ಹುಬ್ಬಳ್ಳಿ: ಇಂದು ಧಾರವಾಡ ಐಐಐಟಿಗೆ ಆಗಮಿಸಿದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್ ದಂಪತಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಗೃಹಕ್ಕೆ ತೆರಳಿ ಔತಣ ಸ್ವೀಕರಿಸಿದರು.
ಹುಬ್ಬಳ್ಳಿಯಲ್ಲಿನ ಮನೆಗೆ ಧಾವಿಸಿದ ಉಪರಾಷ್ಟ್ರಪತಿ ದಂಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಜೋಶಿ ದಂಪತಿ ಆರತಿ ಬೆಳಗಿ ಆತ್ಮೀಯ, ಆದರದಿಂದ ಬರಮಾಡಿಕೊಂಡರು.
ಜೋಶಿ ಅವರ ಮನೆಯಲ್ಲಿ ಧಾರವಾಡ ಪೇಡ ಸಿಹಿ ಸವಿದ ಉಪರಾಷ್ಟ್ರಪತಿ ದಂಪತಿ ಅತೀವ್ರ ಸಂತಸ ವ್ಯಕ್ತಪಡಿಸಿದರು.
ಸಚಿವ ಪ್ರಹ್ಲಾದ ಜೋಶಿ ಕುಟುಂಬದ ಸದಸ್ಯರೊಂದಿಗೆ ಬೆರೆತು ಲಘು ಉಪಹಾರ ಸ್ವೀಕರಿಸಿದ ಉಪರಾಷ್ಟ್ರಪತಿ ಬಳಿಕ ಸಾಮಾನ್ಯರಂತೆ ಬಿಜೆಪಿ ಕಾರ್ಯಕರ್ತರೊಂದಿಗೆ ಕೆಲ ಸಮಯ ಕಳೆದರು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ವಿಧಾನಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ ಉಪರಾಷ್ಟ್ರಪತಿ ಅವರಿಗೆ ಸಾಥ್ ನೀಡಿದರು.
Check Also
ಹೆಣ್ಣು ಮಕ್ಕಳೇ ಸ್ಟಾಂಗು ಗುರು ಕಾರ್ಯಕ್ರಮ ಸ್ಟಾರ್ ಸುವರ್ಣ ಚಾಲನೆ
Spread the loveಹುಬ್ಬಳ್ಳಿ: ನಗರದ ವಿನೂತನ ಪೌಂಡೇಶನ್ ಹುಬ್ಬಳ್ಳಿ ಅಧ್ಯಕ್ಷರು ಅಕ್ಕಮ್ಮಾ ಕಂಬಳಿ ಮುಂತಾದವರ ನೇತೃತ್ವದಲ್ಲಿ ಹೆಣ್ಣು ಮಕ್ಕಳೇ ಸ್ಟಾಂಗು …