Breaking News

ಬಾರ್, ಬ್ಯೂಟಿಪಾರ್ಲರ್ ಓಪನ್ ಗೆ ಒಕೆ ಪೋಟೋ ಸ್ಟುಡಿಯೋ ರಿಸ್ಟಿಂಗಸನ್ ಯಾಕೆ – ಕಿರಣ ಬಾಕಳೆ

Spread the love

ಹುಬ್ಬಳ್ಳಿ; ರಾಜ್ಯದಲ್ಲಿ ಭಾಗಶಃ ಲಾಕ್ಡೌನ್ ಹೇರಿರುವ ರಾಜ್ಯ ಸರ್ಕಾರ ಬಾರ್ ಬ್ಯೂಟಿ ಪಾರ್ಲರ್ ಸಲೂನ್ ಗಳನ್ನು ತೆರೆಯಲು ಅವಕಾಶ ಕೊಟ್ಟು ದೂರದಿಂದಲೇ ಸೇವೆ ನೀಡುವ ನಮ್ಮ ಫೋಟೋ ಸ್ಟುಡಿಯೋ ಗಳನ್ನು ಬಂದು ಮಾಡಿಸಿದ್ದಕ್ಕೆ ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘ ವಿರೋಧಿಸಿದೆ.
ಕೋವಿಡ್ ನಿಂದಾಗಿ ಕಳೆದ ವರ್ಷದಲ್ಲಿ ಭಾರೀ ಸಿಜನ್ ಇತ್ತು ಆಗ ಲಾಕ್ ಡೌನ್ ವೇಳೆ ಸ್ಟುಡಿಯೋಗಳು ಬಂದಾಗಿದ್ದು. ಆಗ ಕೂಡ ಮದುವೆ ಸಮಾರಂಭಗಳು ನಡೆದಿಲ್ಲ ಮತ್ತು ನಮ್ಮ ಛಾಯಾ ಗ್ರಾಹಕರು ಕೆಲಸ ಇಲ್ಲದೆ ನಷ್ಟ ಅನುಭವಿಸಿದ್ದು ಈ ವರ್ಷವೂ ಕೂಡ ಸರಕಾರ ಮದುವೆ ಸಮಾರಂಭಗಳಿಗೆ ಷರತ್ತು ಬದ್ಧ ಅವಕಾಶ ಕೊಟ್ಟು ಫೋಟೋ ಸ್ಟುಡಿಯೋ ಗಳನ್ನು ಬಂದು ಮಾಡಿಸುತ್ತಿದೆ ಕನಿಷ್ಠಪಕ್ಷ ಮದುವೆಯಲ್ಲಿ ಛಾಯಾಗ್ರಾಹಕರಿಗೆ ಆದರೂ ಕೂಡ ಪರವಾನಿಗೆ ಕೊಡಬಹುದಿತ್ತು ಅದು ಕೂಡ ಕೊಟ್ಟಿಲ್ಲ ಸ್ಟುಡಿಯೋಗಳು ಕೂಡ ಬಂದ್ ಮಾಡಿಸಿದ್ದಾರೆ. ಮತ್ತು ಮದುವೆ ಮತ್ತಿತರ ಸಮಾರಂಭಗಳಲ್ಲಿ ಛಾಯಾಗ್ರಹಕರು ಪ್ರತ್ಯೇಕ ಸ್ಥಳದಲ್ಲಿದ್ದು ಕೂಡ ಅಂತರ ಕಾಯ್ದುಕೊಂಡು ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿಯುತ್ತಾರೆ. ಆದರೆ ಸಲೂನ್ .ಪಾರ್ಲರ್ ಗಳಲ್ಲಿ ತಲೆ ಮೈ ಮುಟ್ಟಿ ಸೇವೆ ನೀಡುವ ಅವರಿಗೆ ಅವಕಾಶ ಕೊಟ್ಟಿದ್ದು ಕೊರೋನಾ ಹೆಚ್ಚಾಗಲು ಇವರು ಒಂದು ರೀತಿಯ ಕಾಣಬಹುದು ಇದು ಸರಿ ಅಲ್ಲ ಯಾರ ಸಂಪರ್ಕಕ್ಕೂ ಹೋಗದೆ ಸೇವೆ ಮಾಡುವ ನಮ್ಮ ಫೋಟೋ ಸ್ಟುಡಿಯೋ ಗಳನ್ನು ಬಂದ ಮಾಡಿಸಿದ್ದು. ಅವೈಜ್ಞಾನಿಕ ವಾಗಿದೆ . ಕಾರಣ ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘ ವತಿಯಿಂದ ನಾವು ರಾಜ್ಯ ಸರ್ಕಾರಕ್ಕೆ ನಾವು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ ರಾಜ್ಯದ ಎಲ್ಲಾ ಫೋಟೋ ಸ್ಟುಡಿಯೋ ಗಳನ್ನು ಸೋಮವಾರದಿಂದ ಓಪನ್ ಮಾಡಿಸಬೇಕು ಮತ್ತು ನಮಗೆ ಬೇಕಾದರೆ ಕೆಲವೊಂದಿಷ್ಟು ಮಾರ್ಗಸೂಚಿ ಗಳನ್ನೂ ಕೊಟ್ಟರೆ ನಾವು ಕೂಡ ಅದನ್ನು ಪಾಲಿಸಿ ಆ ಮಾರ್ಗಸೂಚಿ ಪ್ರಕಾರ ಅಂಗಡಿಗಳನ್ನು ತೆರೆಯುತ್ತೇವೆ ಎಂದು ಹುಬ್ಬಳ್ಳಿ ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷ ಕಿರಣ್ ಬಾಕಳೆ ತಿಳಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ

Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …

Leave a Reply

error: Content is protected !!