ಹುಬ್ಬಳ್ಳಿ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶರತ್ ಪವಾರ ಬಣದ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಹಾಗೂ ಯುವ ನಾಯಕ ರಾಜು ಅನಂತ ಸಾ ನಾಯಕವಾಡಿ ಅವರಿಂದ ದಿನದಿಂದ ದಿನಕ್ಕೆ ನಾಡಿನ ವಿವಿಧ ಮಠಾಧೀಶರಿಂದ ಆರ್ಶೀವಾದ ನೀಡುತಿದ್ದು ಇದೊಂದು ಜನಪರ ಕಾರ್ಯಕ್ಕೆ ಇನ್ನಷ್ಟು ಮಹಾಸ್ವಾಮಿಗಳಿಂದ ಪ್ರೋತ್ಸಾಹ ಹಾಗೂ ಆರ್ಶೀವಾದ ಸಿಕ್ಕಂತಾಗಿದೆ.ಈಗಾಗಲೇ ಹುಬ್ಬಳ್ಳಿ
ಅಕ್ಕಿ ಹೊಂಡ ಹೊಸಮಠದ ಪೂಜ್ಯ ಶ್ರೀ ಚಂದ್ರಶೇಖರ್ ಗುರೂಜಿ ಆರ್ಶೀವಾದ ಮಾಡಿದ್ದು ಹುಬ್ಬಳ್ಳಿ ತಾಲೂಕಿನ ಚೆನ್ನಾಪುರ ಅವಧೂತ ಮಹರ್ಷಿ ಸಿದ್ಧಾರ್ಥ್ ಮಹಾಸ್ವಾಮಿಗಳು ಸಹ ಇಂದು ಅಮೃತ ಹಸ್ತದಿಂದ ಆರ್ಶೀವಾದ ಮಾಡಿದರು. ದೀನ ದಲಿತರು ಹಾಗೂ ಬಡವರಿಗೆ ಬಗ್ಗೆ ಕಳಕಳಿ ಹೊಂದಿರುವ ರಾಜು ಅನಂತ ಸಾ ನಾಯಕವಾಡಿ ಅವರಿಗೆ ನಾಡಿನ ಹರ ಗುರು ಚರ ಮೂರ್ತಿಗಳ ಹಾಗೂ ನಾಡಿನ ಎಲ್ಲ ಮಠಾಧೀಶರರ ಆರ್ಶೀವಾದ ಇದೆ. ಅವರು ಇನ್ನಷ್ಟು ಜನರ ಕಲ್ಯಾಣ ಕಾರ್ಯ ಮಾಡಲಿ ಎಂದು ಹಾರೈಸಿದರು. ಇದರ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆ ಬಹುಮತದಿಂದ ತಮಗೆ ಧಾರವಾಡದ ಜಿಲ್ಲೆ ಜನತೆ ಜಯಶಾಲಿ ಮಾಡಲಿ ಎಂದು ಸನ್ಮಾನ ಮಾಡಿದರು.
