Breaking News

ಜಿಲ್ಲಾ ಮಟ್ಟದ ಲಾಂಗ್ ಟೆನಿಸ್ ಪಂದ್ಯಾವಳಿಯಲ್ಲಿ ಮಿಂಚಿದ ಮುಖೇಶ್ ಕೊಠಾರಿ

Spread the love

ಹುಬ್ಬಳ್ಳಿ. ಧಾರವಾಡ ಜಿಲ್ಲಾ ಲಾಂಗ್ ಟೆನಿಸ್ ಅಸೋಸಿಯೇಷನ್ ವತಿಯಿಂದ ಇತ್ತಿಚೇಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಲಾಂಗ್ ಟೆನಿಸ್ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಉದ್ಯಮಿ ಮುಖೇಶ ಕೊಠಾರಿ ಪ್ರಶಸ್ತಿ ಗೆದ್ದುಕೊಂಡರು.
ಎಂಟು ತಂಡಗಳ ಒಟ್ಟು 48 ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಿದ್ದರು.
ಮುಖೇಶ್ ಕೊಠಾರಿ ತಂಡದಲ್ಲಿ ಸಚಿನ್ ಶಾ, ಸುರೇಶ್ ರಾಜಪುರೋಹಿತ್, ಲಕ್ಷ್ಮೀಕಾಂತ್ ರೆಡ್ಡಿ, ರಾಜು ದೊಡ್ಡಮನಿ ಇದ್ದರು.
ಮುಖೇಶ್ ಎಂಟು ಪಂದ್ಯಗಳನ್ನು ವೈಯಕ್ತಿಕವಾಗಿ ಆಡಿದರು ಮತ್ತು ಎಲ್ಲವನ್ನು ಗೆದ್ದರು.
ಪಂದ್ಯಾವಳಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬೈಕೋಡ್, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂತೋಷ ಬಿರಾದಾರ್, ಧಾರವಾಡ ಕೇಂದ್ರ ಕಾರಾಗೃಹ ಅಧೀಕ್ಷಕ ಶಹಾಬುದ್ದೀನ್, ಎಸಿಪಿ ವಿಜಯಕುಮಾರ ತಳವಾರ, ಡಿಎಸ್ಪಿ ಕಾಶಪ್ಪನವರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂತೋಷ ಬಿರಾದಾರ್ ವಿಜೇತ ಮುಕೇಶ ಕೊಠಾರಿಗೆ ಟ್ರೋಫಿ ವಿತರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ಆದ ದಿವ್ಯಪ್ರಭಾ, ಇತರೆ ಸದಸ್ಯರು ಹಾಗೂ ಆಟಗಾರರು ಉಪಸ್ಥಿತರಿದ್ದರು.


Spread the love

About Karnataka Junction

    Check Also

    ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ್ ಪ್ರಕರಣ: ಇಬ್ಬರು ಎನ್ ಐಎ ವಶಕ್ಕೆ

    Spread the loveರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ್ ಪ್ರಕರಣ: ಇಬ್ಬರು ಎನ್ ಐಎ ವಶಕ್ಕೆ ಹುಬ್ಬಳ್ಳಿ,: ಬೆಂಗಳೂರಿನ ದಿ ರಾಮೇಶ್ವರಂ …

    Leave a Reply

    error: Content is protected !!