ವಿಧಾನ ಸೌಧದಲ್ಲಿ ನಿನ್ನೆ ನಡೆದ ಪಾಕ್ ಪರ ಘೋಷಣೆಯನ್ನು ಖಂಡಿಸುತ್ತೇನೆ ಮಾಜಿ ಸಿಎಂ ಜಗದೀಶ್ ಶೆಟ್ಟರ್

Spread the love

ಹುಬ್ಬಳ್ಳಿ: ವಿಧಾನ ಸೌಧದಲ್ಲಿ ನಿನ್ನೆ ನಡೆದ ಪಾಕ್ ಪರ ಘೋಷಣೆಯನ್ನು ಖಂಡಿಸುತ್ತೇನೆ ಎಂದು
ಮಾಜಿ ಸಿಎಂ ಜಗದೀಶ್ ಶೆಟ್ಟರ್
ಕಿಡಿಕಾರಿದರು.
ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ನಿನ್ನೆ ರಾಜ್ಯಸಭಾ ಫಲಿತಾಂಶ ಬಂತು ವಿಜಯೋತ್ಸವ ಸಹ ನಡೆಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಆಯ್ಕೆ ಆದರೂ
ವಿಧಾನಸೌಧ ರಾಜ್ಯದ ಶಕ್ತಿ ಕೇಂದ್ರ, ರಾಜ್ಯಸಭಾ ಸದಸ್ಯ ಇರುವ ವೇಳೆ ದೇಶದ್ರೋಹ ಕೆಲಸ ಆಗಿದೆ, ಇದನ್ನ ನಾನು ಖಂಡಿಸುತ್ತೇನೆ ನಾಸಿರ್ ಹುಸೇನ್ ಸ್ಪಷ್ಟೀಕರಣ ಕೇಳಿದ್ರೆ ನಾನು ಅದನ್ನ ಕೇಳಿಯೇ ಇಲ್ಲ ಅಂತಾರೆಮಾಧ್ಯಮದವರ ಮೇಲೆ ಕಿಡಿಕಾರುವ ಮನಸ್ಥಿತಿ ಬದಲಾಗಬೇಕಿದೆ ಏನಿದೆ ಇದು ಸರಿಯಲ್ಲಪಾಕಿಸ್ತಾನದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದ್ದು ಅಲ್ಲಿನ ಜನರೇ ಹೇಳುತ್ತಿದ್ದಾರೆ ನರೇಂದ್ರ ಮೋದಿ ಅಂತಹ ನಾಯಕರು ಬೇಕು ಅಂತಾರೆ ಆದರೆ ಸಿಎಂ ಹಾಗೂ ಡಿಸಿಎಂ ಸೇರಿದಂತೆ ಎಲ್ಲರೂ ಇದನ್ನ ಖಂಡಿಸಬೇಕು ಅದು ಸಂಪೂರ್ಣ ರೆಕಾರ್ಡ್ ಆಗಿದೆ
ಅವರಿಗೆ ಶಿಕ್ಷೆ ಆಗಬೇಕು, ಇಲ್ಲದಿದ್ರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತೆ
ಅವರ ಮೇಲೆ ಕಠಿಣ ಕ್ರಮ ಆಗಲೇಬೇಕುಅಲ್ಪಸಂಖ್ಯಾತರ ತುಷ್ಟೀಕರಣ ಕಡಿಮೆ ಆಗಬೇಕು ಎಂದ ಅವರುವೋಟ್ ಬ್ಯಾಂಕ್ ಸಲುವಾಗಿ ಆ ರೀತಿ ಹೇಳಿಯೇ ಇಲ್ಲ ಅನ್ನೋದು ಎಷ್ಟು ಸರಿ
ಅವರ ಮಾತುಗಳನ್ನ ಓಲೈಕೆಗೆ ಈ ರೀತಿ ಹೇಳುವುದು ಸರಿಯಲ್ಲ
ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಿದೆ
ಬರುವ ದಿನಗಳಲ್ಲಿ ದೇಶದ ತುಂಬೆಲ್ಲ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದ ಅವರು ಭಾರತೀಯ ಜನತಾ ಪಕ್ಷದ ಸೋಮಶೇಖರ್ ಹಾಗೂ ಹೆಬ್ಬಾರ ನಿಮ್ಮ ಮನಸ್ಸು ಇಲ್ಲಿ ಇಲ್ಲದಿದ್ರೆ ರಾಜೀನಾಮೆ ಕೊಡಿ, ಗೌರವದಿಂದ ಹೋಗಿ ಈ ಸಂದರ್ಭದಲ್ಲಿಅಡ್ಡಮತದಾನ ಮಾಡಿದ್ದಕ್ಕೆ ಕಾನೂನು ರೀತಿಯ ಕ್ರಮ ಅವರ ಮೇಲೆ ಆಗಲಿದೆ ಮೊದಲು ರಾಜೀನಾಮೆ ಕೊಟ್ಟು ಅವರು ಅಲ್ಲಿ ಮತದಾನ ಹಾಕಬೇಕಿತ್ತುಪಕ್ಷ ದ್ರೋಹ ಮಾಡಿರುವ ಕಾರ್ಯವನ್ನ ಯಾರೂ ಒಪ್ಪುವುದಿಲ್ಲ ಎಂದರು


Spread the love

Leave a Reply

error: Content is protected !!