Breaking News

ಅಂಜುಮನ್ ಇಸ್ಲಾಂ ಸಮಿತಿ ಪದಾಧಿಕಾರಿಗಳಿಂದ ಮೂರುಸಾವಿರ ಮಠಕ್ಕೆ ಭೇಟಿ

Spread the love

ಹುಬ್ಬಳ್ಳಿ: ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿರು ಹುಬ್ಬಳ್ಳಿ ಧಾರವಾಡ ಹಿಂದು ಮುಸ್ಲಿಮ್ ರ ಸಾಮರಸ್ಯ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಮಿತಿ ಪದಾಧಿಕಾರಿಗಳಿಂದ ಮೂರುಸಾವಿರ ಮಠಕ್ಕೆ ಭೇಟಿ ನೀಡಿ ಮಠದ ಶ್ರೀ ಜಗದ್ಗುರು ಗುರುಸಿದ್ಧರಾಜೇಂದ್ರ ಮಹಾಸ್ವಾಮಿಗಳಿಂದ ಆರ್ಶೀವಾದ ಪಡೆದುಕೊಂಡರು.ಅಂಜುಮನ್ ಇಸ್ಲಾಂ ಸಮಿತಿ ನೂತನಅಧ್ಯಕ್ಷ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ನೇತೃತ್ವದಲ್ಲಿ ತೆರಳಿದ ನಿಯೋಗ ಒಂದು ಗಂಟೆಗೂ ಅಧಿಕ ಕಾಲ ಶ್ರೀ ಗಳ ಜೊತೆಗೆ ಮಹತ್ವದ ವಿಷಯ ಕುರಿತು ಸಂವಾದ ಮತ್ತು ಚರ್ಚೆ ನಡೆಸಲಾಯಿತು.ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಮಿತಿಗೂ ಮೂರುಸಾವಿರ ಮಠಕ್ಕೂ ಅವಿನಾಭಾವ ಸಂಬಂಧ ಆಗಿದ್ದುನೂರಾರು ವರ್ಷಗಳಿಂದ ಅಂಜುಮನ್ ಇಸ್ಲಾಂ ಸಮಿತಿ ಪದಾಧಿಕಾರಿಗಳು ಮಠಕ್ಕೆ ನಡೆದುಕೊಳ್ಳುತ್ತಾರೆ. ಮುಖಂಡರಾದ ಮಹೇಂದ್ರ ಸಿಂಘಿ, ಸದಾನಂದ ಡಂಗನವರ, ಅಲ್ತಾಫ್ ಹಳ್ಳೂರು ಮುಂತಾದವರು ಉಪಸ್ಥಿತಿರಿದ್ದರು.
ಹುಬ್ಬಳ್ಳಿಯಲ್ಲಿ ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಹೇಳಿಕೆ ನೀಡಿದ್ದು ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಮಿತಿಗೆ‌ ಬಹು ವರ್ಷಗಳ ಐತಿಹಾಸಿಕ ಪರಂಪರೆ ಇದೆ
ಹಿಂದು ಮುಸ್ಲಿಮ್ ಸಮುದಾ ಯದವರಿಗೆ ಅನುಕೂಲ ಆಗಿದೆ
ಅಂಜುಮನ್ ಇಸ್ಲಾಂಮೀಯ ಸಂಸ್ಥೆ ಸ್ಥಾಪನೆ ಆಗಿದ್ದು 1903 ರಲ್ಲಿ ಈಗ ಇದಕ್ಕೆ 121 ವರ್ಷದ ಆಯುಷು ಇದೆ
