Breaking News

ಯಾರೋ ತಪ್ಪು ಮಾಡಿದ್ದಾರೆ ಅವರ ಮೇಲೆ ಮೊದಲು ಕ್ರಮ ಆಗಲಿ; ಮಹೇಶ ಟೆಂಗಿನಕಾಯಿ

Spread the love

ಹುಬ್ಬಳ್ಳಿ; ವಿಧಾನ ಸೌಧದಲ್ಲಿ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಬೆಂಬಲಗರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕುರಿತು ತನಿಖೆ ನಡೆಸುತ್ತಿರುವ ಸರಕಾರ ವಿನಾಕಾರಣ ವಿಳಂಬ ಮಾಡದೇ ಎಫ್ ಎಸ್ ಎಲ್ ವರದಿ ಬರಲಿ ಬಿಡಲಿ ತಕ್ಷಣ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯ ಮಾಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ಪಾಕಿಸ್ತಾನ ಜಿಂದಾಬಾದ್ ಪ್ರಕರಣದ ಎಫ್ ಎಸ್ ಎಲ್ ವರದಿ ಬಿಡುಗಡೆಗೆ ಸರ್ಕಾರ ವಿಳಂಬ ಮಾಡುತ್ತಿರುವುದು ಸರಿಯಲ್ಲಯಾವಾಗ ಯಾವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಅಹಿತಕರ ಘಟನೆಗಳು ಸಂಭವಿಸುತ್ತೀವೆ ವಿಚಿತ್ರಕಾರಿ ಸಂಗತಿಗಳು ನಡೆತಾ ಇವೆ
ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ಕಡೆ ಪಾಕಿಸ್ತಾನ ಜಿಂದಾಬಾದ್ ಆಯಿತು, ಈಗ ರಾಜ್ಯಸಭಾ ಚುನಾವಣಾ ಸಂದರ್ಭದಲ್ಲಿ ನಾಲ್ಕು ಅಭ್ಯರ್ಥಿಗಳು ಆಯ್ಕೆ ಮಾಡಿದ ವೇಳೆ ಚಂದ್ರಶೇಖರ ಸೇರಿದಂತೆ ಉಳಿದವರು ಆಯ್ಕೆಯಾದರು. ಇದರಲ್ಲಿನಾಸೀರ್ ಹುಸೇನ್ ಸಹ ಆಯ್ಕೆ ಆದರುಆದರೆ ನಾಸೀರ್ ಹುಸೇನ್ ಹಿಂಬಾಲಕರು 20 ರಿಂದ 25 ಜನರಿದ್ದರುಅವರೆಲ್ಲರೂ ನಾಸೀರ್ ಹುಸೇನ್ ಹಿಂಬಾಲಿಸಿದ ದರು ವಿಧಾನ ಸೌಧದಲ್ಲಿಅವರು ಕೆಲವರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರು
ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಬದಲು ಕರೆದು ಚಾ ಕುಡಿಸಿದ್ದಾರೆ
ಇದು ಖಂಡನೀಯವಾಗಿದೆ.
ಈಗ ಮತ್ತೇ ಶ್ರೀ ರಾಮೇಶ್ವರ ಕೆಫೆ ದಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ
ಇದನ್ನ ನೋಡಿದರೆ ಏನ್ ಆಗತಾ ಇದೆಯಾರು ಯಾರಿಗೆ ಚಾಲೆಂಜ್ ಮಾಡಲಿಕ್ಕೆ ಹೊರಟಿದ್ದಾರೆ
