Breaking News

ಹಿಟ್ ಆಂಡ್ ರನ್ ಕಾನೂನು ಬೇಡವೇ ಬೇಡ- ಅಟೋ ಚಾಲಕರ ಮಾಲೀಕರ ಪ್ರತಿಭಟನೆ

Spread the love

ಹುಬ್ಬಳ್ಳಿ: ಹಿಟ್ ಆಂಡ್ ರನ್ ಕಾನೂನು ಜಾರಿಗೆ ವಿರೋಧಿಸಿ
ಉತ್ತರ ಕರ್ನಾಟಕ ಆಟೋ ಚಾಲಕರ ಸುರಕ್ಷಾ ಸಂಘ ಧಾರವಾಡ ಜಿಲ್ಲಾ ಘಟಕ ಹಾಗೂವಿವಿಧ ಆಟೋ ಚಾಲಕರ ಮಾಲೀಕರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹುಬ್ಬಳ್ಳಿಯಲ್ಲಿ ವಿವಿಧ ಸಂಘಟನೆಗಳಿಂದ ಬಾರೀ ವಿರೋಧ
ಕಾನೂನು ಹಿಂಪಡೆಯುವಂತೆ ಒತ್ತಾಯಿಸಿ ಆಂದೋಲನ ನಡೆಸಿದ್ದು
ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹಿಟ್ ಆಂಡ್ ರನ್ ಪ್ರಕರಣಗಳ ಪ್ರಸ್ತಾವಿಕ ಶಾಸನ ಕರಾಳ ಶಾಸನವಾಗಿದೆ ಎಂದು ಆರೋಪಿಸಿರುವ ಅಟೋ ಚಾಲಕರ ಸಂಘಟನೆಗಳು ಈ ಶಾಸನವನ್ನ ಹಿಂಪಡೆಯಬೇಕು ಅಟೋ ಚಾಲಕರಿಗೆ ಕಾರ್ಮಿಕ ಕಾರ್ಡ್ ಕೊಡಬೇಕು, ಸರ್ಕಾರದಿಂದಲೇ ಅಟೋಗಳಿಗೆ ಎಚ್ ಎಸ್ ಆರ್ ಪಿ ಫಲಕ ಅಳವಡಿಕೆ ಮಾಡಬೇಕು, ಅಟೋ ಚಾಲಕರಿಗೆ ಪ್ರತ್ಯೇಕ ನಿಗಮ ಮಾಡಬೇಕು, ಅಟೋ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು..ನಗರದ ಡಾ.‌ಅಂಬೇಡ್ಕರ್ ಸರ್ಕಲ್ ದಿಂದ ಆರಂಭ ಗೊಂಡ ಬೃಹತ್ ಪ್ರತಿಭಟನೆಯೂ ನಗರದ‌ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು‌.
ಪ್ರತಿಭಟನಾ ಮೆರವಣಿಗೆಯಲ್ಲಿ ಲಕ್ಷ್ಮಣ ಹಿರೇಕೆರೂರು ಆಟೋ ಚಾಲಕರ ಸಂಘ ಅನೇಕ ಸಂಘಟನೆಗಳು ಪಾಲ್ಗೊಂಡಿದ್ದವು. ರಾಲಿ ಉದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಈ ಕಾಯ್ದೆಯಲ್ಲಿರುವ ನ್ಯೂನತೆಗಳ ಬಗ್ಗೆ ಕರಪತ್ರ ಹಂಚುವ ಮೂಲಕ ಜನಜಾಗೃತಿ ಅಭಿಯಾನವನ್ನ ಸಹ ಕೈಗೊಳ್ಳಲಾಯಿತು. ಅಟೋ ಚಾಲಕರ ಸಂಘದ ಪದಾಧಿಕಾರಿಗಳು ಮಾತನಾಡಿ, ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತರಲಿರುವ ಕಾನೂನಿನಲ್ಲಿ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ 10 ವರ್ಷ ಜೈಲು, 7 ಲಕ್ಷ ರೂ ದಂಡ ವಿಧಿಸುವ ಪ್ರಸ್ತಾವನೆ ಇದೆ. ಇದು ಕರಾಳ ಶಾಸನವಾಗಿದೆ. ಹೀಗಾಗಿ ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅವರು ಒತ್ತಾಯಿಸಿದ ಅವರು ಕೇಂದ್ರ ಸರ್ಕಾರದ ನೀತಿಯನ್ನ ಖಂಡಿಸಿದರು. ಈ ಕಾನೂನು ಅಂಕಿತಗೊಳ್ಳುವ ಮುನ್ನ ಚರ್ಚೆ ನಡೆಸಬೇಕಿದ್ದು, ಏಕಪಕ್ಷೀಯವಾಗಿ ಈ ಶಾಸನ ಜಾರಿಗೆ ಮುಂದಾಗಿವುದು ಚಾಲಕರಿಗೆ ಸಾಕಷ್ಟು ಸಮಸ್ಯೆ ಉಂಟು ಮಾಡಲಿದೆ ಎಂದು ಕಿಡಿ ಕಾರಿದರು.


Spread the love

About Karnataka Junction

[ajax_load_more]

Check Also

ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಕೊರವಿ ಗ್ರೀನ್ ಸಿಟಿ’ ಭೂಮಿ ಪೂಜೆ ಸಮಾರಂಭ

Spread the loveಹುಬ್ಬಳ್ಳಿ : ನಗರದ ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ಗರಗ …

Leave a Reply

error: Content is protected !!