ಮೂರುಸಾವಿರ ಮಠಕ್ಕೊ ಅಂಜುಮನ್ ಸಂಸ್ಥೆ ಗೂ ನೀಕಟ ಸಂಬಂಧ ಇದ್ದುನಾನು 1983 ರಲ್ಲಿ ಮೊದಲಬಾರಿಗೆ ಈ ಚುನಾವಣೆ ಗೆ ಆರಸಿ ಬಂದಿದ್ದೆ ಅಧ್ಯಕ್ಷನಾಗಿದ್ದ ದೊಡ್ದ ಅಜ್ಜನವರು ಇದ್ದರು
ಆವಾಗ ಸ್ವಲ್ಪ ಗಲಾಟೆಗಳು ಆಗ್ತಾ ಇದ್ವು ಹುಬ್ಬಳ್ಳಿಯಲ್ಲಿಆವಾಗ ಅವರಿಗೆ ಭೇಟಿಯಾಗಿ ಮತ್ತು
ಮಾಜಿ ಮಂತ್ರಿ ಅಜಿತ್ ಶೇಠ ಸಾಹೇಬ್ರು ಕರೆದುಕೊಂಡ ಬಂದು ಹೋಗಿ ಶ್ರೀ ಗಳ ಆರ್ಶೀವಾದ ಸಹ ಪಡೆದಿದ್ದರು.ನಾವು ಒಂದು ಕಾರ್ಯಕ್ರಮ ಮಾಡಿ
ಇಲ್ಲಿ ಬದ್ರವಾದಂತಹ ಶಾಂತಿ ಸಭೆಯನ್ನು ಸಹ ಮಾಡಿದ್ದು
ಯಾವಾಗಲೂ ಮಠದಲ್ಲಿ ಶಾಂತಿ ಸಭೆಯನ್ನು ನಡೆಸಲಾಗುತ್ತಿತ್ತು
ಯಾವುದೇ ಹಬ್ಬ ಬಂದರು ಸಹ
ಅವಗ್ಲಿಂದ ನಾವು ಸಭೆಗಳನ್ನು ಮಾಡಿಕೊಂಡು ಬಂದಿದ್ದೇವೆ ಶ್ರೀ ಗಳ ಮಾರ್ಗದರ್ಶನದಲ್ಲಿ ಶಾಂತಿ ಸಭೆಗಳನ್ನು ಕರೆದು ಚರ್ಚೆ ಮಾಡುವದರ ಜೊತೆಗೆ ನಾವು ಸಹ ರಂಜಾನ್ ಹಬ್ಬ ಹಾಗೂ ಬಕ್ರೀದ್ ಹಬ್ಬದ
ಪ್ರಾರ್ಥನೆ ಆದ ತಕ್ಷಣ ನಂತರ ಮೂರುಸಾವಿರ ಮಠಕ್ಕೆ ಬಂದು
ಅವರ ದರ್ಶನ ಮಾಡಿ ಆಶೀರ್ವಾದವನ್ನು ಪಡಿತ ಇದ್ದೇವೆ
ಈ ಪದ್ಧತಿ ಇಗ್ಲೂ ಜಾರಿಗೆ ಇದೆ
ಈ ಪರಂಪರೆ ಈ ಜಗತ್ತು ಇರೋವರಿಗೂ ನಡೆಯಬೇಕು
ಒಳ್ಳೆಯ ಪರಂಪರೆ ಮಾದರಿಯದಂತಹದ್ದು
ಸರ್ವೇ ಜನೋ ಸುಖಿನೋ ಭವಂತು ನಾನ್ನುಡಿಯಂತೆ ನಡೆದುಕೊಳ್ಳುತಿದ್ದೇವೆ ಎಂದರು.
ಇದೇ ವೇಳೆ ಹಿಂದು ಸಮಾಜದ ನಾಯಕ ಮಹೇಂದ್ರ ಸಿಂಘಿ ಸಹ ಹೇಳಿಕೆ ನೀಡಿದ್ದುಹುಬ್ಬಳ್ಳಿ ಅಂಜುಮನ್ ಸಂಸ್ಥೆಗೆ ಮಾಜಿ ಸಚಿವ ಎ.ಎಂ.ಹಿಂಡಸಗೇರಿ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳು ಆಯ್ಕೆ ಯಾಗಿದ್ದಾರೆಹುಬ್ಬಳ್ಳಿಯ ಮೂರು ಸಾವಿರ ಮಠ ಸರ್ವ ಧರ್ಮಗಳ ಸಮನ್ವಯದ ಮಠ ಆಗಿದೆ.
ಈ ಮಠದ ಶ್ರೀಗಳಾದ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳ ಆರ್ಶೀವಾದ ಪಡೆದುಕೊಂಡರು
ಇದೊಂದು ಭಾವೈಕ್ಯತೆ ನಾಡಾಗಿದೆ
ಶ್ರೀಗಳ ಆರ್ಶೀವಾದ ಪಡೆದುಕೊಂಡಿದ್ದು ಸಂತಸ ಆಗಿದೆ
ಹುಬ್ಬಳ್ಳಿಯ ಮೂರು ಸಾವಿರ ಮಠ,‌ಶ್ರೀ ಸಿದ್ಧಾರೂಢ ಮಠ ನಾಡಿನ ಭಾವೈಕ್ಯತೆ ಮಠಗಳುಈ ಮಠಕ್ಕೆ ಹಿಂದು ಮುಸ್ಲಿಮ್ ಸಮುದಾಯದವರು ನಡೆದುಕೊಳ್ಳುತ್ತಾರೆ
ಇದೊಂದು ಮಾದರಿ ಮಠ ಆಗಿದೆ
ಹಿಂದು ಧರ್ಮೀಯರು ಸಹ ಇದಕ್ಕೆ ಕೈ ಜೋಡಿಸಿದೆ.ಯಾವುದೇ ಜಾತಿ, ಮತ ಪಂಥ ಎನ್ನದೇ ನಡೆದುಕೊಳ್ಳುತ್ತಾರೆ ಎಂದರು. ಇನ್ನು ನಂತರ ಮೂರುಸಾವಿರ ಮಠದ ಶ್ರೀ ರಾಜಯೋಗಿಂದ್ರ ಮಹಾಸ್ವಾಮಿಗಳು ಮಾತನಾಡಿ,ಅಂಜುಮನ್ ಇಸ್ಲಾಂ ಸಂಸ್ಥೆ ಇದೊಂದು ಶೈಕ್ಷಣಿಕ ಸಂಸ್ಥೆ ಯಾಗಿದೆ. ಪೂರ್ವಜರು ಕಟ್ಟಿ ಬೇಳಸಿದಂತ ಒಂದು ಶ್ರೇಷ್ಠ ಸಂಸ್ಥೆ ಅಂಜುಮನ್ ಇಸ್ಲಾಂ ಸಂಸ್ಥೆ ಆಗಿದೆ.
ವಿದ್ಯಾ ದಾನವಿದೆ ಶ್ರೇಷ್ಠ ದಾನವಾಗಿದ್ದುಮುಸ್ಲಿಂ ಮತ್ತು ಹಿಂದೂಗಳು ಸಹ ಅಲ್ಲಿ ಅಧ್ಯಯನ ಮಾಡ್ತಾರೆಅಂತಹ ಒಂದು ಭಾವೈಕ್ಯತೆಯ ಸಂಸ್ಥೆ
ಕರ್ನಾಟಕದ ವರ್ಕ್ಪ ಆಕ್ಟ್ ಪ್ರಕಾರ ನೋಂದಣಿ ಹೊಂದಿದೆ ಆ ಪ್ರಕಾರ ಚುನಾವಣೆ ಮಾಡಿಕೊಂಡು ಬಂದಿದ್ದಾರೆ ಈವಾಗ ನಮ್ಮ ಮಾಜಿ ಮಂತ್ರಿಗಳು ಕಾಂಗ್ರೆಸ್ ನ ಹಿರಿಯರು ಹಾಗೂ ಮಾಜಿ ಸಚಿವ ಎ. ಎಂ ಹಿಂಡಸಗೇರಿ ಯವರು ಮತ್ತು ಅವರ ಗುಂಪು ಆಯ್ಕೆಯಾಗಿದ್ದಾರೆ.
ಇದು ನಮಗೆ ಸಂತೋಷವನ್ನು ಉಂಟುಮಾಡಿದೆ ಎಂದರು


Spread the love

About Karnataka Junction

[ajax_load_more]

Check Also

ನಾಳೆ ಹುಬ್ಬಳ್ಳಿಯಲ್ಲಿ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

Spread the love*ಹುಬ್ಬಳ್ಳಿ, ನ.21, 2024:* 110/11 ಕೆ.ವಿ ಅಕ್ಷಯ ಕಾಲೋನಿ ವಿದ್ಯುತ್ ಉಪಕೇಂದ್ರದಲ್ಲಿ ನಿರ್ವಹಣಾ ಕಾರ್ಯದ ನಿಮಿತ್ತ ನ.23 …

Leave a Reply

error: Content is protected !!