಾಂತ ಪುಗಲಿ, ಬಿ.ಕೆ.ಪಾಟೀಲ್, ಕಮ್ಮಾರ, ಮಂಜುನಾಥ ಹಿರೇಮಠ, ರಾಜಶೇಖರ ಹನಸಿ,ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ, ವಿವಿಧ ಸಂಸ್ಥೆ ಮುಖಂಡರು, ಶಾಲಾ ಸುಧಾರಣಾ ಸಮಿತಿ ಸದಸ್ಯರು ಮುಂತಾದವರಿದ್ದರು.
