Breaking News

“ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ನಲಿದ ಚಿಣ್ಣರು ಕಲಘಟಗಿ( ಧಾರವಾಡ)

Spread the love

ಕಲಘಟಗಿ ತಾಲೂಕಿನ ಧುಮ್ಮವಾಡ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಅಂಗಳದಲ್ಲಿ ಫೆಬ್ರುವರಿ ೨೯, ಮಾರ್ಚ ೧,೨ ಮೂರು ದಿನಗಳ ಕಾಲ ೧೦೦ ಮಕ್ಕಳು ಕಥೆ, ಕವನ, ನಾಟಕ,ರಿಪೋರ್ಟಿಂಗ್ ಕಾರ್ನರ್ ಗಳಲ್ಲಿ ಮಕ್ಕಳು ಅನೇಕ ಚಟುವಟಿಕೆಗಳ ಜೊತೆಯಲ್ಲಿ ತಮ್ಮ ಕಲ್ಪನೆ, ಊಹೆ, ಅನುಭವಗಳ ಮೂಲಕ ಮಕ್ಕಳು ತುಂಬಾ ಖುಶಿಯಿಂದ ಕಥೆಗಳನ್ನು, ಕವನಗಳನ್ನು, ನಾಟಕಗಳನ್ನು ರಚಿಸಿದರು. ಹಾಡಿದರು, ನಲಿದರು, ವಿವಿಧ ಪಾತ್ರಗಳಲ್ಲಿ ನಟಿಸಿದರು. ರಿಪೋರ್ಟಿಂಗ್ ವಿಭಾಗದಲ್ಲಿ ಜಾನಪದ ಕವಿ,ಎಂ,ಆರ್,ತೋಟಗಂಟಿ, ರಂಗಕರ್ಮಿ ಬಸವರಾಜ ದೊಡಮನಿ, ಸಮಾಜ ಸೇವಕಿ ಉಮಾ ಹಂಪಣ್ಣವರ, ಹಳೆಯ ನಾಣ್ಯಗಳ ಸಂಗ್ರಹಣಾ ಹವ್ಯಾಸಿ ಸುನಿಲ ಕಮ್ಮಾರ, ಸೋಬಾನ ಹಾಡುಗಾರ್ತಿ ಬಸಮ್ಮ ಮಾಳಗಿ, ಸಾಹಿತಿ ವೈ,ಜಿ,ಭಗವತಿ ಹೀಗೆ ಅನೇಕ ಸಾಧಕರನ್ನು ಸಂದರ್ಶಸಿ ಅವರುಗಳ ಜೀವನಯಾನದ ಪರಿಚಯ ಮಾಡಿಕೊಂಡರು. ಧುಮ್ಮವಾಡ ಗ್ರಾಮದ ನಾಡಕಚೇರಿ, ಗರಡಿಮನಿಗಳನ್ನು ಸಂದರ್ಶಿಸಿದರು. ಮೊದಲ ದಿನದಂದು ಊರಲ್ಲಿ ಜಾಥಾ ಸಂಘಟಿಸಲಾಗಿತ್ತು. ವಿವಿಧ ವಿನ್ಯಾಸದ ಕಾಗದದ ಟೋಪಿಗಳನ್ನು ಧರಿಸಿ, ಸಂಭ್ರಮದ ಹಾಡುಗಳನ್ನು ಹೇಳುತ್ತಾ ಸಮೂದಾಯದಲ್ಲಿ ಜಾಗೃತಿ ಮೂಡಿಸಿದರು. ಶಿವಾನಂದ ಭಜಂತ್ರಿ, ವೈ,ಜಿ,ಭಗವತಿ, ಎಂ,ಎಸ್,ಪಾಟೀಲ,ರೂಪಾ ಅಂಗಡಿ, ಸೀತಾ ಚನ್ನಪ್ಪನವರ, ಕೆ,ಕೆ,ಗಂಜಿಗಟ್ಟಿ, ಡಿ, ಗೀತಾ, ವಿ,ಎಸ್, ನಾಗಲೋಟಿಮಠ, ಸೋಮಶೇಖರ ಕುಮಟಾಕರ, ನಿಜಾಮ ಕಲ್ಲೇದ, ಮಾರುತಿ ಕಾಂಬಳೆ, ಪ್ರಶಾಂತ ರಡ್ಡೇರ ಸಂಪನ್ಮೂಲವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದರು. ಸಮಾರೋಪ ಸಮಾರಂಭದಲ್ಲಿ ಧಾರವಾಡ ಜಿಲ್ಲಾಪಂಚಾಯತಿ ಯೋಜನಾಧಿಕಾರಿ ದೀಪಕ ಮಡಿವಾಳರ, ರಾಜ್ಯ ಬಿ,ಜಿ,ವಿ,ಎಸ್ ರಾಜ್ಯ ಸಮಿತಿ ಸದಸ್ಯರಾದ ಎಲ್,ಆಯ್,ಲಕ್ಕಮ್ಮನವರ, ಹಾಸ್ಯಕಲಾವಿಧರಾದ ಮಲ್ಲಪ್ಪ ಹೊಂಗಲ, ಪ್ರಭಾರಿ ಕ್ಷೇತ್ರಶಿಕ್ಷಣಾಧಿಕಾರಿ ಕುಮಾರ ಕೆ,ಎಫ್ ಹಾಜರಾಗಿ ಮಕ್ಕಳ ಕಾರ್ಯಗಳನ್ನು ಪ್ರಶಂಸಿದರು. ಧುಮ್ಮವಾಡ ಗ್ರಾಮಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಸ್ಥಳೀಯ ಶಾಲಾ ಶಿಕ್ಷಕವೃಂದ ಮಕ್ಕಳ ಸಾಹಿತ್ಯ ಸಂಭ್ರಮದ ಯಶಸ್ವಿಗೆ ಕಾರಣರಾದರು.


Spread the love

About Karnataka Junction

    Check Also

    ಅಹಿಂದ ಮಾಡಿದಾಗ ಸಿದ್ಧರಾಮಯ್ಯಾ ಜೊತೆಗೆ ನಿಂತವನು ನಾನೋಬ್ಬನೇ- ಬೊಮ್ಮಾಯಿ

    Spread the loveಹುಬ್ಬಳ್ಳಿ:ಸಿದ್ದರಾಮಯ್ಯ ಅವರು ಅಹಿಂದ ಮಾಡಿದಾಗ ಅವರ ಜೊತೆಗೆ ಬಹಿರಂಗವಾಗಿ ಗಟ್ಟಿಯಾಗಿ ನಿಂತ ವೀರಶೈವ ಸಮುದಾಯದ ನಾಯಕ ನಾನೊಬ್ಬನೇ. …

    Leave a Reply

    error: Content is protected !!