ಹುಬ್ಬಳ್ಳಿ; ನಗರದ ಕ್ಲಬ್ ರೋಡ್ ನಲ್ಲಿರುವ ಹುಬ್ಬಳ್ಳಿ ಜಿಮ್ ಖಾನ ಕ್ಲಬ್‌ನಲ್ಲಿ ಸುಮಾರು 60 ದಿನಗಳಿಂದ ನಡೆಯುತ್ತಿದ್ದ ಜಿಮ್ ಖಾನ ಬ್ಯಾಡ್‌ಮಿಂಟನ್ ಪ್ರೀಮಿಯರ್ ಲೀಗ್ (ಜಿಪಿಎಲ್) 10ನೇ ಆವೃತ್ತಿಯಲ್ಲಿ ಚೇತನ್ ಯಾದವ ನಾಯಕತ್ವದ ಪ್ಯಾಬ್ 12 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.ಫೈನಲ್ ಪಂದ್ಯಾಂಟದಲ್ಲಿ ಟಾಪ್ ಸೀಡ್ ಮತ್ತು ಪ್ಯಾಬ್ 12 ತಂಡದ ನಡುವೆ ನಡೆದ ತುರುಸಿನ ಪಂದ್ಯಾಟದಲ್ಲಿ 4-3 ರಲ್ಲಿ ಟಾಪ್ ಸೀಡ್ ಎದುರು ಗೆಲುವು ಸಾಧಿಸಿತು.ಈ ಪಂದ್ಯಾವಳಿಗಳ ಅತ್ಯುತ್ತಮ ಆಟಗಾರರಾಗಿ ಎ1 ವಿಭಾಗದಲ್ಲಿ ಶಿಯಾಬ್, ಎ ವಿಭಾಗದಲ್ಲಿ ರವಿ ಬೆಂತೂರು, ಬಿ1 ವಿಭಾಗದಲ್ಲಿ ಮನೀಷಾ ಠಕ್ಕರ್, ಬಿ2 ವಿಭಾಗದಲ್ಲಿ ಅಮಿತ್ ಬೇತಾಳ, ಬಿ3 ವಿಭಾಗದಲ್ಲಿ ಡಾ. ಹರ್ಷಾ ಯಾಲಗಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಉದಯೋನ್ಮುಖ ಕ್ರಿಕೇಟ್ ಆಟಗಾರರಾದ ಕುಮಾರಿ ರಿಮ್ ಜಿಮ್ ಶುಕ್ಲಾ ಮತ್ತು ಮಾಧವ ಎಸ್. ಧಾರವಾಡಕರ್ ಅವರಿಗೆ ಪ್ರೋತ್ಸಾಹ ಧನ ನೀಡಿ ಸತ್ಕರಿಸಲಾಯಿತು.
ಉದ್ಯಮಿ ವಿ.ಎಸ್.ವಿ. ಪ್ರಸಾದ್ ವಿಜೇತರಿಗೆ ಬಹುಮಾನ ವಿತರಿಸಿದರು. ಅತಿಥಿಗಳಾಗಿ ಆಗಮಿಸಿದ ಜಿಮ್ ಖಾನ ಕ್ಲಬ್‌ನ ಅಧ್ಯಕ್ಷರಾದ ವಿನಾಯಕ ಆಕಳವಾಡಿ, ವಿಷ್ಣು ಮೆಹರವಾಡೆ, ವೀರಣ್ಣ ಸವಡಿ ಮತ್ತು ಶ್ರೀಮತಿ ಅಂಜನಾ ಬಸವಗೌಡರ ಉಪಸ್ಥಿತರಿದ್ದರು. ಜಿಪಿಎಲ್‌ನ ಸಂಯೋಜಕರಾದ ಶ್ರೀ ಬಸವರಾಜ ಉಳ್ಳಾಗಡ್ಡಿಮಠ ಪ್ರಾಸ್ತಾವಿಕ ಭಾಷಣ ಮಾಡಿದರು ಹಾಗೂ ಉದಯ ಬಾಡಕರ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.
Tags #cricket #dharwad #india #karnataka #trending #trend #animal #god #sports
Check Also
ಪಕ್ಷೇತರ ಅಭ್ಯರ್ಥಿ ಜಿ ಜಿ ದ್ಯಾವನಗೌಡ್ರ ಕಣದಲ್ಲಿ ಮುಂದುವರೆಯಲು ನಿರ್ಧಾರ ?
Spread the loveಹುಬ್ಬಳ್ಳಿ: .ಶಿಗ್ಗಾವ ಸವಣೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆದಿದ್ದು ಯಾವುದೇ …