Breaking News

ಹುಬ್ಬಳ್ಳಿ ಗ್ರಾಮಾಂತರ ಸಾರಿಗೆಯಿಂದ 68 ಬಸ್ ಸಂಚಾರ

Spread the love

 

ಹುಬ್ಬಳ್ಳಿ:ಮುಂದುವರೆದ ಅನಿರ್ಧಿಷ್ಟ ಅವಧಿಯ ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಏ.14ರಂದು ಬುಧವಾರ ಸಂಜೆಯವರೆಗೆ ಹುಬ್ಬಳ್ಳಿ ಗ್ರಾಮಾಂತರ1ನೇ ಡಿಪೋದಿಂದ 20 ಬಸ್ಸು, ಗ್ರಾಮಾಂತರ 2 ನೇ ಡಿಪೋದಿಂದ 27 ,ಗ್ರಾಮಾಂತರ 3ನೇ ಡಿಪೋದಿಂದ
19, ನವಲಗುಂದ ಮತ್ತು ಡಿಪೋದಿಂದ ತಲಾ 1 ಬಸ್ಸು ಸೇರಿದಂತೆ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಒಟ್ಟು 68 ಬಸ್ಸು ಸಂಚರಿಸಿವೆ.
ಈ ಬಸ್ಸುಗಳನ್ನು ಬಳಸಿಕೊಂಡು
ಹುಬ್ಬಳ್ಳಿಯಿಂದ
ಗದಗಕ್ಕೆ 32 ಸರತಿಗಳನ್ನು , ಬೆಳಗಾವಿಗೆ 8, ವಿಜಯಪುರ 3, ಬಾಗಲಕೋಟೆ 1,
ಕಲಘಟಗಿ 3, ಕುಂದಗೋಳ 1, ಹಾವೇರಿಗೆ 14 , ದಾವಣಗೆರೆ 1, ಬೆಂಗಳೂರಿಗೆ ಒಂದು ರಾಜಹಂಸ ಮತ್ತು ಒಂದು ಸ್ಲೀಪರ್, ಶಿರಸಿ 2, ನವಲಗುಂದ 1, ನರಗುಂದ 1, ಲಕ್ಷ್ಮೇಶ್ವರ 2, ರಾಣೆಬೆನ್ನೂರು1, ಯಲ್ಲಾಪುರ 1, ಹುಲಗೂರು 2 ಮತ್ತು ಅಣ್ಣಿಗೇರಿಗೆ 6 ಸರತಿಗಳನ್ನು ಕಾರ್ಯಾಚರಣೆ ಮಾಡಲಾಗಿದೆ. ನಲಗುಂದದಿಂದ ಗದಗಕ್ಕೆ 1 ಹಾಗೂ ಕಲಘಟಗಿಯಿಂದ ಹುಬ್ಬಳ್ಳಿಗೆ 2 ಸರತಿ ಗಳಲ್ಲಿ ಕಾರ್ಯಾಚರಣೆ ಮಾಡಲಾಗಿದೆ
ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.
ಶನಿವಾರ 12 ರವಿವಾರ 26, ಸೋಮವಾರ 36 ಮತ್ತು ಮಂಗಳವಾರ 44 ಬಸ್ಸುಗಳು ಸಂಚರಿಸಿದ್ದವು.ದಿನ ಕಳೆದಂತೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳ ‌ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಬಸ್ಸುಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
*ಕರ್ತವ್ಯನಿರತ ಸಿಬ್ಬಂದಿಗೆ ವೇತನ ಪಾವತಿ*
ಮುಷ್ಕರದ ಅವಧಿಯಲ್ಲಿ ಅಂದರೆ ಏಪ್ರಿಲ್ 7 ರಿಂದ 10ವರೆಗೆ ನಿರಂತರವಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಈಗಾಗಲೇ ವೇತನ ಪಾವತಿ ಮಾಡಲಾಗಿದೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಒಟ್ಟು 2110 ಸಿಬ್ಬಂದಿ ಇದ್ದಾರೆ. ಅವರಲ್ಲಿ 733 ಸಿಬ್ಬಂದಿ ಮುಷ್ಕರದ ಅವಧಿಯಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ.ಅವರ ವೇತನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ದಿನಾಂಕ 11 ರಿಂದ 14 ರವರೆಗೆ ಕೆಲಸಕ್ಕೆ ಬಂದಿರುವ ಸಿಬ್ಬಂದಿಗಳ ವೇತನವನ್ನು ಏ12ರಂದು ಬಿಡುಗಡೆ ಮಾಡಲಾಗುತ್ತದೆ. ಮುಷ್ಕರ ಕೈ ಬಿಟ್ಟು ಕೂಡಲೇ ಕೆಲಸಕ್ಕೆ ಹಾಜರಾಗುವಂತೆ ಅವರು ಸಿಬ್ಬಂದಿಗಳಲ್ಲಿ ಮನವಿ ಮಾಡಿದ್ದಾರೆ.
