ಹುಬ್ಬಳ್ಳಿ: ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ 49ನೇ ಹುಟ್ಟುಹಬ್ಬದ ಪ್ರಯುಕ್ತ ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಎಸ್ ಸಿ ಘಟಕದ ವತಿಯಿಂದ ಪೌರ ಕಾರ್ಮಿಕರಿಗೆ ಹಣ್ಣು ಹಂಪಲ ವಿತರಣೆ ಮಾಡಲಾಯಿತು.
ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಎಸ್ ಸಿ ಘಟಕದ
ಜಿಲ್ಲಾಧ್ಯಕ್ಷ ಬಸವರಾಜ ಬೆಣಕಲ್ ಅಧ್ಯಕ್ಷತೆ ವಹಿಸಿದ್ದರು.
ಸಚಿವ ಸಂತೋಷ ಲಾಡ್ ಅವರಿಗೆ ಬಡವರು, ದೀನ ದಲಿತರ ಬಗ್ಗೆ ಅಪಾರ ಕಾಳಜಿ ಇದ್ದು ಅವರಿಗೆ ದೇವರು ಇನ್ನಷ್ಟು ಆಯೋರ ಆರೋಗ್ಯ ನೀಡಿ ಕಾಪಾಡಲಿ ಎಂದು ಹಾರೈಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬೊಮ್ಮಪುರ ಬ್ಲಾಕ್ ಅಧ್ಯಕ್ಷರಾದ ಪಕೀರಪ್ಪ ದೊಡ್ಡಮನಿ, ಇಂದಿರಾನಗರ ಬ್ಲಾಕ್ ಅಧ್ಯಕ್ಷರಾದ ಮಹೇಶ ಎಸ್ ಹಂಜಗಿ, ಉಪಾಧ್ಯಕ್ಷರಾದ ಪ್ರವೀಣ ಅದರಗುಂಚಿ, ಜಿಲ್ಲಾ ಮಾಧ್ಯಮ ವಕ್ತಾರರಾದ ಆನಂದ್ ಜನಸಮಟ್ಟಿ ಹಿರಿಯರಾದ ಸೋಮಣ್ಣ ಹಂಜಿಗಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು
