ಕಲಾ ನಕ್ಷತ್ರಗಳು ಕಲಾ ಮುತ್ತುಗಳಾಗಿ ಬೆಳಗಲಿ ಡಾ. ಬಾಲಾಜಿ

Spread the love

ಹುಬ್ಬಳ್ಳಿ:
ಶೈಲಾಶ್ರೀ ಮಂಜುನಾಥ್ ಫೈನ್ ಆರ್ಟ್ಸ್ ಅಂಡ್ ಎಜುಕೇಶನ್ ಸಂಸ್ಥೆ ಬೈರಿದೇವರಕೊಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಸಂಸ್ಥೆಯ 16ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಕಲಾ ನಕ್ಷತ್ರಗಳ ಸಮ್ಮೇಳನ 2024 ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪನ್ಯಾಸಕರಾದ ಡಾ. ಬಾಲಾಜಿ ಸಾವಳೇಕರ ಮಾತನಾಡಿ ಒಬ್ಬ ವ್ಯಕ್ತಿ ಯಶಸ್ಸು ಗಳಿಸ ಬೇಕಾದರೆ ಅವನು ಬಾಲ್ಯದಿಂದಲೇ ಪರಿಶ್ರಮ, ತಾಳ್ಮೆ, ಶ್ರದ್ಧೆ, ನಿಯಮಿತ ಅಭ್ಯಾಸಗಳನ್ನೆ ಮೆಟ್ಟಿಲನ್ನಾಗಿ ಮಾಡಿಕೊಂಡು ಶೈಲಶ್ರೀ ಮಂಜುನಾಥ್ ಫೈನ್ ಆರ್ಟ್ಸ್ ಮತ್ತು ಎಜುಕೇಶನ್ ಸಂಸ್ಥೆ ಅಂತಹ ಪರಿಪೂರ್ಣ ವಿವಿಧ ಪ್ರಕಾರದ ಕಲೆ ಜ್ಞಾನ ಹೊಂದಿದ ಶಿಕ್ಷಕರು ದೊರೆತರೆ ಮಗುವಿನಲ್ಲಿ ಅಡಗಿರುವ ಸೂಕ್ತ ಕಲಾ ಪ್ರತಿಭೆಯನ್ನು ಹೊರ ತಂದು ನಾಡು, ದೇಶದಾದ್ಯಂತ ಪ್ರದರ್ಶಿಸಿ ಮನ್ನಣೆಯನ್ನು ಗಳಿಸಬಹುದು. ಇದರಿಂದ ನಾಡಿನ ಕೀರ್ತಿ ಹೆಚ್ಚಿಸಿದಂತಾಗುತ್ತದೆ ಎಂದು ಹೇಳಿದರು.16 ವರ್ಷಗಳಿಂದ ಹುಬ್ಬಳ್ಳಿ ಮಹಾನಗರದಲ್ಲಿ ಮಕ್ಕಳ ಸಂಸ್ಕೃತಿಕ, ಕಲೆ, ಸಾಹಿತ್ಯ, ಮತ್ತು ಶಿಕ್ಷಣದ ಬಗ್ಗೆ ಸಂಸ್ಥೆಯು ನಿರಂತರ ಶ್ರಮಿಸುತ್ತಿದ್ದು. ಕಲೆಯ ಹಲವಾರು ಪ್ರಕಾರಗಳಾದ ಜಾನಪದ ನೃತ್ಯ, ಜಗ್ಗ ಹಲಗಿ, ಕೋಲಾಟ, ಪಶ್ಚಿಮಾತ್ಯ ನೃತ್ಯ, ಆಧುನಿಕ ನೃತ್ಯ, ಭರತನಾಟ್ಯ, ಜೋಗತಿ ನೃತ್ಯ, ಲಂಬಾಣಿ ನೃತ್ಯಗಳಿಗೆ ನೃತ್ಯ ಸಂಯೋಜನೆ ಮಾಡಿ ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಮತ್ತು ಪೋಷಕರಿಗೆ ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಉಪಯುಕ್ತ ಪೋಷಕಾಂಶ ಅಡುಗೆ ಸ್ಪರ್ಧೆ, ವೇಷ ಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು,
ಇದೇ ಸಂದರ್ಭದಲ್ಲಿ ಕಲಾ ನಕ್ಷತ್ರ ಪ್ರಶಸ್ತಿ ಪುರಸ್ಕೃತರಾದ ಪ್ರಣತಿ, ಸಮನ್ವಿತಾ, ಮಂಜುನಾಥ, ಅಧೈತ, ಅರ್ಜುನ, ಚೈತನ್ಯ ಮತ್ತು ಅದ್ಯನ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನೂರಾರು ಮಕ್ಕಳು ದೇಶ ಭೂಷಣ, ನೃತ್ಯ, ಗಾಯನ, ಡೊಳ್ಳು ಕುಣಿತ, ಜಗ್ಗಲಗಿ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಸಂಗೀತದ ರಸದೌತನವನ್ನು ಊಣಪಡಿಸಿದರು.
ವಿಷ್ಣು ಸ್ವಾಗತಿಸಿದರು, ಅಂಕಿತ ಪ್ರಸ್ತಾವಿಕವಾಗಿ ಮಾತನಾಡಿದರು ನಾಗರಾಜ ಬಾಗೂನವರ ನಿರೂಪಿಸಿದರು.


Spread the love

Leave a Reply

error: Content is protected !!