ಹುಬ್ಬಳ್ಳಿ : ಸಮೀಪದ ಕಲಘಟಗಿ ತಾಲೂಕಿನ ದೇವಿಕೊಪ್ಪ ಬಳಿ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ಟ್ಯಾಂಕರ್ ವಶಕ್ಕೆ ಪಡೆದ ಅಬಕಾರಿ ಪೊಲೀಸರು ಚಾಲಕನನ್ನು ಬಂಧಿಸಿದ ಘಟನೆ ನಡೆದಿದೆ.
ಗೋವಾ ಮೂಲದ ಟ್ಯಾಂಕರ್ ಮೂಲಕ 25 ಲಕ್ಷ ರೂ. ಮೌಲ್ಯದ 25 ಸಾವಿರ ಲೀಟರ್ ಸ್ಪಿರಿಟ್‌ನ್ನು ಅಂಕೋಲಾಕ್ಕೆ ಸಾಗಾಟ ಮಾಡಲಾಗುತ್ತಿತ್ತು. ಈ ಖಚಿತ ಮಾಹಿತಿ ಮೇರೆಗೆ ದಾಳಿ ಕೈಗೊಂಡು ಟ್ಯಾಂಕರ್ ಸಮೇತ ಜಾರ್ಖಂಡ್ ಮೂಲದ ದೀಪನಾರಾಯಣಸಿಂಗ್ ಎಂಬ ಚಾಲಕನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ದೇವಿಕೊಪ್ಪದ ಬಳಿ ಅನುಮಾನಾಸ್ಪದವಾಗಿ ಟ್ಯಾಂಕರ್ ಹೊರಟಿತ್ತು. ಆಗ ಚಾಕನನ್ನು ವಿಚಾರಿಸಲಾಗಿ ಆತನಿಂದ ಸ್ಪಷ್ಟ ಮಾಹಿತಿ ಸಿಗಲಿಲ್ಲ. ಪರ್ಮಿಟ್ ಕೂಡ ಇರಲಿಲ್ಲ. ಈ ಟ್ಯಾಂಕರ್ ಗೋವಾದ ರಾಜ್‌ಸಿಂಗ್ ಎಂಬುವರಿಗೆ ಸೇರಿದ್ದಾಗಿದೆ. ಚಾಲಕನ್ನು ವಿಚಾರಿಸಿದಾಗ ಧಾರವಾಡ ಬೈಪಾಸ್ ಬಳಿ ಒಂದು ಟ್ಯಾಂಕರ್ ಇದೆ. ಅದನ್ನು ನೀನು ಅಂಕೋಲಾಕ್ಕೆ ತಲುಪಿಸಬೇಕು ಎಂದು ನನಗೆ ದೂರವಾಣಿ ಮೂಲಕ ಹೇಳಿದ್ದರು. ಅದರಂತೆ ನಾನು ಹೋಗುತ್ತಿದ್ದೆ. ಆದರೆ ಇದು ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದು ಅನುಮಾನಕ್ಕೆ ಕಾರಣವಾಯ್ತು. ಇದಲ್ಲದೇ ಇದು ಮಹಾರಾಷ್ಟ ಪಾಸಿಂಗ್ (ಎಂಎಚ್. 50, 8888) ಇರುವ ವಾಹನ ಇದ್ದು ಇದರ ಮೇಲೆ ಕರ್ನಾಟಕ ಪಾಸಿಂಗ್ ನಂಬರ್ ಅಳವಡಿಸಿ ಪೊಲೀಸರನ್ನು ಯಾಮಾರಿಸುವ ಪ್ರಯತ್ನವೂ ನಡೆದಿತ್ತು. ಹೆಚ್ಚಿನ ತನಿಖೆಗೆ ಅಧಿಕಾರಿಗಳ ತಂಡ ಗೋವಾಕ್ಕೆ ತೆರಳಲಿದ್ದು, ಆ ನಂತರವೇ ಈ ಬಗ್ಗೆ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂದು ಅಬಕಾರಿ ಉಪ ಆಯುಕ್ತ . ಅರುಣಕುಮಾರ ತಿಳಿಸಿದ್ದಾರೆ.
Tags #ilegal
Check Also
ಗ್ರಾಹಕರಲ್ಲಿ ಗುಣಮಟ್ಟದ ವಸ್ತುಗಳ ಜಾಗೃತಿಗಾಗಿ ಕ್ವಾಲಿಟಿ ವಾಕ್
Spread the loveಹುಬ್ಬಳ್ಳಿ: ಇಲ್ಲಿಯ ಬ್ಯೂರೋ ಆಫ್ ಇಂಡಿಯನ್ ಸ್ಟಶ್ಚಯಂಡರ್ಡ್ಸ್ (ಬಿಐಎಸ್) ಶಾಖೆ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಕ್ವಾಲಿಟಿ ವಾಕ್‌ಗೆ …