ಹುಬ್ಬಳ್ಳಿ : ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ, ಕರ್ನಾಟಕ ರಾಜ್ಯದ ಕಾಂಗ್ರೆಸ್ ಪಕ್ಷದ ವಿಧಾನಸಭಾ ಸದಸ್ಯರಿಂದ ರಾಜ್ಯಸಭೆಗೆ ಚುನಾಯಿತರಾದ ನಾಶೀರ್ ಹುಸೇನ್ ರವರ ಬೆಂಬಲಿಗರು, ಅದು ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ದೇಶದ್ರೋಹಿ ಘೋಷಣೆ ಕೂಗಿ, ಪಾಕಿಸ್ತಾನದ ಬಗ್ಗೆ ತಮಗಿರುವ ಒಳ ಪ್ರೇಮವನ್ನು ಬಹಿರಂಗಪಡಿಸಿದ್ದು, ಇದು ನಿಜಕ್ಕೂ ತೀವ್ರವಾಗಿ ನಾವು ಹಿಂದೂ ಧರ್ಮದವರೆಲ್ಲರೂ ಯೋಚಿಸುವಂತಹ ಸಂಗತಿ ಆಗಿದೆ ಎಂದು ಭಾರತೀಯ ಜನತಾ ಪಕ್ಷದ ಮುಖಂಡ ಭಾಸ್ಕರ ಜಿತೂರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಈ ಪವಿತ್ರ ಮಣ್ಣಲ್ಲಿ ಹುಟ್ಟಿ, ಇಲ್ಲಿಯ ಅನ್ನ, ನೀರು ಕುಡಿದು, ಇಲ್ಲಿ ಸಿಗುವ ಸಕಲ ಸರಕಾರಿ ಸೌಲಭ್ಯಗಳನ್ನು ಎಲ್ಲಕ್ಕಿಂತ ಮುಂಚಿತವಾಗಿ ಪಡೆಯುವ ಈ ಜನರು, ತಮ್ಮ ಪಾಕಿಸ್ತಾನ ಪ್ರೇಮವನ್ನು ಬಹಿರಂಗವಾಗಿ ತೋರಿಸಿಕೊಳ್ಳುವದೆಂದರೆ ಇದು ನಮ್ಮ ದೇಶಕ್ಕೆ ಮುಂದೆ ಬರಲಿರುವ ಗಂಡಾಂತರದ ಸೂಚನೆಯಾಗಿದೆ ಎಂದರು ತಪ್ಪಾಗಲಾರದು.
ಕಾರಣ ಈ ಘೋಷಣೆಗಳನ್ನು ಕೂಗಿರುವಂತಹ ದೇಶದ್ರೋಹಿಗಳನ್ನು ಯಾವುದೇ ಮುಲಾಜಿಲ್ಲದೆ ಹಿಡಿದು ಒದ್ದು ಒಳಗೆ ಹಾಕಬೇಕೆಂದು ಇಲ್ಲಿಯ ನಾಗರಿಕರ ಪರವಾಗಿ ಈ ಮೂಲಕ ಕರ್ನಾಟಕ ಸರ್ಕಾರಕ್ಕೆ ಒತ್ತಾಯಪೂರ್ವಕ ವಿನಂತಿಯನ್ನು ಮಾಡುತ್ತಿದ್ದೇನೆ.
ಅಲ್ಲದೆ, ವಿಧಾನಸಭೆಯ ಪೊಲೀಸ್ ಠಾಣೆಯ ಅಧಿಕಾರಿಗಳು ತಾವೇ ಈ ಬಗ್ಗೆ, ದೇಶದ್ರೋಹಿ ದೂರನ್ನು ಸ್ವಯಂ ದಾಖಲಿಸಿಕೊಂಡು, ಈ ಬಗ್ಗೆ ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸುತ್ತೇನೆ ಎಂದರು.
Check Also
ಹಸು ಕೆಚ್ಚಲು ದುರ್ಘಟನೆಯಲ್ಲಿ ಜಮೀರ್ ಅಹ್ಮದ್ ನಾಟಕ ರಚನೆ ಮಾಡ್ತಿದ್ದಾರೆ – ಹೊಸ ಬಾಂಬ್ ಸಿಡಿಸಿದ ಮುತಾಲಿಕ್
Spread the loveಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಘಟನೆ ಅತ್ಯಂತ ಶೋಚನೀಯ. ಸಚಿವ ಜಮೀರ್ ಅಹ್ಮದ್ ನಾಟಕ ರಚನೆ ಆಡುತ್ತಿದ್ದಾರೆ ಎಂದು …