Breaking News

ಪದಾಧಿಕಾರಿಗಳು, ಕಾರ್ಯಕರ್ತರು ಜಯ ಕರ್ನಾಟಕ ಸಂಘಟನೆಗೆ ಸೇರ್ಪಡೆ

Spread the love

ಹುಬ್ಬಳ್ಳಿ : ರಾಜ್ಯದ ನಾಡು,ನುಡಿ, ಜಲ ರಕ್ಷಣೆ ಮಾಡುವಲ್ಲಿ ಜಯ ಕರ್ನಾಟಕ ಸಂಘಟನೆ ತನ್ನದೇ ಆದ ಹೋರಾಟ ಮಾಡುತ್ತ ಬಂದಿದೆ. ಸಂಘಟನೆಯನ್ನು ಧಾರವಾಡ ಜಿಲ್ಲೆಯಲ್ಲಿ ಇನ್ನಷ್ಟು ಸದೃಢಗೊಳಿಸಲು ಹಲವು ರೂಪುರೇಷ ಸಿದ್ದಪಡಿಸಿಕೊಂಡಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ತಾಲೂಕು ಹಾಗೂ ಹುಬ್ಬಳ್ಳಿ ಶಹರ ಘಟಕದ ವತಿಯಿಂದ ಇಂದು ಕಾರ್ಯಕರ್ತರ ಸಭೆಯನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಶಹರ ಘಟಕದಲ್ಲಿ ಬೇರೆ ಬೇರೆ ಸಂಘಟನೆಯ ಪದಾಧಿಕಾರಿಗಳು ಕಾರ್ಯಕರ್ತರು ಜಯ ಕರ್ನಾಟಕ ಸಂಘಟನೆಗೆ ಸೇರ್ಪಡೆಯಾದರು. ರಾಜೇಸಾಬ್ ನದಾಫ್ ಹಾಗೂ ರಾಜು ಬೀಳಾರ್ ಸೇರಿದಂತೆ ಇನ್ನೂ ಅನೇಕ ಯುವಕರು ಜಯ ಕರ್ನಾಟಕ ಸಂಘಟನೆಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಮಾರುತಿ ಬಾರಕೇರ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸುಧೀರ ಎಂ ಮುಧೋಳ, ಜಿಲ್ಲಾ ಕಾರ್ಯಾಧ್ಯಕ್ಷರಾದ ಅಭಿಷೇಕ ಇಜಾರಿ, ಹುಬ್ಬಳ್ಳಿ ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ ಬಾರಕೇರ, ಹುಬ್ಬಳ್ಳಿ ಶಹರಾಧ್ಯಕ್ಷರಾದ ಸದ್ದಾಮ ನದಾಫ್, ಹಾಗೂ ವಿಶಾಲ ಸಿಂಗನಹಳ್ಳಿ, ಸಾಗರ ಇಜೇರಿ, ಕಾಜಾಸಾಬ ಆಸಾಮ, ಅಶೋಕ ವಾಲ್ಮೀಕಿ, ತೌಸಿಪ ಕಲಾದಗಿ, ಶಾಹಿದ ನದಾಫ, ಸಮೀರ್ ಮುಬ್ಬಾಳಿ, ಆಕಾಶ್ ಕಲಕುದರಿ, ಸಂತೋಷ ಬೇವಿನಗಿಡದ, ವಿನಾಯಕ ಕುದುರಿ, ಸುನಿಲ ಬೋವಿ, ಕಾರ್ತಿಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ರಾಜ್ಯ ಸರ್ಕಾರದಲ್ಲಿ ತುಷ್ಟೀಕರಣ ಮೀತಿಮೀರಿದೆ- ಶಾಸಕ ಮಹೇಶ್ ಟೆಂಗಿನಕಾಯಿ

Spread the loveಹುಬ್ಬಳ್ಳಿ:ಬೆಂಗಳೂರಿನಲ್ಲಿ ಹಸು ಕೆಚ್ಚಲು ಕೊಯ್ಲು ವಿಚಾರ ಅತ್ಯಂತ ಕ್ರೂರತನದಿಂದ ಕೂಡಿದ್ದು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ …

Leave a Reply

error: Content is protected !!