Breaking News

ತಕ್ಷಣ ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ; ಹೈಕೋರ್ಟ್ ಚಾಟಿಗೆ ಬೆದರಿದ ನೌಕರರು, ಕರ್ತವ್ಯಕ್ಕೆ ಹಾಜರು

Spread the love

ಹುಬ್ಬಳ್ಳಿ  : ಆರನೇ ವೇತನ ಆಯೋಗ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದಿಂದಾಗಿ ಏ.೭ ರಿಂದ ವ್ಯತ್ಯಯವಾಗಿದ್ದ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ದಿನ ಕಳೆದಂತೆ ಸುಧಾರಿಸತೊಡಗಿದೆ.
ಇಂದು ೧೨ಗಂಟೆಯ ವೇಳೆಗೆ ಗ್ರಾಮಾಂತರ ವಿಭಾಗದ ಮತ್ತು ನಗರಸಾರಿಗೆ ವಿಭಾಗದ ಡಿಪೋಗಳಿಂದ ೩೦೦ಕ್ಕೂ ಹೆಚ್ಚು ಬಸ್ಸುಗಳು ಸಂಚಾರ ಆರಂಭಿಸಿವೆ. ನಿನ್ನೆ ಈ ವೇಳೆಗೆ ೨೦೦ರಷ್ಟು ಬಸ್ಸುಗಳು ಸಂಚರಿಸುತ್ತಿದ್ದವು. ದಿನದಿಂದ ದಿನಕ್ಕೆ ಕರ್ತವ್ಯಕ್ಕೆ ಮರಳುತ್ತಿರುವ ನೌಕರರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮಧ್ಯಾಹ್ನದ ನಂತರ ಬಹಳಷ್ಟು ಬಸ್ಸುಗಳನ್ನು ರಸ್ತೆಗಿಳಿಸಲಾಗುತ್ತದೆ. ಸಂಜೆಯ ವೇಳೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರುವ ವಿಶ್ವಾಸವಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು ಮುಷ್ಕರದ ಆರಂಭದಲ್ಲಿ ಸಿಬ್ಬಂದಿ ಹೆಚ್ಚಿನ ಪ್ರಮಾಣದ ಸಿಬ್ಬಂದಿ ಗೈರು ಹಾಜರಾಗಿದ್ದರಿಂದಾಗಿ ಕಡಿಮೆ ಸಂಖ್ಯೆಯ
ಬಸ್ಸುಗಳು ಸಂಚರಿಸುತ್ತಿದ್ದವು. ಹಾಗಾಗಿ ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಪ್ರಮುಖ ಊರುಗಳಿಗೆ ಬಸ್ಸುಗಳು ಸಂಚರಿಸುತ್ತಿದ್ದವು. ಇದೀಗ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದೆ.


Spread the love

About Karnataka Junction

    Check Also

    ಸಿಐಡಿ ಡಿಜಿಪಿ ಡಾ.ಎ.ಎಂ.ಸಲೀಂ ಅಂಜಲಿ ,ನೇಹಾ ಕೊಲೆ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹ

    Spread the loveಹುಬ್ಬಳ್ಳಿ: ಪ್ರಿಯಕರನಿಂದಲೇ ಕೋಲೆಗೀಡಾಗಿದ್ದ ನೇಹಾ ನಿರಂಜನ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ಒಂದು …

    Leave a Reply

    error: Content is protected !!