*ಕೆಲಸಕ್ಕೆ ಗೈರಾದ 26 ತರಬೇತಿ ಸಿಬ್ಬಂದಿ ವಜಾ*
ಮುಷ್ಕರ ಆರಂಭದ ದಿನದಿಂದ ಕರ್ತವ್ಯಕ್ಕೆ ಗೈರು ಹಾಜರಾಗಿರುವ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ 26 ತರಬೇತಿ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಿ ನೇಮಕಾತಿ ಪ್ರಾಧಿಕಾರಸ್ಥರೂ ಆಗಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಆದೇಶ ಹೊರಡಿಸಿದ್ದಾರೆ.
ಮುಷ್ಕರ ಕೈ ಬಿಟ್ಟು ಕೊಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಇಲ್ಲದಿದ್ದರೆ ಸೇವೆಯಿಂದ ವಜಾ ಮಾಡುವುದಾಗಿ ತಿಳಿಸಿ ತರಬೇತಿ ನೌಕರರಿಗೆ ಶೋಕಾಸ್ ನೋಟಿಸ್ ಮತ್ತು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಲಾಗಿತ್ತು. ಆದಾಗ್ಯೂ ಸಹ ಇಂದಿನವರೆಗೆ ಕೆಲಸಕ್ಕೆ ಹಾಜರಾಗದೇ ಇರುವ 26 ತರಬೇತಿ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ.
ಇವರಲ್ಲಿ 15 ಚಾಲಕರು, 8 ಚಾಲಕ ಕಂ ನಿರ್ವಾಹಕರು,ಇಬ್ಬರು ತಾಂತ್ರಿಕ ಸಿಬ್ಬಂದಿ ಮತ್ತು ಒಬ್ಬರು ಕಿರಿಯ ಸಹಾಯಕ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
*ಘಟಕವಾರು ವಜಾಗೊಂಡ ಸಿಬ್ಬಂದಿಗಳ ವಿವರ:*
ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕದ 2, ಗ್ರಾಮಾಂತರ 2ನೆ ಘಟಕದ 2, ಗ್ರಾಮಾಂತರ 3ನೇ ಘಟಕದ 1, ನವಲಗುಂದ ಘಟಕದ 6 ಮತ್ತು ಕಲಘಟಗಿ ಘಟಕದ 17 ತರಬೇತಿ ಸಿಬ್ಬಂದಿಗಳನ್ನು ಆಯ್ಕೆ ಪಟ್ಟಿಯಿಂದ ಕೂಡಲೆ ಜಾರಿಗೆ ಬರುವಂತೆ ತೆಗೆದು ಹಾಕಲಾಗಿದೆ.
ವಜಾಗೊಂಡಿರುವ ಸಿಬ್ಬಂದಿ ಸಂಸ್ಥೆಯಲ್ಲಿ ಖಾಯಂ ನೇಮಕಾತಿ ಹಕ್ಕನ್ನು ಸಹ ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ
*ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಯಲ್ಲಿ ಇಬ್ಬರು ಸಿಬ್ಬಂದಿ ಅಮಾನತ್ತು*
ಕಳೆದ ಗುರುವಾರ ಗ್ರಾಮಾಂತರ 2ನೇ ಘಟಕದ ಬಸ್ಸು ಡಿಪೋದಿಂದ ಹಳೆ ಬಸ್ ನಿಲ್ದಾಣಕ್ಕೆ ಹೋಗುವಾಗ ಗೋಕುಲ ರಸ್ತೆಯಲ್ಲಿರುವ ಸಾರಿಗೆ ಸಂಸ್ಥೆಯ ಸಿಬ್ಬಂದಿ ವಸತಿ ಗೃಹಗಳ ಹತ್ತಿರ ಬಸ್ ತಡೆದು ಕರ್ತವ್ಯನಿರತ ಸಿಬ್ಬಂದಿಗಳ ಕೆಲಸಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಇಬ್ಬರು ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ ಎಂದು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
*ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದೂರು ದಾಖಲು*
ಸೋಮವಾರ ಧಾರವಾಡದಿಂದ ಬಾಗಲಕೋಟೆಗೆ ಹೋಗುತ್ತಿದ್ದ ಬಸ್ಸನ್ನು ತಡೆದು ಕರ್ತವ್ಯನಿರತ ಚಾಲಕ- ನಿರ್ವಾಹಕರಿಗೆ ನಿಂದಿಸಿ, ಕೆಲಸಕ್ಕೆ ಅಡ್ಡಿಪಡಿಸಿದ ಘಟನೆ ಹಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಹೆಬಸೂರಿನಲ್ಲಿ ಜರುಗಿದೆ. ಘಟನೆ ಸಂಬಂಧ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಸದರಿ ಘಟನೆಯಲ್ಲಿ ಭಾಗಿಯಾಗಿರುವ ಸಂಸ್ಥೆಯ ಒಬ್ಬ ಸಿಬ್ಬಂದಿ ಯನ್ನು ಗುರುತಿಸಲಾಗಿದ್ದು ಇತರರನ್ನು ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಇನ್ನೊಂದು ಪ್ರಕರಣದಲ್ಲಿ ಮಂಗಳವಾರ ಹುಬ್ಬಳ್ಳಿ ಗ್ರಾಮಾಂತರ 3ನೇ ಘಟಕದ ಕೆ. ಎ. 25 ಎಫ್ 3148 ನೋಂದಣಿ ಸಂಖ್ಯೆಯ ಬಸ್ಸು ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಹೋಗುತ್ತಿರುವಾಗ ನರಗುಂದ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರ ಕುಟುಂಬದವರು ಬಸ್ ತಡೆದು ಕರ್ತವ್ಯದಲ್ಲಿದ್ದ ಚಾಲಕ- ನಿರ್ವಾಹಕರನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ. ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅಗತ್ಯ ಸಾರಿಗೆ ಸೇವೆ ಕಲ್ಪಿಸುವುದಕ್ಕಾಗಿ
ಸಂಚರಿಸುತ್ತಿರುವ ಸಾರಿಗೆ ಬಸ್ಸುಗಳನ್ನು ಮಾರ್ಗ ಮಧ್ಯದಲ್ಲಿ ತಡೆಯುವುದು ಅಥವಾ ಕರ್ತವ್ಯನಿರತ ಸಾರಿಗೆ ಸಿಬ್ಬಂದಿಗಳ ಕೆಲಸಕ್ಕೆ ಅಡ್ಡಿಪಡಿಸುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಸಂಸ್ಥೆಯಲ್ಲಿಯೂ ಶಿಸ್ತು ಕ್ರಮ ಜರುಗುಸಲಾಗುತ್ತದೆ. ಆದ್ದರಿಂದ ಇಂಥ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಸಿಬ್ಬಂದಿಗಳಿಗೆ ಅವರು ಎಚ್ಚರಿಸಿದ್ದಾರೆ.


Spread the love

About Karnataka Junction

[ajax_load_more]

Check Also

ರಾಜ್ಯ ಪ್ರಶಸ್ತಿಗೆ ಈರಪ್ಪ ಎಮ್ಮಿ ಆಯ್ಕೆ

Spread the loveರಾಜ್ಯ ಪ್ರಶಸ್ತಿಗೆ ಈರಪ್ಪ ಎಮ್ಮಿ ಆಯ್ಕ ಹುಬ್ಬಳ್ಳಿ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ …

Leave a Reply

error: Content is protected !!