ವೈಜ್ಞಾನಿಕ ನೀರಿನ ಪೈಪ್ ಲೈನ್ ಅಳವಡಿಕೆಗೆ ಒತ್ತಾಯ

Spread the love

ಹುಬ್ಬಳ್ಳಿ: ಎಲ್ಲ ನಳ ಸಂಪರ್ಕಗಳನ್ನು ಬದಲಾವಣೆ ಮಾಡಬೇಕಿದೆ. ಯೋಜನೆಯ ನಿರ್ವಾಹಕರಾದ ಎಲ್ ಆ್ಯಂಡ್ ಟಿ ಕಂಪನಿಯವರು ಗೃಹ ಬಳಕೆ ಸಂಪರ್ಕಕ್ಕೆ ೯೨೦೦ ರೂ. ಶುಲ್ಕ ನಿಗದಿಪಡಿಸಿದ್ದಾರೆ. ಇದರಲ್ಲಿ ಶೇ. ೫೦ರಷ್ಟು ಶುಲ್ಕವನ್ನು ಗೃಹ ಬಳಕೆದಾರರು ಪಾವತಿಸಿ ಸಂಪರ್ಕ ಪಡೆಯಬೇಕು. ಉಳಿದ ಶೇ. ೫೦ ರಷ್ಟು ವೆಚ್ಚವನ್ನು ಗ್ರಾಹಕರ ಮಾಸಿಕ ಬಿಲ್ಲಿನಲ್ಲಿ ೫೦ ರೂ. ನಂತೆ ವಸೂಲಿ ಮಾಡಲಾಗುವುದು ಎಂದು ತಿಳಿಸಿದರು.ನಗರದಲ್ಲಿಂದು ಮಹಾನಗರ ಪಾಲಿಕೆ ಸಭಾಂಗಣದಲ್ಲಿಂದು ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿದರು.
ಹಿರಿಯ ಸದಸ್ಯ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಹು-ಧಾ ಮಹಾನಗರ ಪಾಲಿಕೆ ಹಾಗೂ ನೀರು ಸರಬರಾಜು ಏಜೆನ್ಸಿಗಳೊಂದಿಗೆ ಆಗಿದಿರುವ ಒಪ್ಪಂದದ ಪ್ರಕಾರ ನಳ ಸಂಪರ್ಕ ಬದಲಾವಣೆ ಮಾಡಲಾಗುತ್ತಿದೆಯೇ ? ಮೂಲ ಒಪ್ಪಂದ ಏನು? ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ವೀರಣ್ಣ ಸವಡಿ, ಗೃಹ ಬಳಕೆ ಸಂಪರ್ಕದ ಮೀಟರ್ ವೆಚ್ಚ ಯಾಕೆ ಇಷ್ಟು ? ೯೨೦೦ ರೂ. ದುಬಾರಿಯಾಗಿದ್ದು, ಸಾರ್ವಜನಿಕರು ನಮ್ಮ ಮನೆಯ ಮುಂದೆ ಕುಳಿತುಕೊಳ್ಳುತ್ತಾರೆ. ನಾವು ಉತ್ತರ ಕೊಡಬೇಕಾಗುತ್ತದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಮಧ್ಯ ಪ್ರವೇಶಿಸಿದ ಮೇಯರ್ ವೀಣಾ ಬರದ್ವಾಡ, ಈ ವಿಷಯದ ಕುರಿತು ಸಂಪೂರ್ಣ ಮಾಹಿತಿಯೊಂದಿಗೆ ಮುಂದಿನ ಸಭೆಯಲ್ಲಿ ಚರ್ಚೆ ನಡೆಸಲು ತೀರ್ಮಾನಿಸಿದರು.


Spread the love

Leave a Reply

error: Content is protected !!