ಮಹಾಮಾರಿ ಕೊರೊನಾದಿಂದ ಭಾರತದಲ್ಲಿ ನಿತ್ಯ ಮರಣ ಮೃದಂಗ ಭಾರಿಸುತ್ತಿದೆ. ನಿತ್ಯ ಸಾವಿರಾರು ಲಕ್ಷಾಂತರ ಕೋವಿಡ್ ಪ್ರಕರಣಗಳು ಬರುತ್ತಿದ್ದು, ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ಚಿಕಿತ್ಸೆ ನೀಡಲು ಪರದಾಡುತ್ತಿವೆ. ಇನ್ನೂ, ಆಕ್ಸಿಜನ್ ಕೊರತೆಯಿಂದ ನಿತ್ಯ ಸಾವಿರಾರು ಜನ ಉಸಿರು ನಿಲ್ಲಿಸುತ್ತಿದ್ದಾರೆ. ಕೋವಿಡ್ ಮಾರಣ ಹೋಮ ತಡೆಗಟ್ಟಲು ಇನ್ನಿಲ್ಲದ ಪ್ರಯತ್ನ ಮಾಡಲಾಗುತ್ತಿದೆ. ಇದರ ನಡುವೆ ವಿಶ್ವ ಪ್ರಸಿದ್ಧ ಮೈಕ್ರೋಸಾಫ್ಟ್ ಕಂಪನಿ ಭಾರತಕ್ಕೆ ಅಭಯ ಹಸ್ತ ನೀಡಿದ್ದು, ಪರಿಹಾರ ಕಾರ್ಯಗಳಿಗೆ ನೆರವಾಗಲು ಮೈಕ್ರೋಸಾಫ್ಟ್ ತನ್ನ ಧ್ವನಿ, ಸಂಪನ್ಮೂಲಗಳು ಮತ್ತು ತಂತ್ರಜ್ಞಾನವನ್ನು ಬಳಸುವುದನ್ನು ಮುಂದುವರಿಸುತ್ತದೆ ಮತ್ತು ನಿರ್ಣಾಯಕ ಆಮ್ಲಜನಕ ಸಾಂದ್ರತೆಯ ಸಾಧನಗಳ ಖರೀದಿಯನ್ನು ಬೆಂಬಲಿಸುತ್ತಿದೆ ಎಂದು ಮೈಕ್ರೋಸಾಫ್ಟ್ ಕಂಪನಿ ಮುಖ್ಯಸ್ಥ ಭಾರತೀಯ ಮೂಲದ ಸತ್ಯ ನಾಡೆಲಾ ಭರವಸೆ ನೀಡಿದ್ದಾರೆ. ಅಲ್ಲದೇ ಭಾರತದ ಪ್ರಸ್ತುತ ಪರಿಸ್ಥಿತಿಯಿಂದ ನಾನು ಎದೆಗುಂದುತ್ತೇನೆ. ಯು.ಎಸ್. ಸರ್ಕಾರವು ಸಹಾಯ ಮಾಡಲು ಸಜ್ಜುಗೊಳಿಸುತ್ತಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
