ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ

Spread the love

ಹುಬ್ಬಳ್ಳಿ- ರಾಮಲಿಂಗೇಶ್ವರ ದೇವಸ್ಥಾನ ಬಿ.ಆರ್.ಟಿ.ಎಸ್. ಯೋಜನೆಯ ಅನ್ವಯ ಸ್ಥಳಾಂತರ ಆಗುವ ವಿಷಯ ಬೇಸರದ ಸಂಗತಿ ಆದರೂ ಸರಕಾರ ನಿರ್ಧಾರವನ್ನು ನಾವು ಸ್ವಾಗತಿಸಲೇ ಬೇಕು ಈ ವಿಚಾರದಲ್ಲಿ ಭಕ್ತರು ಹಾಗೂ ಸಮಾಜ ಮುಕ್ತ ಸಹಕಾರ ನೀಡುವ ಅಗತ್ಯವಿದೆ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ವೀಣಾ ಬರದ್ವಾಡ ಹೇಳಿದರು.
ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ರವಿವಾರ ಸಂಜೆ ಸಸಿಗೆ ನೀರೆರೆಯುವ ಮೂಲಕ ಅವರು ಚಾಲನೆ ನೀಡಿ ಮಾತನಾಡುತ್ತಿದ್ದರು.
ಮಹಿಳೆಯರು ಧರ್ಮ, ಸಂಪ್ರದಾಯ ಕಾರ್ಯಗಳತ್ತ ಆಸಕ್ತಿ ವಹಿಸುವಂತೆ ಮನವಿ ಮಾಡಿದರು.
ಸುತ್ತೂರಿನ ಕಾಶೀ ಶಾಖಾಮಠದ ಪಟ್ಟಾಕ್ಷಧ್ಯಕ್ಷರಾದ ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಪಾಲಿಕೆಯ ಸದಸ್ಯ ಉಮೇಶಗೌಡ ಕೌಜಗೇರಿ ಮಾತನಾಡಿದರು.
ಗಣ್ಯರಾದ ಮಂಜುನಾಥ ಕಿರೇಸೂರ,ಷಣ್ಮುಖ. ರಂಗನಗೌಡರು, ಶಂಕರ ಧಾರವಾಡ,ಕಾಂತರಾಜ ಪಟೇಲ, ಪ್ರವೀಣ ಪಟೇಲ, ರಾಜು ಕೋರಿಶೆಟ್ರ,ನಿಂಗಣ್ಣ ಮಂಕಾಪುರ ಪಾಲ್ಗೊಂಡಿದ್ದರು. ದೇವಸ್ಥಾನ ಕಮಿಟಿ ಅಧ್ಯಕ್ಷ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಸ್ವಾಗತಿಸಿದರು.
ಮಹಾಪೌರರಿಗೆ ಗಣ್ಯರಿಗೆ ಕಮಿಟಿಯವರು ಸನ್ಮಾನಿಸಿದರು.
ಇದಕ್ಕೂ ಮೊದಲು ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.


Spread the love

Leave a Reply

error: Content is protected !!