ಹುಬ್ಬಳ್ಳಿ : ರಾಜ್ಯ ಸಭಾ ಚುನಾವಣಾ ಫಲಿತಾಂಶ ಬಂದ ತಕ್ಷಣ ಕಾಂಗ್ರೆಸ್ ವಿಜಯೋತ್ಸವ ವೇಳೆವಿಧಾನ ಸೌಧದಲ್ಲಿ ಕಾಂಗ್ರೆಸ್ ನವರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು ಎಲ್ಲಿಗೆ ನಮ್ಮ ರಾಜ್ಯ ಹೋಗತಾ ಇದೆ. ಆದ್ದರಿಂದ ಯಾರು ಪಾಕಿಸ್ತಾನ ಜಿಂದಾಬಾದ್ ಅಂತಾ ಹೇಳಿದ್ದಾರೆ ಅವರಮ್ನ ಪಾಕಿಸ್ತಾನಕ್ಕೆ ಕಳುಹಿಸಿಸುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಅಶೋಕನಗರದಲ್ಲಿ ನಿವಾಸದಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.ವಿಧಾನ ಸೌಧದಲ್ಲಿ ಕಾಂಗ್ರೆಸ್ ನವರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರ ಇದೊಂದು ಅತ್ಯಂತ ನಾಚೀಕೆಗೇಡಿನ ಸಂಗತಿ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ರಾಜ್ಯಸಭಾ ಚುನಾವಣಾ ಫಲಿತಾಂಶ ಬಂದಾಗ ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾದ ನಾಸೀರ್ ಹುಸೇನ್ ಬೆಂಬಲಗರು ಪಾಕಿಸ್ತಾನ ಜಿಂದಾಬಾದ್ ಏನು ಘೋಷಣೆ ಕೂಗಿದ್ದಾರೆ ಅದರ ಅರ್ಥ ಎಲ್ಲಿಗೆ ಹೊರಟಿದೆ ಕಾಂಗ್ರೆಸ್ ನ ಜಯ ? ಪಾಕಿಸ್ತಾನ ಅನ್ನುವುದು ಆಗಿದೆಯಾ ಈ ರಾಜ್ಯ ಎಲ್ಲಿಗೆ ಹೊರಟಿದೆ ? ಭಯೋತ್ಪಾದನೆ ಪಾಕಿಸ್ತಾನಕ್ಕೆ ಬೆಂಬಲ ಕುಮ್ಮಕ್ಕು ಕೊಡುವಂತಹದು ಮತ್ತು ಇವತ್ತು ಕಾಂಗ್ರೆಸ್ ನೈತಿಕ ಹೊಣೆ ಕಳೆದುಕೊಂಡಿದೆ.ಅವರು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಪಾಕಿಸ್ತಾನ ಜನರು ಪ್ರಧಾನಿ ನರೇಂದ್ರ ಮೋದಿ ಅವರು ಬೇಕು ಅನ್ನು ತ್ತಿದ್ದಾರೆ ಅವರು ಮೋದಿ ಬೇಕು ಅಂತಾ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ, ಪಾಕಿಸ್ತಾನ ಜಿಂದಾಬಾದ್ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಮಾಡತಾ ಇದ್ದಾರೆ ಮತ್ತು ಈ ಕುರಿತು ಉಗ್ರವಾದ ಹೋರಾಟ ಮಾಡಲಾಗುತ್ತದೆ.ವಿಧಾನ ಸೌಧ ಹೊರಗಡೆ ಒಳಗಡೆ ಈಗ ನಡೆದಿದೆ ಎಂದರು. ಇನ್ನು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಹಿನ್ನೆಲೆ ಎಸ್ ಟಿ ಸೋಮಶೇಖರ್ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ ಈ ಕುರಿತು ಕಾನೂನು ತಜ್ಞರ ಜೊತೆಗೆ ಮಾತುಕತೆ ನಡೆದಿದೆ ಎಂದರು.
Tags #dharwad #india #karnataka #trending #trend #animal #god
[ajax_load_more]Check Also
ರಾಜ್ಯ ಸರ್ಕಾರದಲ್ಲಿ ತುಷ್ಟೀಕರಣ ಮೀತಿಮೀರಿದೆ- ಶಾಸಕ ಮಹೇಶ್ ಟೆಂಗಿನಕಾಯಿ
Spread the loveಹುಬ್ಬಳ್ಳಿ:ಬೆಂಗಳೂರಿನಲ್ಲಿ ಹಸು ಕೆಚ್ಚಲು ಕೊಯ್ಲು ವಿಚಾರ ಅತ್ಯಂತ ಕ್ರೂರತನದಿಂದ ಕೂಡಿದ್ದು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ …