ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿನ ಏರ್ ಪೋರ್ಟ್ ನಲ್ಲಿ ಮಗುವೊಂದನ್ನ ಮಾತನಾಡಿಸಿ ಖುಷಿ ಪಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯಾನವರು ಅತ್ಯಂತ ಲವಲವಿಕೆಯಿಂದ ತಮ್ಮ ಸಚಿವ ಸಂಪುಟದ ಸದಸ್ಯರ ಜೊತೆಗೆ ತಡರಾತ್ರಿ ಬೆಂಗಳೂರಿಗೆ ಪಯಣ ಬೆಳೆಸಿದರು.ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳಿದ ಸಿಎಂ ಸಿದ್ದರಾಮಯ್ಯಾ, ಸಚಿವರ ದಂಡು
ವಿಶೇಷ ವಿಮಾನ ಮೂಲಕ ಪ್ರಯಾಣ ಮಾಡಿದರು.
ಪ್ರಯಾಣ ಮಾಡುವ ಮುನ್ನ ಸಚಿವ ಸಂತೋಷ ಲಾಡ್ ಎತ್ತಿಕೊಂಡಿದ್ದ ಮಗು ಜೊತೆಗೆಕೇಲ ಸಮಯ ಮಗು ಜೊತೆ ಮುದ್ದಾಗಿ ಮಾತನಾಡಿ ಕೇಲ ಸಂತಸ ಪಟ್ಟರು.
ಹೆಣ್ಣು ಮಗು ನೋಡಿ ಖುಷಿ ಪಟ್ಟ ಸಿದ್ದರಾಮಯ್ಯಾ ಅವರ ಖುಷಿಗೆ ಪಾರವೇ ಇರಲಿಲ್ಲ. ಇಡೀ ದಿನ ಮಂಡ್ಯ ಹಾಗೂ ಹಾವೇರಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ನಂತರ ಹುಬ್ಬಳ್ಳಿಗೆ ಆಗಮಿಸಿದ ಸಿದ್ದರಾಮಯ್ಯಾ ನವರನ್ನ ಬೆಂಗಳೂರಿಗೆ ತೆರಳುವಾಗ ಅನೇಕ ಕಾರ್ಯಕರ್ತರು ಮುಖಂಡರು ಆಗಮಿಸಿದ್ದರು ಆದರೆ ಯಾವುದೇ ರೀತಿಯ ಕಾರ್ಯಕರ್ತರ ಜೊತೆಗೆ ಬೆರೆಯಲಿಲ್ಲ. ನಂತರ ಕೇಲ ವಿಐಪಿ ಲಾಂಚ್ ನಲ್ಲಿ ವಿಶ್ರಾಂತಿ ಪಡೆದು ಸಚಿವರಾದ ಜಿ.ಪರಮೇಶ್ವರ, ಮಧು ಬಂಗಾರಪ್ಪ, ಎಚ್ ಕೆ ಪಾಟೀಲ್, ಬೈರತಿ ಸುರೇಶ, ದಿನೇಶ ಗುಂಡೂರಾವ್ ಸಿಎಂ ಜೊತೆಗೆ ಪಯಣ ಬೆಳೆಸಿದರು
