Breaking News

ವೈಭವದಿಂದ ನೆರವೇರಿದ ಗರಗ ಮಡಿವಾಳೇಶ್ವರ ರಥೋತ್ಸವ

Spread the love

ಧಾರವಾಡ: ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ರಥೋತ್ಸವಗಳಲ್ಲೊಂದಾದ ಧಾರವಾಡ ತಾಲೂಕಿನ ಗರಗ ಮಡಿವಾಳೇಶ್ವರರ ರಥೋತ್ಸವವು ಮಂಗಳವಾರ ಲಕ್ಷಾಂತರ ಭಕ್ತರ ಹರ್ಷೋದ್ಘಾರಗಳ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.
ಮಡಿವಾಳೇಶ್ವರರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಅಭಿಷೇಕಗಳು ನಡೆದವು. ಬೆಳಿಗ್ಗೆಯಿಂದಲೇ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಈ ಜಾತ್ರೆಗೆ ಕೇವಲ ಧಾರವಾಡ ಅಷ್ಟೇ ಅಲ್ಲ ಬೇರೆ ಬೇರೆ ಜಿಲ್ಲೆಗಳಿಂದಲೂ ಜನ ಆಗಮಿಸಿದ್ದರು. ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ತೆಗೆದುಕೊಂಡು ಬಂದ ಜನ ದೇವಸ್ಥಾನದ ಎದುರಿನ ಹೊಲಗಳಲ್ಲಿ ಟೆಂಟ್‌ ಹಾಕಿ ವಸತಿ ಸಹ ಮಾಡಿದ್ದರು.


Spread the love

About Karnataka Junction

    Check Also

    ಪ್ರಗತಿಯಲ್ಲಿರುವ ಜಿ +3 ಮನೆಗಳ ಕಾಮಗಾರಿಯ ವೀಕ್ಷಿಸಿದ ಬೆಲ್ಲದ

    Spread the loveಪ್ರಗತಿಯಲ್ಲಿರುವ ಜಿ +3 ಮನೆಗಳ ಕಾಮಗಾರಿಯ ವೀಕ್ಷಿಸಿದ ಬೆಲ್ಲದ ಹುಬ್ಬಳ್ಳಿ;ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ …

    Leave a Reply

    error: Content is protected !!