ಹುಬ್ಬಳ್ಳಿ: ವಿಶ್ವದಲ್ಲಿ ಮೂರನೇ ಅತೀ ದೊಡ್ಡ ರೈಲ್ವೆ ಪ್ಲಾಟ್ ಫಾರ್ಮ್ ಹೊಂದಿದ ದೇಶ ಭಾರತ. 70 ಸಾವಿರ ಕಿ.ಮೀ. ರೈಲ್ವೆ ಜಾಲವನ್ನು ಹೊಂದಿದೆ. ರೈಲ್ವೆ ಫ್ಲಾಟ್ ಫಾರ್ಮ್‌ಗಳ ಆಧುನೀಕರಣ ಕಾಮಗಾರಿ ದೇಶಾದ್ಯಂತ ನಡೆದಿದೆ. ನಮ್ಮ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಕೂಡ ಇನ್ನಷ್ಟು ವಿಸ್ತಾರವಾಗಿ ಶೀರ್ಘವೇ ಅಭಿವೃದ್ಧಿಗೊಳ್ಳಲಿದೆ ಎಂದುಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ
ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಪಟ್ಟಣದಲ್ಲಿ ಆಯೋಜನೆ ಮಾಡಿದ್ದ ನವಲಗುಂದ ರಸ್ತೆ ಮತ್ತು ಅಣ್ಣಿಗೇರಿ ರೈಲ್ವೆ ನಿಲ್ದಾಣಗಳ ನಡುವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 18ರ ಬದಲಾಗಿ ರಸ್ತೆಯ ಮೇಲ್ವೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ 2014ರವರೆಗೆ 21,413 ಕಿ.ಮೀ. ರೈಲ್ವೆ ಮಾರ್ಗ ವಿದ್ಯುದ್ದೀ ಕರಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ 39 ಸಾವಿರ ಕಿ.ಮೀ.ರೈಲ್ವೆ ಮಾರ್ಗ ವಿದ್ಯುದ್ದೀಕ ರಣಗೊಂಡಿದ್ದು ಇದೊಂದು ದಾಖಲೆ
ಅಣ್ಣಿಗೇರಿ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿ, ನಾನು ನನ್ನ ಮಠದ ಅಭಿವೃದ್ಧಿಗೆ ಎಂದು ಕೈ ಚಾಚಲಿಲ್ಲ. ಅಣ್ಣಿಗೇರಿ ಪಟ್ಟಣ ಅಭಿವೃದ್ಧಿ ಯಾದರೇ ನನ್ನ ಮಠ
ಅಭಿವೃದ್ಧಿಯಾದಂತೆ ಎಂದು ಭಾವಿಸಿದ್ದೇನೆ. ನಾನು ಕೇಂದ್ರ ಸಚಿವ ಜೋಶಿ ಅವರನ್ನು ಭೇಟಿ ಮಾಡಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿದ ಅವರು, ರೈಲ್ವೆ, ಕ್ರೀಡಾಂಗಣ ಕಾಮಗಾರಿಗೆ ಒಟ್ಟು ನೂರು ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಇದಕ್ಕೆ ನಾವೆಲ್ಲ ಆಭಾರಿಯಾಗಿದ್ದೇವೆ ಎಂದರು.
ನಿವೃತ್ತಿ ಹೊಂದಲಿರುವ ನೈಋತ್ಯ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಅವರನ್ನು ಸಚಿವರು ಸನ್ಮಾನಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.ದೇಶದಾದ್ಯಂತ 41 ಸಾವಿರ ಕೋಟಿ ರೂ. ಮೌಲ್ಯದ ವಿವಿಧ ರೈಲ್ವೆ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿದ್ದನ್ನು ಸಾರ್ವಜನಿಕರು ವೀಕ್ಷಿಸಿದರು. ಈ ಸಂದರ್ಭದಲ್ಲಿ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ, ವಿವಿಧ ಕ್ಷೇತ್ರದ ಸಾಧಕರು ಸ್ಥಳೀಯರು ಭಾಗವಹಿಸಿದ್ದರು.
Tags #Hublidharwad
[ajax_load_more]Check Also
ರೈತರ ಬೆಳೆಗೆ ಉತ್ತಮ ದರಕ್ಕಾಗಿ ಭೂಮಿ ಆಪ್ ರಚನೆ; ರಘುನಂದನ್
Spread the loveಹುಬ್ಬಳ್ಳಿ ಗ್ರಾಮೀಣ ಭಾಗದ ರೈತರಿಗೆ ಗುಣಮಟ್ಟದ ಬೆಳೆ ಬೆಳೆಯಲು ಹಾಗೂ ಬೆಳೆದ ಬೆಳೆಗಳಿಗೆ ಉತ್ತಮ ದರ ನೀಡುವ …