Breaking News

ಬ್ಯಾಟ್ ಬೀಸಿ ನಾಲ್ಕು ಬಾಲ್ ಮೈದಾನಕ್ಕಟ್ಟಿದ ಸಚಿವ ಜೋಶಿ

Spread the love

ಹುಬ್ಬಳ್ಳಿ: ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ಇಂದು ಕೆಲ ಹೊತ್ತು ಕ್ರಿಕೆಟ್ ಟೂರ್ನಿಯಲ್ಲಿ ತೊಡಗಿ ಕ್ರೀಡಾ ಮನರಂಜನೆ ಪಡೆದರು.ದಿನ ನಿತ್ಯದ ರಾಜಕೀಯ, ಅಧಿಕಾರ- ಆಡಳಿತದಿಂದ ಇಂದು ಸ್ವಲ್ಪ ಹೊತ್ತು ದೂರ ಉಳಿದು ಯುವಕರೊಂದಿಗೆ ಬೆರೆತು ಕ್ರಿಕೆಟ್ ಆಡಿ ಯುವ ಸಮುದಾಯಕ್ಕೆ ಕ್ರೀಡಾ ಸ್ಫೂರ್ತಿ ನೀಡಿದರು.ಹುಬ್ಬಳ್ಳಿ ಧಾರವಾಡದ ಎಸ್ ಎಸ್ ಕೆ ಯೂತ್ ಕ್ಲಬ್ ಮತ್ತು ವಿಕೆ ಫೌಂಡೇಶನ್ ಸಹಯೋಗದಲ್ಲಿ ನಡೆಯುತ್ತಿರುವ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದ ಸಚಿವರು, ಬ್ಯಾಟಿಂಗ್ ಮಾಡುವ ಮೂಲಕ ಯುವ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
ಒಂದು ಓವರ್ ನಲ್ಲಿ ಮೊದಲ ನಾಲ್ಕೂ ಬಾಲ್ ಗಳನ್ನು ಬಿಡದೆ ಹೊಡೆದು ಅಚ್ಚರಿ ಮೂಡಿಸಿದರು. ಹೀಗೆ ಕೆಲ ಕಾಲ ಕ್ರಿಕೆಟ್ ಆಟವಾಡುತ್ತಾ ಯುವಕರೊಂದಿಗೆ ಸಮಯ ಕಳೆದರು.
ಧಾರವಾಡ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಸಚಿವರು ಇಂದು ಕ್ರಿಕೆಟ್ ಟೂರ್ನಿಯಲ್ಲೂ ನಾಲ್ಕು ಬಾಲ್ ಗಳನ್ನು ಹೊಡೆದಿದ್ದು ಕಾಕತಾಳೀಯ ಎಂಬಂತೆ ಇತ್ತು.


Spread the love

About Karnataka Junction

[ajax_load_more]

Check Also

ನವಲಗುಂದದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ*

Spread the love*ನವಲಗುಂದದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ* *ನಂಬಿಕೆಯಿಂದಲೇ ಅನೇಕ ಕಾಯಿಲೆ ದೂರ- ಶ್ರೀ ವೀರೇಂದ್ರ ಸ್ವಾಮೀಜಿ* …

Leave a Reply

error: Content is protected !!