ಸರ್ಕಾರಕ್ಕೆ ಭಯೋತ್ಪಾದಕರೂ ಅಥವಾ ಭಯೋತ್ಪಾದಕರು ಸರ್ಕಾರಕ್ಕೋ ಅಂತಾ ಗೊತ್ತಾಗತಾ ಇಲ್ಲಯಾವಾಗ ಯಾವಾಗ ಸರ್ಕಾರ ವಿಕ್ ಆಗತ್ತೋ ಇಂತಹ ವಿದ್ವಾಂಸಕ ಕೃತ್ಯ ನಡೆತಾ ಇವೆಸರಕಾರ ತಕ್ಷಣ ತಪ್ಪು ಎಸಗಿದರ ಮೇಲೆ ಕ್ರಮ ಕೈಗೊಳ್ಳಬೇಕುಇಡಿ ದೇಶದ ಜನ ನೋಡಿದ್ದಾರೆಎಪ್ ಎಸ್ ಎಲ್ ವರದಿ ಬರಲಿ ಬಿಡಲಿ ತಕ್ಷಣ ಕ್ರಮ ಆಗಲಿ ವಿನಾಕಾರಣ ಕಾಲಹರಣ ಆಗೋದು ಬೇಡಾಕಾನೂನು ಸುವ್ಯವಸ್ಥಿತ ರಾಜ್ಯದಲ್ಲಿ ಹದೆಗೆಟ್ಡಿದೆಹುಬ್ಬಳ್ಳಿ ಧಾರವಾಡ‌, ಕಲಬುರಗಿ ಯಲ್ಲಿ ಸರಣಿ ಕೊಲೆ ಆಗಿವೆಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚತ್ತುಕೊಂಡಿಲ್ಲ.
ದೇಶದ್ರೋಹ ಗಳನ್ನ ಒದ್ದು ಒಳಗೆ ಹಾಕಬೇಕುನಾವು ಸಹ ಈಗಾಗಲೇ ರಾಜ್ಯಪಾಲರನ್ನ ಭೇಟಿ ಮಾಡಿದ್ದೇವೆ
ಸರ್ಕಾರವನ್ನ ವಜಾ ಮಾಡಲು ಸಹ ಆಗ್ರಹ ಮಾಡಿದ್ದೇವೆ ಎಂದರು‌. ಇನ್ನು
ಬಿಜೆಪಿ ನಾಯಕರಿಂದ ಪಕ್ಷಕ್ಕೆ ಸೇರ್ಪಡೆಗೆ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ಸಿಎಂ ಹೇಳಿಕೆ ವಿಚಾರ ಕುರಿತು ಮಾತನಾಡಿದ ಅವರುಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಕೋಟ್ಯಾಂತರ ಆಮಿಷ ಆರೋಪ ಸರಿಯಲ್ಲ
ಮುಖ್ಯಮಂತ್ರಿಗಳು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿಯ ಹೇಳಿಕೆ ಸರಿಯಲ್ಲ ಅವರು ವಿನಾಕಾರಣ ಗೊಂದಲ ಉಂಟುಮಾಡಬಾರದು
ಮುಖ್ಯಮಂತ್ರಿಗಳ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೋ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ
ಕಾಂಗ್ರೆಸ್ ನ ಶಾಸಕರು ಸಂಪೂರ್ಣ ಅತೃಪ್ತಿಯಾಗಿದ್ದಾರೆಅಧಿವೇಶನ ಸಂದರ್ಭದಲ್ಲಿ ನಾವು ಕಾಂಗ್ರೆಸ್ ಶಾಸಕರ ಜೊತೆಗೆ ಮಾತನಾಡಿದ್ದೇವೆ
ಈ ವೇಳೆ ಯಾವುದೇ ರೀತಿಯ ಅನುದಾನ ಬರತಾ ಇಲ್ಲಕ್ಷೇತ್ರದ ಅಭಿವೃದ್ಧಿ ಆಗತಾ ಇಲ್ಲಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದಿದ್ದಾರೆಸರಕಾರದ ವೈಫಲ್ಯ ಮುಚ್ಚಿ ಹಾಕಲು ಈ ತರಹದ ಹೊಸ ಹೊಸ ಹೇಳಿಕೆ ಕೊಡತಾ ಇದ್ದಾರೆ
