ಹುಬ್ಬಳ್ಳಿ: ಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಲಿದ್ದಾರೆ ಎಂದು ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರ ನಂದಿ ಮಹಾರಾಜರು ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಇಂದು ಮಾತಶ್ರೀ ಪದ್ಮಾವತಿ ದೇವಿ ಶಕ್ತಿ ಪೀಠ ಶಿಲಾನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಡಿಮೆ ಎಂದರೂ 400 ಕಿ.ಮೀ. ಸುತ್ತಿದ್ದೇನೆ. ಎಲ್ಲೆಡೆ ಜನ ಮೋದಿ ಅವರಿಗೆ ಜೈಕಾರ ಹಾಕುತ್ತಿದ್ದಾರೆ. ಅವರು ಕೈಗೊಂಡ ರಾಷ್ಟ್ರ ಕಲ್ಯಾಣ ಕಾರ್ಯಗಳನ್ನು ಕೊಂಡಾಡುತ್ತಿದ್ದಾರೆ ಎಂದು ಹೇಳಿದರು.
ಮೋದಿ ಅವರು ಪ್ರಧಾನಿಯಾದ ಮೇಲೆ ದೇಶಕ್ಕಾಗಿ ಅತ್ಯದ್ಭುತ, ಮಹಾನ್ ಕಾರ್ಯಗಳನ್ನು ಮಾಡಿದ್ದಾರೆ. ಪ್ರಧಾನಿಯಾದ ಮೇಲೆ ದೇಶಕ್ಕಾಗಿ ಅತ್ಯದ್ಭುತ, ಮಹಾನ್ ಕಾರ್ಯಗಳನ್ನು ಮಾಡಿದ್ದಾರೆ ಎಂದು ಸ್ಮರಿಸಿದರು.
ಪ್ರಧಾನಿ ಮೋದಿ ಪ್ರಮುಖವಾಗಿ ನಾಲ್ಕು ಮಹತ್ವದ ಕಾರ್ಯಗಳನ್ನು ಮಾಡಿದ್ದಾರೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣ ಮಾಡಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಕೋವಿಡ್ ಸಂಕಷ್ಟದಲ್ಲಿ ಕೋಟ್ಯಂತರ ಭಾರತೀಯರ ಜೀವ ಉಳಿಸಿದ್ದಾರೆ. ಜಮ್ಮು, ಕಾಶ್ಮೀರ ಜನಕ್ಕೆ ನೆಮ್ಮದಿಯ ಜೀವನ ಕಲ್ಫಿಸಿದ್ದಾರೆ. ಯುಕ್ರೇನ್ ಯುದ್ಧದ ವೇಳೆ ಅಲ್ಲಿನ ಭಾರತೀಯರನ್ನು ರಕ್ಷಿಸಿ ಕರೆ ತಂದಿದ್ದಾರೆ. ಹೀಗೆ ದೇಶದೊಳಕ್ಕೆ ಮಾತ್ರವಲ್ಲ, ದೇಶದ ಹೊರಗಿದ್ದ ಭಾರತೀಯರನ್ನು ರಕ್ಷಿಸಿದ್ದಾರೆ ಗುಣಧರ ನಂದಿ ಮಹಾರಾಜರು ಮೋದಿ ಅವರ ಗುಣಗಾನ ಮಾಡಿದರು.
*ನಂಬರ್ 1 ಆಗಲಿದೆ ಭಾರತ:* ನರೇಂದ್ರ ಮೋದಿ ಅವರ ಆಡಳಿತದಲ್ಲಿ ನಮ್ಮ ಭಾರತ ಸರ್ವ ನಂಬರ್ 1 ರಾಷ್ಟ್ರವಾಗಲಿದೆ. ಈಗಾಗಲೇ ಆಯುರ್ವೇದ, ತಾಂತ್ರಿಕತೆಯಲ್ಲಿ ನಾವು ಅಗಾಧ ಸಾಧನೆಯ ಹಾದಿಯಲ್ಲಿದೆ. ಇದಕ್ಕೆ ಮೋದಿ ಅವರ ಶ್ರಮ ಅಪಾರವಾಗಿದೆ ಎಂದು ಹೇಳಿದರು.
ಬಲಿಷ್ಠ, ಶಕ್ತಿಶಾಲಿ ಭಾರತಕ್ಕೆ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರ ಅನನ್ಯ ಕೊಡುಗೆ ಸಹ ಇದೆ. ದೊಡ್ಡಣ್ಣ ಅಮೇರಿಕ ಸಹ ಈಗ ಭಾರತದ ಮಾತು ಕೇಳುವಂತೆ ಆಗಿದೆ. ಇವರ ಕಾರ್ಯ ವೈಖರಿಯಿಂದ ಭಾರತ ಅಷ್ಟೊಂದು ಪ್ರಭಾವಿತ ರಾಷ್ಟ್ರವಾಗಿ ಬೆಳೆಯುತ್ತಿದೆ ಎಂದು ನಂದಿ ಮಹಾರಾಜರು ಸಂತಸ ವ್ಯಕ್ತ ಪಡಿಸಿದರು.
ಇನ್ನು, ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಸಹ ಭಾರತವನ್ನು ಕಲ್ಲಿದ್ದಲು ಕ್ಷೇತ್ರದಲ್ಲಿ ಸ್ವಾವಲಂಬಿ ದೇಶವನ್ನಾಗಿ ರೂಪಿಸಿದ್ದಾರೆ. ಗಣಿ ಸುಧಾರಣೆ ಕೈಗೊಂಡು ಕಲ್ಲಿದ್ದಲು ಉತ್ಪಾದನೆಯಲ್ಲಿ ಮುಂಚೂಣಿಗೆ ತಂದಿದ್ದಾರೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ನವಗ್ರಹ ತೀರ್ಥಕ್ಷೇತ್ರ ವರೂರ ಮಾತಾಶ್ರೀ ಪದ್ಮಾವತಿ ದೇವಿ ಶಕ್ತಿಪೀಠ ಶಿಲಾನ್ಯಾಸ, ಜೈನ ಎಜಿಎಂ ಆಯುರ್ವೇದಿಕ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಹೊಸ ಸಂಕೀರ್ಣ ಉದ್ಘಾಟನೆ ಹಾಗೂ ಎಜಿಎಂಆರ್ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಭವನದ ಶಂಕುಸ್ಥಾಪನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಆಚಾರ್ಯ ಶ್ರೀ ಡಾ.ಲೋಕೇಶ್ ಮುನಿಜೀ, ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್, ಸಂಸದೀಯ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಎಂ.ಆರ್.ಪಾಟೀಲ, ಅಭಯ್ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ವಿದ್ಯಾಶಂಕರ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.