Breaking News

ರೈತರ ಸಮಸ್ಯೆಗಳ ಪೂರ್ವಭಾವಿ ಸಭೆ

Spread the love

ಕುಂದಗೋಳ ತಾಲೂಕಿನ ರೈತರ ಸಮಸ್ಯೆಗಳ ಪೂರ್ವಭಾವಿ ಸಭೆಯನ್ನು ಜಿಲ್ಲಾಧಿಕಾರಿಗಳು ತಮ್ಮ ಸಭಾಂಗಣದಲ್ಲಿ ಕರೆದಿದ್ದರು ಈ ಸಂದರ್ಭದಲ್ಲಿ ನೂತನವಾಗಿ ಜಿಲ್ಲಾಧಿಕಾರಿಗಳಾಗಿ ಅಧಿಕಾರವಹಿಸಿಕೊಂಡ ಶ್ರೀ ದಿವ್ಯ ಪ್ರಭು ಅವರನ್ನು ತಾಲೂಕಿನ ರೈತರು ಹಸಿರು ಶಾಲು ಹೊಂದಿಸಿ ಸನ್ಮಾನಿಸಿದರು ನಂತರ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಿದರು ರೈತರ ಬಸವರಾಜ ಯೋಗಪ್ಪನವರ ಮಾತನಾಡಿ ಮಳೆಗಾಲದಲ್ಲಿ ರೈತರಿಗೆ ಹೊಲಗಳಿಗೆ ಹೋಗಲು ರಸ್ತೆ ಇರುವುದಿಲ್ಲ ನಮ್ಮ ದಾರಿ ಯೋಜನೆಯಲ್ಲಿ ರೈತರಿಗೆ ದಾರಿ ಮಾಡಬೇಕು ಜಾನುವಾರುಗಳಿಗೆ ಮೇವು ಕೊರತೆ ಇದೆ ರೈತರಿಗೆ ಕೃಷಿ ಭಾಗ್ಯ ಯೋಜನೆಯನ್ನು ನಮ್ಮ ತಾಲೂಕಿಗೆ ಪುನರ್ ಆರಂಭಿಸಬೇಕು ಎಂದು ಹೇಳಿದರು ಇದೇ ಸಂದರ್ಭದಲ್ಲಿ ಕೃಷಿ ಸಮಾಜ ರಾಜ್ಯ ಅಧ್ಯಕ್ಷ ಮಾಣಿಕ್ಯ ಚಿಲ್ಲೂರ್ ಮಾತನಾಡಿ ಸಕಾಲಕ್ಕೆ ಮಳೆ ಬಾರದೆ ತಾಲೂಕಿನ ರೈತರು ತುಂಬಾ ಕಷ್ಟದಲ್ಲಿದ್ದಾರೆ ಅವರಿಗೆ ಸರಿಯಾದ ಬೆಳೆ ವಿಮೆ ಬಂದಿಲ್ಲ ಬೆಳೆ ಪರಿಹಾರವೂ ಸರಿಯಾಗಿ ಇಟ್ಟಿರುವುದಿಲ್ಲ ಕೂಡಲೇ ನೊಂದ ರೈತರಿಗೆ ಬೆಳೆ ವಿಮೆ ಬೆಳ್ಳಿ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ನವಲಗುಂದ ಶಾಸಕ ಎನ್‌ಎಚ್ ಕೋನರೆಡ್ಡಿ ಪೊಲೀಸ್ ವರಿಷ್ಠಾಧಿಕಾರಿ ಜಂಟಿ ಕೃಷಿ ನಿರ್ದೇಶಕರು ಧಾರವಾಡ ಭಗವಂತಪ್ಪ ಪುಟ್ಟಣ್ಣವರ್ ಹಾಗೂ ಇನ್ನೂ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.


Spread the love

About Karnataka Junction

    Check Also

    ಪ್ರಗತಿಯಲ್ಲಿರುವ ಜಿ +3 ಮನೆಗಳ ಕಾಮಗಾರಿಯ ವೀಕ್ಷಿಸಿದ ಬೆಲ್ಲದ

    Spread the loveಪ್ರಗತಿಯಲ್ಲಿರುವ ಜಿ +3 ಮನೆಗಳ ಕಾಮಗಾರಿಯ ವೀಕ್ಷಿಸಿದ ಬೆಲ್ಲದ ಹುಬ್ಬಳ್ಳಿ;ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ …

    Leave a Reply

    error: Content is protected !!