Breaking News

ಚನ್ನವೀರ ಶರಣರ ೨೯ನೇ ಪುಣ್ಯ ಸ್ಮರಣೋತ್ಸವ, ಧರ್ಮ ಚಿಂತನಗೋಷ್ಠಿ

Spread the love

ಹುಬ್ಬಳ್ಳಿ: ಚಿಕೇನಕೊಪ್ಪದ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದ ವತಿಯಿಂದ ಚನ್ನವೀರ ಶರಣರ ೨೯ನೇ ಪುಣ್ಯ ಸ್ಮರಣೋತ್ಸವ ಹಾಗೂ ಧರ್ಮ ಚಿಂತನಗೋಷ್ಠಿ ಅಂಗವಾಗಿ ವಿವಿಧ ಕಾರ್ಯಕ್ರಮ ಫೆ. ೨೮ ರಿಂದ ೪ ರ ವರೆಗೆ ಆಯೋಜಿಸಲಾಗಿದೆ ಎಂದು ಉಪಾಧ್ಯಕ್ಷ ಬಿ.ಎಂ. ದೊಡ್ಡಮನಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. ೨೮ ರಿಂದ ೬ ದಿನಗಳ ಕಾಲ ಸಂಜೆ ೬ ಗಂಟೆಗೆ ಆಧ್ಯಾತ್ಮ ಪ್ರವಚಣ ನಡೆಯಲಿದೆ. ಅಂದು ಬೆಳಿಗ್ಗೆ ೭ ಗಂಟೆಗೆ ಶರಣರ ಸದ್ಭಾವನಾ ಪಾದಯಾತ್ರೆ ನಡೆಯಲಿದೆ. ಸಂಜೆ ೬.೩೦ ಕ್ಕೆ ಆಧ್ಯಾತ್ಮ ಪ್ರವಚಣನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಗದಗ ಜಿಲ್ಲೆ ಬಳಗಾನೂರು ಸಾನಿಧ್ಯ ಶಿವಶಾಂತವೀರ ಶರಣರು ವಹಿಸುವರು. ಅಥಣಿಯ ಮಾನ ಕಂಪ್ಯೂಟರ್ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃಷಿಕ್ಷಿ ಬಸವರಾಜ ಉಮರಾಣಿ ಉದ್ಘಾಟಿಸುವರು. ಸಿ.ಎಂ. ಮಠ, ಮುದಗಲ್ ಮಠದ ಮಹಾಂತ ಸ್ವಾಮೀಜಿ ಭಾಗವಹಿಸುವರು ಎಂದರು.
ಫೆ. ೪ ರಂದು ಸಾಂಸ್ಕೃತಿಕ ಸಂಜೆ ಹಾಗೂ ಸಮಾರೋಪ ಸಮಾರಂಭ ಸಂಜೆ ೬ ಗಂಟೆಗೆ ನಡೆಯಲಿದೆ. ದಿವ್ಯ ಸಾನಿಧ್ಯ ಗದಗ ಜಿಲ್ಲೆ ಬಳಗಾನೂರು ಸಾನಿಧ್ಯ ಶಿವಶಾಂತವೀರ ಶರಣರು ವಹಿಸುವರು. ಸರಿಗಮಪ ಖ್ಯಾತಿಯ ಮೆಹಬೂಬಸಾಬ ಹರ್ಲಾಪುರ ಹಾಗೂ ಜ್ಞಾನೇಶ್ವರ ಯಮ್ಮಿಗನೂರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಗಾಮನಗಟ್ಟಿ ಪ್ರಗತಿ ಪರ ರೈತ ಬಸವರಾಜ ಮಾಳನ್ನವರ, ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಸವರಾಜ ಉಮರಾಣಿ ಹಾಗೂ ನವಲಗುಂದ ಉಮಾ ವಿದ್ಯಾಶ್ರೀ ಟ್ರಸ್ಟ್ ಸಿದ್ಧಲಿಂಗನಗೌಡ ಜಂಗ್ಲೆಪ್ಪಗೌಡ ಅವರಿಗೆ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಕಾರ್ಯದರ್ಶಿ ಕೆ.ಪಿ ಪಾಟೀಲ, ಜಗದೀಶ ಕೂಡಲಮಠ, ದಿನೇಶ ಮಹಾಜನ, ವಿಶ್ವನಾಥ ವಿರಕ್ತಮಠ, ಪ್ರಭುಲಿಂಗಪ್ಪ ರೋಣದ ಇದ್ದರು.


Spread the love

About Karnataka Junction

    Check Also

    ಪ್ರಗತಿಯಲ್ಲಿರುವ ಜಿ +3 ಮನೆಗಳ ಕಾಮಗಾರಿಯ ವೀಕ್ಷಿಸಿದ ಬೆಲ್ಲದ

    Spread the loveಪ್ರಗತಿಯಲ್ಲಿರುವ ಜಿ +3 ಮನೆಗಳ ಕಾಮಗಾರಿಯ ವೀಕ್ಷಿಸಿದ ಬೆಲ್ಲದ ಹುಬ್ಬಳ್ಳಿ;ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ …

    Leave a Reply

    error: Content is protected !!