ಕಲಘಟಗಿ ( ಧಾರವಾಡ): ತಾಲೂಕಿನ ದುಮ್ಮವಾಡ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.ಮೂರು ದಿನಗಳ ಕಾಲ ನೂರು ಮಕ್ಕಳ ಕಾರ್ಯಗಾರದಲ್ಲಿ ಕಥೆ, ಕವನ, ನಾಟಕ , ಮಕ್ಕಳು ಚಟುವಟಿಕೆಗಳ ಮೂಲಕ ಮಕ್ಕಳ ಕಲ್ಪನೆಯಿಂದ್ ತಮ್ಮ ಸ್ವಂತ ಅನುಭವದಿಂದ ಕಥೆ ಕವನ ನಾಟಕಗಳನ್ನು ರಚಿಸುವ ಕಲೆಯನ್ನು ಕಲಿತರು. ರಿಪೋರ್ಟಿಂಗ್ ವಿಭಾಗದಲ್ಲಿ ಸಾಧಕ ವ್ಯಕ್ತಿಗಳನ್ನು ಪರಿಚಯಿಸಿಕೊಳ್ಳುವ ವಿಶೇಷ ಕಲೆಯನ್ನು ಮಕ್ಕಳು ಕಲಿತುಕೊಂಡರು. ಈ ಮೂಲಕ ಮಕ್ಕಳು ಓದುವ ಗುಣವನ್ನು ಬೆಳೆಸಿಕೊಂಡು ಪುಸ್ತಕ ಅಭಿರುಚಿಯನ್ನು ಬೆಳೆಸಿಕೊಳ್ಳುತ್ತಾರೆ. ಭಾರತ ಜ್ಞಾನ ವಿಜ್ಞಾನ ಸಮಿತಿ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯೋಗದೊಂದಿಗೆ ಇಂತಹ ವಿಶಿಷ್ಟವಾದ ಮಕ್ಕಳನ್ನು ಸಂಭ್ರಮವನ್ನು ಸಂಘಟಿಸಲಾಗಿತ್ತು. ರಿಪೋರ್ಟಿಂಗ್ ವಿಭಾಗದಲ್ಲಿ ಕಲಘಟಗಿ ಸುನಿಲ್ ಕಮ್ಮಾರವರು ತಮ್ಮ ಹಳೆಯ ನಾಣ್ಯ ಮತ್ತು ನೋಟುಗಳ ಸಂಗ್ರಹವನ್ನು ಮಕ್ಕಳ ಮುಂದೆ ಪ್ರದರ್ಶಿಸಿ ನಾಡಿನ ಸಂಸ್ಕೃತಿ ಇತಿಹಾಸದ ಹಿರಿಮೆಯನ್ನು ತಿಳಿದುಕೊಳ್ಳಲು ಇವೆಲ್ಲ ಇತಿಹಾಸದ ಆಧಾರವಾಗಿದೆ ಎಂದರು. ಮಕ್ಕಳು ಈ ಹವ್ಯಾಸಕ್ಕೆ ಕಾರಣವಾದ ಅಂಶಗಳು ಕುಟುಂಬದ ಹಿನ್ನೆಲೆ ಬಾಲ್ಯದ ಜೀವನ ಉದ್ಯೋಗ ಇವೆಲ್ಲವುಗಳ ಬಗ್ಗೆ ಮಕ್ಕಳು ಕುತೂಹಲಕಾರಿ ಪ್ರಶ್ನೆಯನ್ನು ಕೇಳಿ ಉತ್ತರ ಪಡೆದುಕೊಂಡರು. ವ್ಯಕ್ತಿತ್ವ ಬೆಳವಣಿಗೆಯ ಉತ್ತಮ ಹವ್ಯಾಸಗಳು ಕಾರಣವಾಗುತ್ತದೆ ಎಂಬ ಅಂಶವನ್ನು ಮಕ್ಕಳು ತಿಳಿದುಕೊಂಡರು. ಈ ಸಂದರ್ಭದಲ್ಲಿ ಬಿ ಜೆ ವಿ ಎಸ್ ಅಧ್ಯಕ್ಷರಾದ ಶಿವಾನಂದ ಭಜಂತ್ರಿ ಸಂಪನ್ಮೂಲ ಶಿಕ್ಷಕರಾದ ವೈಜಿ ಭಗವತಿ, ಸೋಮಶೇಖರ್ ಕುಂಟಕರ್, ಮಾರುತಿ ಕಾಂಬಳೆ, ವಿದ್ಯಾರ್ಥಿಗಳು ಉಲ್ಲಾಸದಿಂದ ಎಲ್ಲಾ ಕಾರ್ನರ್ ಗಳಲ್ಲಿ ತೊಡಗಿಸಿಕೊಂಡಿರುವುದು ವಿಶೇಷವಾಗಿತ್ತು.
Check Also
ಹಿಂದೂ ಹಬ್ಬಗಳು ಬಂದಾಗ ಮಾತ್ರ ಕಾಂಗ್ರೆಸ್ಸಿಗೆ ಕಾನೂನು ನೆನಪಾಗುತ್ತೆ: ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್
Spread the loveಬೆಂಗಳೂರು: ಕಾಂಗ್ರೆಸ್‌ನವರಿಗೆ ಹಿಂದೂ ಹಬ್ಬ ಬಂದಾಗ ಮಾತ್ರ ನೀತಿ, ನಿಯಮ, ಕಟ್ಟಳೆಗಳು ನೆನಪಿಗೆ ಬಂದುಬಿಡುತ್ತವೆ! ತಮ್ಮ ಬಾಂಧವರು …