ಮುಖ್ಯಮಂತ್ರಿಗಳೇ ಸುಳ್ಳು ಆರೋಪ ಮಾಡತಾ ಇದ್ದಾರೆನಿಮ್ಮ ನಿಮ್ಮ ಶಾಸಕರನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದ ಅವರುಜನರು ತಮ್ಮ ಆಯ್ಕೆ ಮಾಡಿದ್ದಾರೆ ಅಧಿಕಾರ ಕೊಟ್ಟಿದ್ದಾರೆ
ನಮ್ಮನ್ನ ವಿರೋಧ ಪಕ್ಷದ ಸ್ಥಾನದಲ್ಲಿ ಕುಳ್ಳಿರಿಸಿದ್ದಾರೆಒಂದು ವಿರೋಧ ಪಕ್ಷವಾಗಿ ನಾವು ಏನು ಹೋರಾಟ ಮಾಡಬೇಕೋ ಅದನ್ನ ಮಾಡುತ್ತೇವೆ
ನಿಮಗೆ ಜನರು ಅದ್ಬುತವಾದ ಬೆಂಬಲ ಕೊಟ್ಟಿದ್ದಾರೆಯಾಕೆ ನಿಮಗೆ ಭಯ ಕಾಡತಾ ಇದೆನಾವು ವಿರೋಧ ಪಕ್ಷವಾಗಿ ನಮ್ಮ ಜವಾಬ್ದಾರಿ ಮಾಡತಾ ಇದ್ದೇವೆ.‌ನಿಮ್ಮಲ್ಲಿಯೇ ಹೊಂದಾಣಿಕೆ ಇಲ್ಲ ಉಪ ಮುಖ್ಯಮಂತ್ರಿ
ಡಿ .ಕೆ.ಶಿವಕುಮಾರ್ ಅವರ ಒಂದು ಗ್ರುಪ್, ಸಿಎಂ ಸಿದ್ದರಾಮಯ್ಯಾ ಗ್ರುಪ್, ಪರಮೇಶ್ವರ ಗ್ರುಪ್, ಖರ್ಗೆ ಗ್ರುಪ್ ಆಗಿವೆ.ಕಾಂಗ್ರೆಸ್ ನಲ್ಲಿ ಹಲವಾರು ಬಣಗಳಾಗಿವೆ
ಕಾಂಗ್ರೆಸ್ ಮನೆವೊಂದು ನಾಲ್ಕು ಬಾಗಿಲು ಆದಂತಾ ಆಗಿದೆಹೀಗಾಗಿ ಆ ಭಯ ಅವರನ್ನು ಕಾಡತಾ ಇದೆ ಎಂದರು. ಇದೇ ಸಂದರ್ಭದಲ್ಲಿ
ಜಾತಿಗಣತಿ ವರದಿ ಕುರಿತು ತಮ್ಮ ನಿಲುವು ಕುರಿತು ಸ್ಪಷ್ಟನೆ ಮಾಡಿದ ಅವರುಜಾತಿಗಣತಿ ಕುರಿತು ಪಕ್ಷಕ್ಕಿಂತ ಹಲವಾರು ಸಮಾಜದ ಮುಖಂಡರು
ಮಠಗಳ ಮಠಾಧೀಶರರು ಹೇಳಿಕೆ ಕೊಟ್ಟಿದ್ದಾರೆ
ಮವೀರಶೈವ ಮಹಾಸಭಾದ ಮುಖಂಡರಾದ ಶಾಮನೂರು ಶಿವಶಂಕರಪ್ಪ ಒಕ್ಕಲಿಗ ಸಮಾಜದ ಮುಖಂಡರು ಸಹ ಹೇಳಿಕೆ ಕೊಟ್ಟಿದ್ದಾರೆ.ಯಾವುದೇ ಕಾರಣಕ್ಕೂ ಈ ವರದಿಯನ್ನ ಒಪ್ಪಲ್ಲ ಅಂತಾ
ಇಡೀ ವ್ಯವಸ್ಥೆಯನ್ನ ತಿರುಚುವ ಕೆಲಸ ಸರಕಾರ ಮಾಡತಾ ಇದೆಇದಕ್ಕೆ ನಾವು ವಿರೋಧ ಮಾಡಿದ್ದೇವೆ ಎಂದರು


Spread the love

About Karnataka Junction

    Check Also

    ಹಿಂದೂ ಹಬ್ಬಗಳು ಬಂದಾಗ ಮಾತ್ರ ಕಾಂಗ್ರೆಸ್ಸಿಗೆ ಕಾನೂನು ನೆನಪಾಗುತ್ತೆ: ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್

    Spread the loveಬೆಂಗಳೂರು: ಕಾಂಗ್ರೆಸ್‌ನವರಿಗೆ ಹಿಂದೂ ಹಬ್ಬ ಬಂದಾಗ ಮಾತ್ರ ನೀತಿ, ನಿಯಮ, ಕಟ್ಟಳೆಗಳು ನೆನಪಿಗೆ ಬಂದುಬಿಡುತ್ತವೆ! ತಮ್ಮ ಬಾಂಧವರು …

    Leave a Reply

    error: Content is protected !!