ಹುಬ್ಬಳ್ಳಿಯಲ್ಲಿ ವಾರಾಂತ್ಯ ಕರ್ಫ್ಯೂ ಸಂಪೂರ್ಣ ಎರಡನೇ ದಿನ ಸ್ಣಬ್ಧ

Spread the love

ಹುಬ್ಬಳ್ಳಿ : ಮಹಾಮಾರಿ ಕೊರೊನಾ ಎರಡನೇ ಅಲೆ ಕಟ್ಟಿ ಹಾಕಲು ವರ್ಷದ ಬಳಿಕ ಮತ್ತೇ ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಎರಡನೇ ದಿನಾವಾದ ಭಾನುವಾರ ಸಹ ಹುಬ್ಬಳ್ಳಿ ಪ್ರಮುಖ ರಸ್ತೆಗಳು ಈಗ ಸಂಪೂರ್ಣ ಬಂದ್ ಆದವು.
ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿ ಮಾಡಿದ ಜನರು ತಮ್ಮ ತಮ್ಮ ಮನೆ ಸೇರಿಕೊಂಡರು.
೧೦ ಗಂಟೆಯ ಒಳಗೆ ಅವಳಿ ನಗರದಾದ್ಯಂತ ರಸ್ತೆಗಳಿದ ಪೊಲೀಸರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸುವ ಕಾರ್ಯಾಚರಣೆಯಲ್ಲಿ ತೊಡಗಿ ವ್ಯಾಪಾರಸ್ಥರನ್ನು ವ್ಯಾಪಾರ ಸ್ಥಳದಿಂದ ತೆರವು ಮಾಡುವಲ್ಲಿ ಮುಂದಾದರು.
ಬೆಳಿಗ್ಗೆ ೧೦ ಗಂಟೆಯ ನಂತರ ಜನರ ಓಡಾಟ, ವಾಹನ ಸಂಚಾರವಿಲ್ಲದೇ ಹುಬ್ಬಳ್ಳಿಯಲ್ಲಿ ಸಂಪೂರ್ಣ ಬಿಕೋ ಎನ್ನುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.
ಕೊರೊನಾ ಕಠಿಣ ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕೇಶ್ವಾಪೂರ, ಗೋಕುಲ್ ರೋಡ್, ಪಿ.ಬಿ. ರೋಡ್, ಸ್ಟೇಶನ್ ಹಾಗೂ ಧಾರವಾಡದ ಜುಬ್ಲಿ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಸರ್ಪಗಾವಲಲ್ಲಿ ನಿಂತು ಬ್ಯಾರಿಕೇಡ್ ಹಾಕಿ ಬಿಗಿ ಬಂದೂ-ಬಸ್ತ್ ಒದಗಿಸಿದರು.
ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರನ್ನು ತಡೆದು ಪೊಲೀಸರು ಕಾರ್ಯಾಚರಣೆ ನಡೆಸಿ ಅಗತ್ಯ ಕೆಲಸಕ್ಕೆ ಹೋಗುವವರಿಗೆ ಅವಕಾಶ ನೀಡಿ ಅನಗತ್ಯ ಓಡಾಡುವರನ್ನು ತಡೆದು ವಾಹನಗಳನ್ನು ಸೀಜ್ ಮಾಡುವ ಮೂಲಕ ಅನಗತ್ಯವಾಗಿ ಹೊರಗೆ ಬಾರದಂತೆ ಎಚ್ಚರಿಕೆ ನೀಡಿದರು.


Spread the love

About gcsteam

    Check Also

    ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್

    Spread the loveಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ …

    Leave a Reply