ಎಂ ಎಂ‌. ಜೋಶಿ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆಗೊಳಿಸಿದ ಉಪರಾಷ್ಟ್ರಪತಿ ಜಗದೀಪ ಧನಖರ

Spread the love

ಹುಬ್ಬಳ್ಳಿ: ಎಂ ಎಂ‌. ಜೋಶಿ ಕಣ್ಣಿನ ಆಸ್ಪತ್ರೆ ಐಸಿರಿ ಕಟ್ಟಡವನ್ನು ಶುಕ್ರವಾರ ಹುಬ್ಬಳ್ಳಿಯಲ್ಲಿ ಉಪರಾಷ್ಟ್ರಪತಿ ಜಗದೀಪ ಧನಖರವರು ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, ಎಂ. ಎಂ. ಜೋಶಿ ಅವರ ಆರೋಗ್ಯ ಕ್ಷೆತ್ರದ ಸಾಧನೆ ಅಪಾರ. ತಾಂತ್ರಕತೆ ಬಳಸಿಕೊಂಡು, ಹೊಸ ಪ್ರಯೋಗಗಳ‌ ಮೂಲಕ ಜನಸಾಮಾನ್ಯರ ಸೇವೆ ಮಾಡುತ್ತಿದ್ದಾರೆ ಎಂದು ಎಂ. ಎಂ.ಜೋಶಿ ಅವರ ಸೇವಾ ಕಾರ್ಯಗಳಿಗೆ ಮೆಚ್ಚುಗೆ‌ ವ್ಯಕ್ತಪಡಿಸಿದರು.
ಮನಸ್ಸು ಶುದ್ಧವಾಗಿಟ್ಟುಕೊಂಡು ಸೇವಾಮನೋಭಾವದಿಂದ ಕೆಲಸ‌ ಮಾಡಿದರೆ ಖಂಡಿತವಾಗಿ ಸಾಧನೆ‌ ನಿಮ್ಮದಾಗುತ್ತದೆ. ಅದಕ್ಕೆ ಎಂ.‌ಎಂ.‌ಜೋಶಿ ಅವರೆ ನಿದರ್ಶನ ಎಂದರು.
ಸ್ವಚ್ಚ ಭಾರತ ಅಭಿಯಾನ‌ ಮೂಲಕ ಪ್ರಧಾನಮಂತ್ರಿಗಳು ದೇಶದಲ್ಲಿ‌ ಮಹಾ ಕ್ರಾಂತಿ ಮಾಡಿದ್ದಾರೆ. ಹೊಗೆ‌ಮುಕ್ತ ಅಡುಗೆ‌ ಮನೆ, ಶುದ್ಧ ನೀರು, ಆಯುಷ್ಮಾನ ಯೋಜನೆ ಜಾರಿಗೊಳಿಸಿ ನಾಗರೀಕರು ಆರೋಗ್ಯ ಯುತ ಜೀವನ ನಡೆಸಲು ನೇರವಾಗಿದ್ದಾರೆ. ವಿಕಸಿತ ಭಾರತ ಪರಿಕಲ್ಪನೆಯಲ್ಲಿ ಭಾತರ ಸಾಗುತ್ತಿದೆ. ಬಲಿಷ್ಠ ಭಾರತ ನಿರ್ಮಾಣ ನಮ್ಮದು. ೧೦ ವರ್ಷಗಳಲ್ಲಿ ದೇಶದಲ್ಲಿ ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲವು ಅಭಿವೃದ್ಧಿ ಸಾಧಿಸಿವೆ ಎಂದು ಹೇಳಿದರು.
ಕೇಂದ್ರ‌ ಸಂಸದೀಯ ವ್ಯವಹಾರ, ಕಲ್ಲಿದ್ದಲು, ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಮಾತನಾಡಿ, ಜಗತ್ತಿನಲ್ಲಿ ಭಾರತ ಆರ್ಥಿಕತೆಯಲ್ಲಿ ಪ್ರಸ್ತುತ ೫ನೇ ಸ್ಥಾನದಲ್ಲಿದೆ. ಇದಕ್ಕೆ ರಾಷ್ಟ್ರದ ಆರೋಗ್ಯ ಕ್ಷೇತ್ರದ ಕೊಡುಗೆಯು ಅಪಾರ. ಭಾರತ ಆರೋಗ್ಯ ಅಭಿವೃದ್ಧಿ ಹೊಂದುತ್ತಾ ಜಗತ್ತಿನ ಮೆಡಿಕಲ್ ಹಬ್ ಆಗುತ್ತಿದೆ ಎಂದರು. ಭಾರತ ವಿಶ್ವಾಸಾರ್ಹ ದೇಶವಾಗಿ ಆರ್ಥಿಕ ಪರಿವರ್ತನೆ ಹೊಂದುವ ಮೂಲಕ, ೩ನೇ ಸ್ಥಾನಕ್ಕೆರಲಿದೆ ಎಂದು ವಿಶ್ವಾಸ ವ್ಯಕ್ಯಪಡಿಸಿದರು. ಉಪರಾಷ್ಟ್ರಪತಿಗಳು ಹುಬ್ಬಳ್ಳಿಗೆ ಆಗಮಿಸಿದ್ದು ಹೆಚ್ಚು ಸಂತಸ ತಂದಿದೆ. ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ದವರು ಎಂದು ಹೇಳಿದರು.
ರಾಜ್ಯ ಕಾನೂನು, ನ್ಯಾಯ ಮಾನನ ಹಕ್ಕುಗಳು ಸಂಸದೀಯ ವ್ಯವಹಾರಗಳು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ಅವರು ಮಾತನಾಡಿ, ಡಾ. ಎಂ. ಎಂ ಜೋಶಿ ಅವರಲ್ಲಿ ಪ್ರಮುಖವಾದ ಎರಡು ಗುಣಗಳಿವೆ. ಮಾನವೀಯತೆ ಹಾಗೂ ದೈವಿ ಗುಣಗಳು. ಇದರಿಂದ ಅವರು ಸಮಾಜದಲ್ಲಿನ ಅಶಕ್ತರ ಆರೊಗ್ಯ ಸುದಾರಣೆಗೆ ಹಗಲಿರುಳು ಶ್ರಮಿಸಿ, ಮಹತ್ವದ ಸಾಧನೆ ಮಾಡಿದ್ದಾರೆ. ಹುಬ್ಬಳಿಯಿಂದ ತಮ್ಮ ಸೇವೆ ಆರಂಭಿಸಿ ಲಕ್ಷಾಂತರ ಬಡವರಿಗೆ ನೆರವಾಗಿದ್ದಾರೆ. ನಾವು ಚಿಕ್ಕವರಿದ್ದಾಗ ಹಳ್ಳಿಗಳಲ್ಲಿ ಕಣ್ಣಿನ ಹೆಲ್ತ ಕ್ಯಾಂಪ ಮಾಡಿ ಅಪಾರ ಜನರಿಗೆ ನೆರವು ನೀಡಿದವರು ಇವರು. ರಾಜ್ಯದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದ ವೈಧ್ಯರಲ್ಲಿ ಎಂ.ಎಂ. ಜೋಶಿ ಒಬ್ಬರಾಗಿದ್ದಾರೆ. ಇಂದು ಉದ್ಘಾಟನೆಯಾದ ಐಸಿರಿ ಆಸ್ಪತ್ರೆ ಕಟ್ಟಡ ಬಡವರ ಆಶಾಕಿರಣವಾಗಲಿ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಮಹೇಶ ತೆಂಗಿನಕಾಯಿ, ಶ್ರೀನಿವಾಸ್ ಮಾನೆ, ಎಂ. ಆರ್. ಪಾಟೀಲ, ಮಹಾನಗರ ಪಾಲಿಕೆ ಮೇಯರ್ ಶ್ರೀಮತಿ ವೀಣಾ ಬಾರದ್ವಾಡ್, ಎಂ.ಎಂ. ಜೋಶಿ ಆಸ್ಪತ್ರೆಯ ಸಂಸ್ಥಾಪಕರಾದ ಪದ್ಮಶ್ರೀ ಡಾ. ಎಂ. ಎಂ. ಜೋಶಿ, ಶ್ರೀಮತಿ ಪ್ರಮೀಳಾ ಜೋಶಿ, ಡಾ. ಶ್ರೀನಿವಾಸ್ ಜೋಶಿ ಉಪಸ್ಥಿತರಿದ್ದರು.


Spread the love

Leave a Reply

error: Content is protected !!