ಹುಬ್ಬಳ್ಳಿ: ಕರ್ನಾಟಕ ರಾಜ್ಯ ಭಾರತೀಯ ಜನತಾ ಪಕ್ಷದ ಮಾನ್ಯ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಇವರನ್ನು ಖ್ಯಾತ ಉದ್ದಿಮೆದಾರರುಗಳಾಗಿರುವ ಬ್ರಿಜ ಮೋಹನ ಸ್ವಾಮಿಸಾ ಖೋಡೆ ಇವರ ನೇತೃತ್ವದಲ್ಲಿಎ.ಬಿ.ಎಸ್.ಎಸ್.ಕೆ.ಸಮಾಜದ ಪರವಾಗಿ ಭಾ.ಜ.ಪ. ರಾಜ್ಯ ಕಾರ್ಯಾಲಯದಲ್ಲಿ ಭೇಟಿಯಾಗಿ,ನಮ್ಮ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ, ಕರ್ನಾಟಕ ಪ್ರಾಂತೀಯ ಸಭಾದ ಗೌರವಾಧ್ಯಕ್ಷರಾದ, ಬಾಗಲಕೋಟೆಯ ನಾರಾಯಣಸಾ ಭಾಂಡಗೆ ಅವರನ್ನು,ಭಾರತ ಸರಕಾರದ ರಾಜ್ಯಸಭೆಗೆ , ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಲು, ಭಾರತೀಯ ಜನತಾ ಪಕ್ಷದ ಪರವಾಗಿ ನಿರ್ಣಯ ತೆಗೆದುಕೊಂಡಿದ್ದಕ್ಕಾಗಿ ಶುಭ ಕೋರಲಾಯಿತು.ಅದೇ ರೀತಿ ನಮ್ಮ ಎಸ್. ಎಸ್. ಕೆ. ಸಮಾಜದ ಮುಖಂಡರು ಮಾಜಿ ವಿಧಾನ ಪರಿಷತ್ ಸದಸ್ಯರಾದ ನಾರಾಯಣಸಾ ಭಾಂಡಗೆ ಇವರನ್ನು, ಭಾರತೀಯ ಜನತಾ ಪಕ್ಷದ ಪರವಾಗಿ ರಾಜ್ಯಸಭಾ ಸ್ಥಾನ ಲಭಿಸಿದ್ದಕ್ಕಾಗಿ, ಎ.ಬಿ.ಎಸ್.ಎಸ್.ಕೆ. ಸಮಾಜದ ಪ್ರಮುಖರಾದ ಶ್ರೀ ಬ್ರಿಜ್ ಮೋಹನ ಸ್ವಾಮಿಸಾ ಖೋಡೆ ಯವರು ಸತ್ಕರಿಸಿ, ಶುಭ ಕೋರಿದರು.ಈ ಸಂದರ್ಭದಲ್ಲಿ ಎ. ಬಿ.ಎಸ್. ಎಸ್. ಕೆ. ಸಮಾಜದ ಸದಸ್ಯರಾದ ಅಶೋಕ ಶಂಕರಸಾ ಹಬಿಬ, ಹುಬ್ಬಳ್ಳಿ ಧಾರವಾಡ ಎಸ್. ಎಸ್. ಕೆ. ಸಮಾಜದ ಮಾಜಿ ಮುಖ್ಯ ಧರ್ಮದರ್ಶಿಗಳಾದ ನೀಲಕಂಠಸಾ ಪಿ.ಜಡಿ, ಹುಬ್ಬಳ್ಳಿ ಧಾರವಾಡ ಎಸ್. ಎಸ್. ಕೆ. ಸಮಾಜದ ಉಪ ಮುಖ್ಯ ಧರ್ಮದರ್ಶಿಗಳಾದ ಭಾಸ್ಕರ ಎನ್. ಜಿತೂರಿ, ವರ್ಲ್ಡ್ ಸ್ಕ್ವೇರ್ ಸಂಸ್ಥೆಯ ಮಾಲೀಕರಾದ ಶ್ರೀ ಯೋಗೇಶ ಹಬಿಬ ಮತ್ತಿತರರು ಉಪಸ್ಥಿತರಿದ್ದರು .
Tags #dharwad #india #karnataka #trending #trend #animal #god
[ajax_load_more]Check Also
ಹುಬ್ಬಳ್ಳಿ ಹಳೇ ನಿಲ್ದಾಣ ಶೀಘ್ರದಲ್ಲಿಯೇ ಹೊಸ ಗೆಟಪ್ ನೊಂದಿಗೆ ತಮ್ಮ ಸೇವೆಗೆ
Spread the loveಹುಬ್ಬಳ್ಳಿ: ಹುಬ್ಬಳ್ಳಿ ನಗರದ ಮಹತ್ವದ ಹೆಗ್ಗುರುತುಗಳಲ್ಲಿ ಒಂದಾದ ಹಳೆ ಬಸ್ ನಿಲ್ದಾಣದ ಕಾಮಗಾರಿ ಬಹುತೇಕ ಪೂರ್ಣಣಗೊಂಡಿದೆ. ಉದ್ಘಾಟನೆಗೆ …