ಹುಬ್ಬಳ್ಳಿ: ಇತ್ತೀಚೆಗೆ ಶಾಶ್ವತ ಹಿಂದೂಳಿದ ವರ್ಗ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರು ಸಿಎಂ ಅವರಿಗೆ ಜಾತಿಗಣತಿ ವರದಿ ಸಲ್ಲಿಸಿದ್ದು,ಇದರಲ್ಲಿ ಗಾಣಿಗ ಸಮಾಜವನ್ನು ಕಡಗಣಿಸಿಸಲಾಗಿದೆ. ಇದು ಅವೈಜ್ಞಾನಿಕ ವರದಿ ಎಂದು ಅಖಿಲ ಭಾರತ ಗಾಣಿಗ ಸಂಘದ ಗೌರವ ಅಧ್ಯಕ್ಷ ಶೇಖರ ಸಜ್ಜನ ಆರೋಪಿಸಿದರು.
ಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ ೯ ವರ್ಷದ ಹಿಂದೆ ಕಾಂತರಾಜು ಅವರಿಗೆ ಜಾತಿಗಣತಿ ವರದಿ ನೀಡಲು ಸೂಚಿಸಲಾಗಿತ್ತು. ಇತ್ತೀಚೆಗೆ ಈ ವರದಿ ಕಳೆದು ಹೋಗಿದೆ ಎನ್ನಲಾಗಿತ್ತು. ಆದರೆ ಜಯಪ್ರಕಾಶ ಹೆಗಡೆ ಅವರು ಕಾಂತರಾಜು ವರದಿ ಆಧರಿಸಿ ಜಾತಿಗಣತಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಕಳೆದಹೋದ ವರದಿ ಈಗ ಹೇಗೆ ಸಿಕ್ಕಿದೆ ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ಗಾಣಿಗ ಸಮಾಜ ೫೦ ಲಕ್ಷವಿದೆ. ಆದರೆ ಜಾತಿಗಣತಿಯಲ್ಲಿ ಎಲ್ಲಿಯೂ ಸಹ ಸಮಾಜದ ಬಗ್ಗೆ ಪ್ರಸ್ತಾಪಿಸಿಲ್ಲ. ಅಷ್ಟೇ ಅಲ್ಲದೇ ನಮ್ಮ ಸಮಾಜಯ ಯಾರ ಮನೆಗೆ ಅವರ ಭೇಟಿ ಮಾಡಿ ಸರ್ವೇ ಮಾಡಿಲ್ಲ. ಇದು ಸಂಪೂರ್ಣ ಅಸಮಂಜಸವಾದ ವರದಿಯಾಗಿದೆ ಎಂದರು.ಜಾತಿಗಣತಿ ಮೂಲ ಉದ್ದೇಶ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಒದಗಿಸುವುದಾಗಿದೆ. ಆದರೆ ಇಲ್ಲಿ ಒಂದು ಸಮಾಜವನ್ನು ಕಡೆಗಣಿಸಿ ಬೇಕಾದ ಸಮಾಜದವರ ಬಗ್ಗೆ ಮಾತ್ರ ಬರೆದಿದ್ದಾರೆ. ಈ ಜಾತಿ ಗಣತಿ ನೋಡಿದರೆ ಕೆಲವೆ ಸಮಾಜ ಗುರಿಯಾಗಿಸಿ ಮಾಡಿದಂತಿದೆ ಎಂದು ಹರಿಹಾಯ್ದರು.ಸರ್ಕಾರ ಸರ್ವೇ ಮಾಡಿದ ವರದಿ ನೀಡಬೇಕು. ದುರುದ್ದೇಶದಿಂದ ನಮ್ಮ ಸಮಾಜ ಹೊರಗಿಡುವ ಕೆಲಸ ಮಾಡಬಾರದು. ಒಂದು ವೇಳೆ ಸರ್ಕಾರ ಇದೇ ವರದಿಯನ್ನು ಸ್ವೀಕರಿಸಿ, ಅಂಗೀಕಾರಗೊಳಿಸಿದರೆ ನಾವು ಕಾನೂನು ಹೋರಾಟ ಮಾಡಬೇಕಾಗುತ್ತದೆ. ರಾಜ್ಯದ್ಯಂತ ಸಮಾಜ ಹೋರಾಟ ಹಾಗೂ ವಿಧಾನ ಸೌಧ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಲೋಣಿ, ಅಶೋಕ ನವಲಗುಂದ, ಜಿ.ಎಸ್. ಛಬ್ಬಿ ಇದ್ದರು.
