Breaking News

ಮಹದಾಯಿ ಯೋಜನೆ ಹಿನ್ನಡೆಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ: ಬೊಮ್ಮಾಯಿ

Spread the love

ಹುಬ್ಬಳ್ಳಿ

ಟ್ರಿಬ್ಯುನಲ್ ಗೆ ಹೋಗುವ ಅವಶ್ಯಕತೆ ಇರಲಿಲ್ಲ ಮನಮೋಹನ್ ಸಿಂಗ್ ಅವಧಿಯಲ್ಲಿ ಟ್ರಿಬ್ಯುನಲ್ ಮಾಡಿದ್ದು ಕಾಂಗ್ರೆಸ್ ಸರ್ಕಾರ.ಇದರಿಂದಾಗಿ ಯೋಜನೆ ಎಂಟು – ಹತ್ತು ವರ್ಷ ತಡವಾಯಿತು.ಮಹದಾಯಿ ವಿಚಾರದಲ್ಲಿ ದೊಡ್ಡ ಅಪರಾಧ ಮಾಡಿದ್ದು ಕಾಂಗ್ರೆಸ್.ಟ್ರಿಬ್ಯುನಲ್ ನಲ್ಲಿ ತಾವೇ ಬರೆದುಕೊಟ್ಟಿದ್ದಾರೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು.ಮಹದಾಯಿಯಿಂದ ಮತ್ತು ಮಲಪ್ರಭಾ ನಡುವೆ ಇಂಟರ್ ಲಿಂಕಿಂಗ್ ಕಾಲುವೆ ಮಾಡಿದ್ದೆವು .ನಾವು ಮಾಡಿದ್ದ ಇಂಟರ್ ಲಿಂಕಿಂಗ್ ಕಾಲುವೆಗೆ ಕಾಂಗ್ರೆಸ್ ನವರು ಗೋಡೆ ಕಟ್ಟಿದರು ಕಾಲುವೆಯಲ್ಲಿ ಗೋಡೆ ಕಟ್ಟಿದ ಅಪಖ್ಯಾತಿ ಕಾಂಗ್ರೆಸ್ ದು ನಾವು ಕಾಲುವೆ ಮಾಡಿದರೆ, ಇವರು ಗೋಡೆ ಕಟ್ಟಿದರು ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಇದಕ್ಕೆ ಸಂಪೂರ್ಣ ವಿರೋಧ ಮಾಡಿತು.ಗೋವಾದಲ್ಲಿ ಬಿಜೆಪಿ ಸರ್ಕಾರವಿದ್ದಾಗಲೇ ಡಿಪಿಆರ್‌ ಗೆ ಅನುಮತಿ ಪಡೆಯಲಾಗಿತ್ತು ಹಾಗೂ ಐದು ವರ್ಷ ಅಧಿಕಾರದಲ್ಲಿದ್ದರೂ ಡಿಪಿಆರ್ ಗೆ ಅನುಮತಿ ಪಡೆಯಲಾಗಿದ್ದಿಲ್ಲ .ಡಿಪಿಆರ್ ಅನುಮತಿ ಸಿಕ್ಕಿದ್ದು, ಸದ್ಯ ಪರಿಸರ ಇಲಾಖೆಯಲ್ಲಿದೆ ಪರಿಸರ ಇಲಾಖೆಯವರು ಕೆಲ ಮಾಹಿತಿ ಕೇಳಿದ್ದಾರೆ .ರಾಜ್ಯ ಸರ್ಕಾರ ಮಾಹಿತಿ ಕೊಡಲಿ ನಾವು ಸಹ ಪರಿಸರ ಇಲಾಖೆ ಮೇಲೆ ಒತ್ತಡ ಹೇರುತ್ತೇವೆ ಪರಿಸರ ಇಲಾಖೆ ಅನುಮತಿ ಪಡೆಯದೇ ಟೆಂಡರ್ ಪ್ರಕ್ರಿಯೆ ಮಾಡುವ ಕೆಲಸ ಮಾಡಿದ್ದಾರೆ.ಗೋವಾದವರು ಈಗ ಕೋರ್ಟ್ ಗೆ ಹೋಗಿದ್ದಾರೆ ರಾಜ್ಯ ಸರ್ಕಾರ ಕೋರ್ಟ್ ನಲ್ಲಿ ಸಮರ್ಥ ವಾದ ಮಾಡುತ್ತಿಲ್ಲ. ಕೃಷ್ಣ ಯೋಜನೆ, ಮೇಕೆದಾಟು ಸೇರಿ ಎಲ್ಲ ನೀರಾವರಿ ಯೋಜನೆ ವಿಚಾರದಲ್ಲೂ ಸರ್ಕಾರದಿಂದ ನಿರ್ಲಕ್ಷ್ಯಮಾಡುತ್ತಿದೆ ಈ ಸರ್ಕಾರ ಬಂದ ಮೇಲೆ ನಯಾ ಪೈಸೆ ಹಣ ಬಿಡುಗಡೆ ಮಾಡಿಲ್ಲ.ಗೋಡೆ ಕಟ್ಟಿದ ಬಗ್ಗೆ, ಟ್ರಿಬ್ಯುನಲ್ ಮಾಡಿದ ಬಗ್ಗೆ ಮೊದಲು ಅವರು ಉತ್ತರ ಕೊಡಲಿ ಎಂದು ಹೇಳಿದರು

*ಮೋದಿ ಅವರಿಗೆ ಎರಡು ನಾಲಿಗೆ ಎಂದು ಸಿದ್ದರಾಮಯ್ಯ ಆರೋಪ ವಿಚಾರ*

ಪ್ರಧಾನಿ ಮೋದಿಯವರು ನುಡಿದಂತೆ ನಡೆದಿದ್ದಾರೆ ಸುಳ್ಳು ಮತ್ತು ಭ್ರಷ್ಟಾಚಾರ ಕಾಂಗ್ರೆಸ್ ನ ಗಂಗೋತ್ರಿ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ನಿರ್ಣಯ ಅಂಗೀಕಾರ ಮಾಡಿದ್ದಾರೆ ನಾವು ಕೇಂದ್ರ ಸರ್ಕಾರದ ಪರ ನಿರ್ಣಯ ಅಂಗೀಕರಿಸಿದ್ದೇವೆ ಎರಡು ಜನರ ಮುಂದೆ ಹೋಗುತ್ತೆ ಎಂದರು.

*ಎನ್ ಡಿಎ ಸರ್ಕಾರದ ಅನ್ಯಾಯದ ಕುರಿತು ಶ್ವೇತಪತ್ರ ಬಿಡುಗಡೆ ವಿಚಾರ*

ನಾವು ಯುಪಿಎ ಸರ್ಕಾರ ಮಾಡಿದ ಅನ್ಯಾಯದ ಕುರಿತು ಶ್ವೇತಪತ್ರ ಬಿಡುಗಡೆ ಮಾಡುತ್ತೇವೆ ಎಂದು ಬೊಮ್ಮಾಯಿಯವರು ಹೇಳಿದರು.


Spread the love

About Karnataka Junction

    Check Also

    ಬ್ಯಾಂಕ್ ವಿರುದ್ಧ ಕಾನೂನು ಕ್ರಮ: ಜಿಲ್ಲಾಧಿಕಾರಿ ದಿವ್ಯ ಪ್ರಭು ಎಚ್ಚರಿಕೆ

    Spread the loveಧಾರವಾಡ :ರಾಜ್ಯ ಸರಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಬರ ಪರಿಹಾರ, ವಿವಿಧ ಯೋಜನೆಗಳ …

    Leave a Reply

    error: Content is protected !!