ಹುಬ್ಬಳ್ಳಿ; ಎ.ಜಿ.ಎಂ.ಆರ್.ಸಿ.ಈ.ಟಿ. ವರೂರ ಹಾಗೂಎ.ಜಿ.ಎಂ. ರೂರಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ವರೂರಿನಲ್ಲಿ 2024 ರ ಮಾರ್ಚ್ 1 ಮತ್ತು 2 ರಂದು ಮೈಸೂರಿನ ಇನ್ಫೋಸಿಸ್ ಕಲಿಕಾ ಕೇಂದ್ರದಲ್ಲಿ ನಡೆದ 6 ನೇ ವಾರ್ಷಿಕ ಬಿ.ಐ.ಈ.ಟಿ.ಎಸ್. ಸಮಾವೇಶದಲ್ಲಿ ಚರ್ಚೆ ನಡೆಸಲಾಯಿತು.
ಈ ಕುರಿತು ಮಾಹಿತಿ ನೀಡಿದ ಸಂಸ್ಥೆ ಪದಾಧಿಕಾರಿಗಳು,ಐ ಐ ಎಸ್ ಸಿ , ಎಲ್ & ಟಿ, ಬೋಷ್, ಇನ್ಫೋಸಿಸ್, ಟಿ ಸಿ ಎಸ್, ಪರ್ಸಿಸ್ಟೆಂಟ್ ನಂತಹ ಪ್ರತಿಷ್ಠಿತ ಕಂಪನಿಗಳು ತಮ್ಮ ಸಂಸ್ಥೆ ಮತ್ತು ಅಕಾಡೆಮಿಯ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡರು.
ಅಕಾಡೆಮಿ ಮತ್ತು ಕೈಗಾರಿಕೆಗಳ ನಡುವಿನ ಅಂತರವನ್ನು ಹೇಗೆ ನಿವಾರಿಸುವುದು ಎಂಬುದರ ಕುರಿತು ವಿವಿಧ ಕ್ಷೇತ್ರಗಳ ಪರಿಣಿತ ಪಡೆದ ಶ್ರೇಷ್ಠ ತಜ್ಞರು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ
ಮೆಕ್ಯಾನಿಕಲ್, ಸಿವಿಲ್ ಮತ್ತು ಎಲೆಕ್ಟ್ರಿಕಲ್ ವಿಭಾಗಗಳ ಸಹಯೋಗದೊಂದಿಗೆ ಎ ಐ ಯ ಅನುಷ್ಠಾನದೊಂದಿಗೆ ,ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಮತ್ತು ಉದ್ಯಮದಿಂದ ಶಿಷ್ಯವೇತನ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಯಿತು. ಸಮಾವೇಶವು ಅತ್ಯಂತ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ, ಮತ್ತು ಹೆಚ್ಚು ಪ್ರೇರಕದಾಯವಾಗಿ ಜರುಗಿತು. ಸಮಾವೇಶದಲ್ಲಿ ಎ.ಜಿ.ಎಂ.ಆರ್.ಸಿ.ಈ.ಟಿ ವರೂರ್ ನಿರ್ದೇಶಕರಾದ ಪ್ರೊ. ಸಂದೀಪ್ ಕ್ಯಾತನವರ್ ಅವರು ಡಾ. ಸೆಲ್ವನ್ ಡಿ ಸಹ-ಅಧ್ಯಕ್ಷ ಬಿ.ಐ.ಇ.ಟಿ.ಎಸ್ ಅವರಿಂದ ಬಿ.ಐ.ಈ.ಟಿ.ಎಸ್ ಸದಸ್ಯತ್ವ ಪ್ರಮಾಣಪತ್ರವನ್ನು ಪಡೆದರು. ಹಾಗೂ ಡೀನ್ ಐ ಐ ಐ ಸಿ ಡಾ. ರಮೇಶ್ ಕೊಪ್ಪರ್, ಟಿ ಪಿ ಒ.ಪ್ರೊ.ಅಶ್ವಿನಿ ಪಿ ಮತ್ತು ಈಈ ಈ ಎಚ್ ಒ ಡಿ ರೇಷ್ಮಾ ಯಲ್ಲಾಪುರ, ಡಾ. ಜಹೀರ್ ಅಬ್ಬಾಸ್ ಎಚ್ಚ್ ಎಚ್ ಒ ಡಿ ಮೆಕ್ಯಾನಿಕಲ್ ವಿಭಾಗ ಮತ್ತು ಇರ್ಷಾದ್ ಅಹ್ಮದ್ ಗೋರಿಖಾನ್ ಎಚ್ ಒ ಡಿ ಎ ಐ ಎಂ ಎಲ್ ವಿಭಾಗದವರು ಇದ್ದರು.
Check Also
ಪಕ್ಷೇತರ ಅಭ್ಯರ್ಥಿ ಜಿ ಜಿ ದ್ಯಾವನಗೌಡ್ರ ಕಣದಲ್ಲಿ ಮುಂದುವರೆಯಲು ನಿರ್ಧಾರ ?
Spread the loveಹುಬ್ಬಳ್ಳಿ: .ಶಿಗ್ಗಾವ ಸವಣೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆದಿದ್ದು ಯಾವುದೇ …