ಅಭಿವೃದ್ಧಿ ಎಲ್ಲಿ ಆಗಿದೆ ಸಚಿವರೇ ಈ ಆರು ಪ್ರಶ್ನೆಗಳಿಗೆ ಉತ್ತರ ಕೊಡಿ- ರಾಜು ಸಾ ನಾಯಕವಾಡಿ

Spread the love

ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ ಸೇರಿದಂತೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆಗಿದೆ ಎನ್ನುವ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಯಾವ ಲೆಕ್ಕದಲ್ಲಿ ಅಭಿವೃದ್ಧಿ ಮಾಡಿದ್ದಾರೆ ಎಂಬ ಬಗ್ಗೆ ಬಹಿರಂಗ ಪಡಿಸಲು ಯುವ ನಾಯಕ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶರದ್ ಚಂದ್ರ ಪವಾರ ಬಣದ
ಧಾರವಾಡ ಲೋಕಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ರಾಜು ಸಾ ನಾಯಕವಾಡಿ ಸಚಿವರಿಗೆ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಭಾನುವಾರ ಹೇಳಿಕೆ ನೀಡಿರುವ ಅವರು ತಾವು ಓರ್ವ ಪ್ರಭಾವಿ ನಾಯಕರು ಜೊತೆಗೆ ಹಿರಿಯ ಸಚಿವರು ಕಳೆದ
20 ವರ್ಷಗಳ ಅಧಿಕಾರದಲ್ಲಿ ಇದ್ದವರು ಸಾಕಷ್ಟು ಜನಪ್ರಿಯತೆ ಹೊಂದಿದವರು ಕಾರಣ ಈ ಅವಧಿಯಲ್ಲಿ ತಾವು ಪ್ರಚಾರ ಮಾಡಬಾರದು ತಮ್ಮ ಕೆಲಸ ಪ್ರಚಾರಕ್ಕೆ ಬರಬೇಕಿತ್ತು ಆದರೆ ಎಲ್ಲಿ ಅಭಿವೃದ್ಧಿ ಕಾಮಗಾರಿಗಳು. ಇನ್ನು ಹುಬ್ಬಳ್ಳಿ ಧಾರವಾಡ ಅವಳಿನಗರ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 1500 ಕೋಟಿ ಅನುದಾನ ಬಂದಿದ್ದು ಇನ್ನು ನಗರಗಳು ಧೂಳು ಮುಕ್ತ ಆಗಿಲ್ಲ ಯಾಕೆ ಈ ಬಗ್ಗೆ ಮೊದಲು ಮಾತನಾಡಿ, ಇದರ ಜೊತೆಗೆಎಲ್ಲ ಕಾಮಗಾರಿಗಳ ಸರಿಯಾಗಿ ನಿಗದಿತ ಸಮಯದಲ್ಲಿ ಆಗತಾ ಇಲ್ಲ ಇದರಿಂದ ಜನರಿಗೆ ತೀವ್ರ ತೊಂದರೆ ಆಗತಾ ಇದೆ ಇದಕ್ಕೆ ಉತ್ತರ ಕೊಡಿ.
ಇನ್ನು ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ 24/7 ನೀರು ಸರಬರಾಜು ಅಂತಾ ಹೇಳಿ 20 ವರ್ಷಗಳು ಆದವು ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಕೇವಲ ಕುಡಿಯುವ ನೀರಿಗಾಗಿ ಕೋಟ್ಯಾಂತರ ಹಣ ವ್ಯಯ ಮಾಡಲಾಗಿದೆ ಎನ್ನುವ ತಾವು ಇದಕ್ಕೆ ಮೊದಲು ಉತ್ತರ ಕೊಡಿ ನೀರಿನ ಸಮಸ್ಯೆ ಏನು ಅಂತಾ ಮೊದಲು ತಿಳಿದುಕೊಳ್ಳಿ ಐದು ಹಾಗೂ ಕೊನೆಯ ಪ್ರಶ್ನೆ ಲಕ್ಷಾಂತರ ಯುವಕರಿಗೆ ಉದ್ಯೋಗದ ಭರವಸೆ ನೀಡಲಾಗಿತ್ತು ಇದುವರೆಗೆ ಸರಿಯಾಗಿ ಉದ್ಯೋಗ ನೀಡಿಲ್ಲ ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಕುರಿತು ಸದನದಗಳಲ್ಲಿ ಧ್ವನಿ ಎತ್ತಾ ಇಲ್ಲ ಸಚಿವರೇ ಈ ಪ್ರಶ್ನೆಗಳಿಗೆ ಉತ್ತರ ಕೊಡಿ ನಿಮ್ಮಿಂದ ಉತ್ತರ ಬಯಸುವೆ ಎಂದಿದ್ದಾರೆ.


Spread the love

Leave a Reply

error: Content is protected !!