ಹುಬ್ಬಳ್ಳಿ : ರುಂಡ-ಮುಂಡ ಕೊಲೆ ಪ್ರಕರಣಕ್ಕೆ ಮತ್ತಷ್ಟು ಸುಳಿವು ಸಿಕ್ಕಿದ್ದು ನಾಲ್ವರ ಆರೋಪಗಳನ್ನು ಬಂಧಿಸಿದ ಬೆನ್ನಲ್ಲೇ ಮತ್ತೇ ನಾಲ್ವರನ್ನು ಬಂಧಿಸಲಾಗಿದೆ ಎಂದು ಧಾರವಾಡ ಎಸ್.ಪಿ ಕೃಷ್ಣಕಾಂತ ತಿಳಿಸಿದ್ದಾರೆ.
ನಗರದಲ್ಲಿಂದು ಗ್ರಾಮೀಣ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಲ್ಲಿಕ್, ಫಿರೋಜ್, ಸೈಫುದ್ದೀನ್ ಹಾಗೂ ಶನಯಾ ಕಾಟವೇ ಬಂಧಿತ ಆರೋಪಿಗಳಾಗಿದ್ದಾರೆ ಎಂದರು.
ಹುಬ್ಬಳ್ಳಿಯ ಹೊರವಲಯದ ದೇವರಗುಡಿಹಾಳದಲ್ಲಿ ೧೨ ರಂದು ರುಂಡ ಸಿಕ್ಕಿದ್ದು, ಕೇಶ್ವಾಪುರ ವ್ಯಾಪ್ತಿಯಲ್ಲಿ ರುಂಡ ಸಿಕ್ಕ ದಿನವೇ ಮುಂಡ ಸಿಕ್ಕಿದೆ ಎಂದ ಅವರು ಘಟನೆಯು ಯಾವುದೇ ಸುಳಿವು ಇಲ್ಲದೇ ಆರೋಪಿಗಳು ಕೊಲೆಗೈದು ಕೈಚಳಕವನ್ನು ತೋರಿಸಿದ್ದರು.
ಕೊಲೆ ಪ್ರಕರಣವನ್ನು ಭೇದಿಸಲು ೫ ತಂಡಗಳನ್ನು ರಚಿಸುವ ಮೂಲಕ ಮಹತ್ತರ ದಾಖಲೆ ಕಲೆ ಹಾಕಿದ್ದು,
ನಿಯಾಜ್ ಮತ್ತು ಶನಯಾ ಕಾಟವೇ ಪ್ರೀತಿಯ ಸಲುವಾಗಿ ರಾಕೇಶ ಕೊಲೆಯಾಗಿದ್ದು, ಶನಯಾ ಕೂಡಾ ಈ ಕೊಲೆಯಲ್ಲಿ ನೇರ ಆರೋಪಿಯಾಗಿದ್ದಾಳೆ ಎಂದು ತಿಳಿಸಿದರು.
ಇನ್ನೂ ಪ್ರಕರಣ ತನಿಖೆ ಹಂತದಲ್ಲಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದರು.
Check Also
ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ
Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …