ಸಿದ್ದರಾಮಯ್ಯ ಒಬ್ಬ ಅಸಮರ್ಥ ಸಿಎಂ- ಜೋಶಿ ಕಿಡಿ

Spread the love

ಹುಬ್ಬಳ್ಳಿ: ಒಂದು ರಾಜ್ಯದ ಆಂತರಿಕ ಭದ್ರತೆಯನ್ನೂ ಕಾಪಾಡಿಕೊಳ್ಳಲು ಕಾಂಗ್ರೆಸ್ ಅಶಕ್ತ ಮತ್ತು ಅಸಮರ್ಥ ವಾಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಸ್ಫೋಟ ಘಟನೆ ಬಗ್ಗೆ ಟ್ವಿಟ್ ಮಾಡಿರುವ ಸಚಿವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಆಂತರಿಕ ಭದ್ರತೆ ಕಾಪಾಡಿಕೊಳ್ಳುವಲ್ಲಿ ಕಾಂಗ್ರೆಸ್ ಒಂದು ವಿಫಲ ಆಡಳಿತ ಪಕ್ಷವಾಗಿರುವುದು ಮತ್ತೆ ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಪರಿಸ್ಥಿತಿ ಇಂದು ಎಲ್ಲಿಗೆ ಬಂದಿದೆ? ಎಂದರೆ ಜನ ಸದಾ ಆತಂಕದಲ್ಲೇ ಇರುವಂಥ ಸನ್ನಿವೇಶ ಕಾಂಗ್ರೆಸ್ ಆಡಳಿತದಲ್ಲಿ ಉದ್ಭವಿಸಿದೆ ಎಂದು ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.
ಶಾಸಕಾಂಗದ ದೇವಾಲಯ ಎಂದೇ ಕರೆಯಲ್ಪಡುವ ವಿಧಾನಸೌಧದಲ್ಲೇ ಪಾಕಿಸ್ತಾನಕ್ಕೆ ‘ಕೈ’ ಎತ್ತಿ ಜೈಕಾರ ಕೂಗಿದರು. ಅದರ ಬೆನ್ನಲ್ಲೇ ಈಗ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ! ಇದು ನಿಜಕ್ಕೂ ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಸ್ಥಿತಿಯನ್ನು ಉಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಸಚಿವ ಜೋಶಿ.
*ಆಡಳಿತ ವೈಫಲ್ಯಕ್ಕೆ “ಕೈ’ಗನ್ನಡಿ*: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಸಮರ್ಥ ಆಡಳಿತ ಮತ್ತು ರಾಜ್ಯ ಗೃಹ ಇಲಾಖೆಯ ವೈಫಲ್ಯಕ್ಕೆ ಈ ಎರಡೂ ಪ್ರಕರಣಗಳು ಕೈಗನ್ನಡಿ ಎಂದು ಸಚಿವರು ಜೋಶಿ ಹೇಳಿದ್ದಾರೆ.
*ಸಿದ್ದರಾಮಯ್ಯ ಅಸಮರ್ಥ ಆಡಳಿತಗಾರ*: ಇನ್ನು ಸಿದ್ದರಾಮಯ್ಯ ಅವರು ಸಿಎಂ ಪಟ್ಟ ಉಳಿಸಿಕೊಳ್ಳಲು ತೋರಿದ ದಕ್ಷತೆಯನ್ನು ರಾಜ್ಯದ ಆಂತರಿಕ ಭದ್ರತೆ ಬಗ್ಗೆ ತೋರಿಲ್ಲ. ರಾಜ್ಯ ಕಂಡ ಅತೀ ಅಸಮರ್ಥ ಆಡಳಿತಗಾರ ಎಂದರೆ ಅದು ಸಿದ್ದರಾಮಯ್ಯ ಎಂಬುದು ಇದರಿಂದ ಸಾಬೀಗುತ್ತಿದೆ ಎಂದು ಪ್ರಹ್ಲಾದ ಜೋಶಿ ಸಿಎಂ ವಿರುದ್ಧ ಹರಿ ಹಾಯ್ದಿದ್ದಾರೆ.


Spread the love

Leave a Reply

error: Content is protected !!